Advertisement
ರವಿವಾರ ಮಹಾರಾಷ್ಟ್ರಾದ್ಯಂತ ವ್ಯಾಪಕ ಮಳೆ ಸುರಿದಿದ್ದು, ವಿಶೇಷವೆಂದರೆ, ಪ್ರಸಕ್ತ ಮುಂಗಾರಿನಲ್ಲಿ ಮಳೆ ಕೊರತೆ ಎದುರಿಸಿರುವ ಮರಾಠವಾಡ ಮತ್ತು ವಿದರ್ಭಗಳಲ್ಲೂ ವರುಣನ ಅಬ್ಬರ ಕಂಡುಬಂದಿರುವುದು ಇಲ್ಲಿನ ಜನರಲ್ಲಿ ಮಂದಹಾಸ ಮೂಡಿಸಿದೆ.
Related Articles
Advertisement
ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತಜಮ್ಮು-ಕಾಶ್ಮೀರದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಪ್ರತಿಕೂಲ ಹವಾಮಾನ ಹಿನ್ನೆಲೆ ರವಿವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೂರು ಪ್ರಮುಖ ಬೇಸ್ ಕ್ಯಾಂಪ್‌ಗ್ಳಿಂದ ಹೊರಡಬೇಕಿದ್ದ ಯಾತ್ರಿಕರು ಕ್ಯಾಂಪ್‌ನಲ್ಲೇ ಉಳಿದುಕೊಂಡಿದ್ದಾರೆ. ಅಲ್ಲದೆ ಯಾತ್ರೆಯ ಹಾದಿಯಲ್ಲಿ ದಟ್ಟ ಮಂಜಿನ ಮಳೆ ಉಂಟಾಗುವ ಸಾಧ್ಯತೆಯಿದೆ ಎಂದೂ ಎಚ್ಚರಿಕೆ ನೀಡಲಾಗಿದೆ. ನೇಪಾಳ: ಮೃತರ ಸಂಖ್ಯೆ 113
ಕಳೆದ 2 ವಾರಗಳಿಂದ ನೇಪಾಳದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ಸುರಿದ ಧಾರಾಕಾರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 113ಕ್ಕೇರಿಕೆಯಾಗಿದೆ. 38 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ 77 ಜಿಲ್ಲೆಗಳ ಪೈಕಿ 67ರಲ್ಲಿ
ಮಳೆ ಸಂಬಂಧಿ ದುರಂತಗಳು ಸಂಭವಿಸಿವೆ. ಸಂತ್ರಸ್ತರ ಪರಿಹಾರಕ್ಕೆ ನೆರವಾಗುವಂತೆ ಅಂತಾರಾಷ್ಟ್ರೀಯ ಸಂಸ್ಥೆಗಳಿಗೂ ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.