Advertisement

ಬೀದರಲ್ಲಿ ಶೀಘ್ರ ರೆಡ್‌ ಅಲರ್ಟ್‌?

05:34 PM Apr 04, 2020 | Suhan S |

ಬೀದರ: ದೆಹಲಿಯ ಜಮಾತ್‌ ಕಾರ್ಯಕ್ರಮ ಗಡಿ ಜಿಲ್ಲೆಯಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದು, ಒಂದೇ ಬಾರಿಗೆ 10  ಕೋವಿಡ್ 19 ಪಾಸಿಟಿವ್‌ ಪ್ರಕರಣಗಳ ವರದಿಯಿಂದಾಗಿ ಪ್ರವಾಸೋದ್ಯಮ ನಗರಿ ಬೀದರ ಸಹ “ರೆಡ್‌ ಅಲರ್ಟ್‌’ ವ್ಯಾಪ್ತಿಗೆ ಹೋಗುವ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಕೋವಿಡ್ 19ಗೆ ದೇಶದಲ್ಲಿ ಮೊದಲ ಬಲಿಯಾದ ಕಲಬುರಗಿಗೆ ಬೀದರ ಹೊಂದಿಕೊಂಡಿದ್ದರೂ ಈವರೆಗೆ ಶಂಕಿತರ ಪ್ರಕರಣಗಳು ಹೆಚ್ಚಿದ್ದವಾದರೂ ಒಂದು ಪಾಸಿಟಿವ್‌ ಪ್ರಕರಣ ವರದಿಯಾಗಿರಲಿಲ್ಲ. ಆದರೆ, ಗುರುವಾರ ದೆಹಲಿಯ ಜಮಾತ್‌ ನಿಂದಾಗಿ ಕೊರೊನಾ ಜಿಲ್ಲೆಗೆ ಹೆಮ್ಮಾರಿಯಾಗಿ ಅಪ್ಪಳಿಸಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಪಾಸಿಟಿವ್‌ ವರದಿ ಆಗಿರುವುದು ಮತ್ತಷ್ಟು ಆತಂಕಕ್ಕೆ ಜಿಲ್ಲೆ ಜಾರಿದೆ. ಕೋವಿಡ್ 19 ಹೊತ್ತು ತಂದಿರುವ ಸೋಂಕಿತರರನ್ನು ದೆಹಲಿಯಿಂದ ವಾಪಸ್ಸಾಗುತ್ತಿದ್ದಂತೆ ಅವರ ರಕ್ತ ಮತ್ತು ಗಂಟಲು ದ್ರವ ತಪಾಸಣೆ ಮಾಡಿದ್ದರೇ ಇಂದು ಸೋಂಕು ವ್ಯಾಪಾಸುವ ಆತಂಕವನ್ನು ಎದುರಿಸುವ ಸ್ಥಿತಿ ಬರುತ್ತಿರಲಿಲ್ಲ. ಈ ವಿಷಯದಲ್ಲಿ ಎಡವಿದ ಜಿಲ್ಲಾಡಳಿತ ಅವರಲ್ಲಿ ಲಕ್ಷಣಗಳು ಕಾಣಿಸಿಲ್ಲವೆಂಬ ಕಾರಣಕ್ಕೆ ಕೇವಲ ಅವರನ್ನು ಹೋಂ ಕ್ವಾರಂಟೈನ್‌ ಮಾಡಿ ಆರೋಗ್ಯ ಮೇಲೆ ನಿಗಾ ಇಡುವುದಕ್ಕೆ ಆದ್ಯತೆ ನೀಡಿರುವುದು ಜಿಲ್ಲೆಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಪಾಸಿಟಿವ್‌ ವ್ಯಕ್ತಿಗಳು ಗೃಹ ನಿರ್ಬಂಧದ ಅವಧಿಯಲ್ಲಿ ಬೇಕಾಬಿಟ್ಟಿಯಾಗಿ ಓಡಾಡಿರುವ ಮತ್ತು ಕುಟುಂಬದವರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಸಾಧ್ಯತೆ ಹೆಚ್ಚಿದೆ. ಇನ್ನೂ  ಸೋಂಕಿತ ವ್ಯಕ್ತಿ ಮದುವೆ ಸಮಾರಂಭದಲ್ಲೂ ಭಾಗಿಯಾಗಿದ್ದ ಎಂಬುದು ಬೆಳಕಿಗೆ ಬಂದಿದೆ. ಜತೆಗೆ ಸೋಂಕಿತರ ಟ್ರಾವೆಲ್‌ ಹಿಸ್ಟರಿ ಗುರುತಿಸಿ ಜತೆಯಲ್ಲಿದ್ದವರನ್ನು ಪತ್ತೆ ಹಚ್ಚಬೇಕಿದೆ. ಈ ಅಂಶಗಳಿಂದ ಜಿಲ್ಲೆಯಲ್ಲಿ ಯಾವಾಗ ಬೇಕಾದರೂ ಕೋವಿಡ್ 19 ವ್ಯಾಪಕವಾಗಿ ಸ್ಫೋಟಗೊಳ್ಳಬಹುದು ಎಂಬ ಭೀತಿ ಆವರಿಸಿದೆ.

ಕೋವಿಡ್ 19ಪಾಸಿಟಿವ್‌ ಪತ್ತೆಯಾಗಿರುವ 10 ಜನರು ಸುಮಾರು 100ಕ್ಕೂ ಹೆಚ್ಚು ಜನರೊಂದಿಗೆ ಪ್ರಾಥಮಿಕ ಸಂಪರ್ಕ, ಜತೆಗೆ ದ್ವಿತೀಯ ಸಂಪರ್ಕವುಳ್ಳ ಮಂದಿಯ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದೆ. ಈವರೆಗೆ 82 ಜನ ಪ್ರಾಥಮಿಕ ಸಂಬಂಧಗಳನ್ನು ಜಿಲ್ಲಾಡಳಿತ ಗುರುತಿಸಿ ಎಲ್ಲರನ್ನು ಓಲ್ಡ್‌ ಸಿಟಿಯ ನೂರು ಹಾಸಿಗೆ ಆಸ್ಪತ್ರೆಯ ಐಸೋಲೇಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಬೆಳವಣಿಗೆಯಿಂದ ಬೀದರ ರೆಡ್‌ ಅಲರ್ಟ್‌ ಆಗುವ ಮುನ್ಸೂಚನೆ ಕಾಣುತ್ತಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೋಂಕು ವ್ಯಾಪಿಸದಂತೆ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಜಿಲ್ಲೆಯಲ್ಲಿ 10 ಕೋವಿಡ್ 19ಪಾಸಿಟಿವ್‌ ಪ್ರಕರಣಗಳು ವರದಿಯಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 82 ಜನರನ್ನು ಗುರುತಿಸಿ ಓಲ್ಡ್‌ಸಿಟಿ ಆಸ್ಪತ್ರೆಯಲ್ಲಿ ಐಸೋಲೇಟ್‌ ಮಾಡಲಾಗಿದೆ. ಸೋಂಕಿತರು ಪತ್ತೆಯಾಗಿರುವ ಬೀದರನ ಓಲ್ಡ್‌ಸಿಟಿ, ಬಸವಕಲ್ಯಾಣ ಮತ್ತು ಮನ್ನಾಎಖೆಳ್ಳಿ ಗ್ರಾಮ ಸೇರಿ ಈ ಮೂರು ಕಡೆಗಳಲ್ಲಿ 3 ಕಿ.ಮೀ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶ ಎಂದು ಘೋಷಿಸಲಾಗಿದೆ. ಇನ್ನೂ ರೆಡ್‌ ಅಲರ್ಟ್‌ ಘೋಷಣೆ ಆಗಿಲ್ಲ. . ಡಾ| ಎಚ್‌.ಆರ್‌ ಮಹಾದೇವ, ಡಿಸಿ.

Advertisement

 

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next