Advertisement

Reusable Rockets: ಮರುಬಳಕೆ ರಾಕೆಟ್‌ ಯಶಸ್ಸು… ಬಾಹ್ಯಾಕಾಶ ಕ್ಷೇತ್ರದ ಸಂಚಲನ!

10:50 PM Aug 28, 2024 | Team Udayavani |

ಮರುಬಳಕೆ ರುಮಿ-1 ರಾಕೆಟ್‌ ಉಡಾವಣೆ ಯಶಸ್ಸಿನ ಬಳಿಕ ಮತ್ತಷ್ಟು ಸಂಶೋಧನೆಗಳು ಸಾಧ್ಯ

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ತನ್ನ ಎಸ್‌ಎಸ್‌ಎಲ್‌ವಿ ಸಣ್ಣ ರಾಕೆಟ್‌ ತಂತ್ರಜ್ಞಾನವನ್ನು ಖಾಸಗಿಗೆ ಮುಕ್ತಗೊಳಿಸಿದ ಬೆನ್ನಲ್ಲೇ, ತಮಿಳುನಾಡು ಮೂಲದ ಸ್ಟಾರ್ಟ್‌ಅಪ್‌ ಸ್ಪೇಸ್‌ಝೋನ್‌ ಇಂಡಿಯಾ ತಾನೇ ತಯಾರಿಸಿದ “ಮರುಬಳಕೆ ರಾಕೆಟ್‌’ ಬಳಸಿ, ಉಪಗ್ರಹಗಳನ್ನು ಯಶಸ್ವಿಯಾಗಿ ಭೂಮಿಯ ಉಪ ಕಕ್ಷೆಗೆ ಇತ್ತೀಚೆಗೆ ತಲುಪಿಸಿದೆ. ಮರುಬಳಕೆ ರಾಕೆಟ್‌ “ರುಮಿ-1′ ಉಡಾವಣೆ ಹಿನ್ನೆಲೆಯಲ್ಲಿ ಏನಿದು ಮರುಬಳಕೆ ಹೈಬ್ರಿಡ್‌ ರಾಕೆಟ್‌, ಉಪ ಕಕ್ಷೆ, ಇವುಗಳ ಉಡಾವಣೆ ಹೇಗೆ ಎಂಬ ಕುತೂಹಲಕಾರಿ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಏನಿದು ಮರು ಬಳಸಬಹುದಾದ ರಾಕೆಟ್‌?
ರಾಕೆಟ್‌ಗಳು ಒಮ್ಮೆ ಉಡಾವಣೆ ಮಾಡಿದ ಬಳಿಕ ಅವು ಬಾಹ್ಯಾಕಾಶದಲ್ಲಿ ಉರಿದು ಹೋಗುತ್ತವೆ ಅಥವಾ ಭೂಮಿಗೆ ಮರಳದೇ ಅÇÉೇ ಉಳಿದುಕೊಳ್ಳುತ್ತವೆ. ಹೀಗಾಗಿ ಮತ್ತೂಂದು ಉಡಾವಣೆಗೆ ಹೊಸ ರಾಕೆಟ್‌ ತಯಾರು ಮಾಡಬೇಕಾಗುತ್ತದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ ಬಾಹ್ಯಾಕಾಶ ಸಂಶೋಧನೆ ಹೆಚ್ಚು ದುಬಾರಿ ಎನಿಸಿಕೊಂಡಿದೆ. ಇದನ್ನು ತಪ್ಪಿಸು ವುದಕ್ಕಾಗಿ ಒಮ್ಮೆ ಉಡಾವಣೆಯಾದ ರಾಕೆಟನ್ನು ಮತ್ತೆ ಬಳಕೆ ಮಾಡುವತ್ತ ವಿಜ್ಞಾನಿ ಗಳು ಚಿಂತಿಸಿದರು. ರಾಕೆಟ್‌ನ ಬಹುತೇಕ ಭಾಗಗಳನ್ನು ಮತ್ತೆ ಬಳಕೆ ಮಾಡುವಂತಹ ರಾಕೆಟ್‌ಗಳನ್ನು ತಯಾರಿಸಲು ಆರಂಭಿಸಿದರು. ಒಮ್ಮೆ ಉಡಾವಣೆಯಾದ ರಾಕೆಟ್‌ನ ಕೇಂದ್ರಭಾಗ, ಮೇಲು¤ದಿಗಳು ಮರಳಿ ಭೂಮಿಗೆ ಬರುವಂತೆ ಮಾಡಿದರು. ಇವುಗಳನ್ನು ಸಮುದ್ರದಲ್ಲಿ ಬೀಳಿಸಿ, ಮತ್ತೆ ಸಂಗ್ರಹಿಸಿ ಬಳಕೆ ಮಾಡಲಾಗುತ್ತದೆ. ಸಬ್‌ ಆರ್ಬಿಟಲ್‌ ರಾಕೆಟ್‌ ಮರುಬಳಕೆಯಾಗುತ್ತವೆ. ಅದೇ ರೀತಿ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವ ರಾಕೆಟ್‌ಗಳನ್ನು ಸಹ ಮರಳಿ ಭೂಮಿಗೆ ತರುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಮೊದಲ ಹೈಬ್ರಿಡ್‌ ರಾಕೆಟ್‌ ಲಾರಿಯಿಂದ ಲಾಂಚ್‌!
ತಮಿಳುನಾಡು ಮೂಲದ ಸ್ಪೇಸ್‌ಝೋನ್‌ ಇಂಡಿಯಾ ಸಂಸ್ಥೆ ಭಾರತದ ಮೊದಲ ಹೈಬ್ರಿಡ್‌ ಮರುಬಳಕೆ ರಾಕೆಟನ್ನು ಉತ್ಪಾದನೆ ಮಾಡಿತ್ತು. ವಾತಾವರಣದ ಅಧ್ಯಯನಕ್ಕಾಗಿ ಈ ರಾಕೆಟನ್ನು ಲಾರಿಯ ಮೇಲಿಟ್ಟು (ಸಂಚಾರಿ ಉಡಾವಣ ವಾಹನ) ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಭೂಮಿಯಿಂದ 35 ಕಿ.ಮೀ. ಎತ್ತರದಲ್ಲಿರುವ ಉಪಕಕ್ಷೆಗೆ ಉಪಗ್ರಹಗಳನ್ನು ಸಾಗಿಸಿ, ಸಮುದ್ರದಲ್ಲಿ ಬಿದ್ದಿತು. ಈ ರಾಕೆಟ್‌ ಕೇವಲ 3.5 ಮೀ. ಉದ್ದವಿದ್ದು, ಇದರ ಉಡಾವಣೆಗೆ ಹೆಚ್ಚಿನ ಶಕ್ತಿಯ ಆವಶ್ಯಕತೆ ಇಲ್ಲ, ಅಲ್ಲದೇ ಸ್ಥಿರವಾಗಿ ನಿಲ್ಲಬೇಕಾದ ಕಟ್ಟಡದ ನೆರವೂ ಬೇಕಿಲ್ಲ. ಹೀಗಾಗಿ ಇಂತಹ ರಾಕೆಟ್‌ಗಳನ್ನು ಸಂಚಾರಿ ವಾಹನ ಗಳನ್ನು ಬಳಸಿ ಸಮುದ್ರದ ದಂಡೆಯಿಂದ ಸುಲಭವಾಗಿ ಉಡಾವಣೆ ಮಾಡ ಬಹುದು. ಇದು ಕೋಟ್ಯಂತರ ರೂ. ಹಣವನ್ನು ಉಳಿಸುತ್ತದೆ. ಹೀಗಾಗಿ ಇಂತಹ ರಾಕೆಟ್‌ಗಳ ಉತ್ಪಾದನೆಗೆ ಹೆಚ್ಚಿನ ಬೇಡಿಕೆ ಇದೆ.

ವೆಚ್ಚ ಮತ್ತು ಇಂಧನದಲ್ಲಿ ಭಾರೀ ಉಳಿತಾಯ
ರುಮಿ-1 ಮಾದರಿಯ ರಾಕೆಟ್‌ಗಳು ಇಸ್ರೋದ ರಾಕೆಟ್‌ಗಳ ವೆಚ್ಚಕ್ಕೆ ಹೋಲಿಸಿದರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗುತ್ತವೆ. ಇವುಗಳು ಉಡಾವಣೆಯಾಗಲು ಘನ ಮತ್ತು ದ್ರವ ಇಂಧನ ಬಳಕೆ ಮಾಡಿಕೊಳ್ಳುತ್ತವೆ. ಮತ್ತೆ ಭೂಮಿಗೆ ಬೀಳುವಾಗ ಬ್ಯಾಟರಿಯಲ್ಲಿ ಶೇಖರಣೆಯಾಗಿರುವ ವಿದ್ಯುತ್ತನ್ನು ಉಪಯೋಗಿಸಿಕೊಳ್ಳುತ್ತವೆ. ಹೀಗಾಗಿ ಹೆಚ್ಚಿನ ಇಂಧನ ತುಂಬಿಸಲು ಬೇಕಾಗುವ ವೆಚ್ಚ ಇಳಿಕೆಯಾಗುತ್ತದೆ. ಇಂತಹ ರಾಕೆಟ್‌ಗಳು ಹೆಚ್ಚು ಎಂದರೆ 100 ಕಿ.ಮೀ. ಎತ್ತರಕ್ಕೆ ಉಪಗ್ರಹಗಳನ್ನು ಕೊಂಡೊಯ್ಯುತ್ತವೆ. ಹೀಗಾಗಿ ಇಂಧನದ ಬಳಕೆಯೂ ಕಡಿಮೆಯಾಗುತ್ತದೆ. ರಾಕೆಟ್‌ನ ಬಹುತೇಕ ಭಾಗಗಗಳು ಮರುಬಳಕೆಗೆ ಲಭ್ಯವಾಗುವುದರಿಂದ ಇವುಗಳನ್ನು ಮತ್ತೂಮ್ಮೆ ಉತ್ಪಾದಿಸಲು ಬೇಕಾಗುವ ವೆಚ್ಚ ಇಳಿಕೆಯಾಗುತ್ತದೆ.

Advertisement

ಬಾಹ್ಯಾಕಾಶ ಸಂಶೋಧನೆಯಲ್ಲಿ ಕ್ರಾಂತಿ
ಈ ಮಾದರಿಯ ರಾಕೆಟ್‌ಗಳ ಉತ್ಪಾದನ ವೆಚ್ಚ ಕಡಿಮೆ ಇರುವುದರಿಂದ ಮತ್ತು ವಾತಾವರಣದಲ್ಲಿ ಆಗುತ್ತಿರುವ ತತ್‌ಕ್ಷಣದ ಬದಲಾವಣೆಗಳನ್ನು ಅಧ್ಯಯನ ಮಾಡುವ ಉಪಗ್ರಹಗಳನ್ನು ಈ ರಾಕೆಟ್‌ಗಳ ಉಪ ಕಕ್ಷೆಗೆ ಸೇರಿಸುವುದರಿಂದ ಹೆಚ್ಚಿನ ಸಂಸ್ಥೆಗಳು ಈ ನಿಟ್ಟಿನಲ್ಲಿ ಸಂಶೋಧನೆಯನ್ನು ಆರಂಭಿಸಲಿವೆ. ಬಾಹ್ಯಾಕಾಶದಲ್ಲಿ ಸಂಶೋಧನೆ ನಡೆಸುವ ಸ್ಟಾರ್ಟ್‌ಅಪ್‌ಗ್ಳಿಗೆ ಸರಕಾರ ಈಗಾಗಲೇ ಹೆಚ್ಚಿನ ಅವಕಾಶ ಮತ್ತು ನೆರವನ್ನು ಒದಗಿಸುತ್ತಿದೆ. ಇಸ್ರೋ ಉಡಾವಣೆ ಮಾಡುತ್ತಿದ್ದ ರಾಕೆಟ್‌ಗಳಲ್ಲಿ, ಖಾಸಗಿ ಸಂಸ್ಥೆಗಳು ತಯಾರಿಸಿದ ಹಲವು ಉಪಗ್ರಹಗಳೂ ಇರು ತ್ತಿದ್ದವು. ಈಗ ಖಾಸಗಿಯವರೇ ಉಡಾವಣೆಯನ್ನು ಸಹ ಮಾಡಬಹುದಾದ ಕಾರಣ ಹೆಚ್ಚಿನ ಸಂಶೋಧನೆಗಳು ನಡೆಯಲಿವೆ. ಸರಕಾರಕ್ಕಿಂತ ಹೆಚ್ಚು ಹಣವನ್ನು ತೊಡಗಿಸಲು ಬಂಡವಾಳಶಾಹಿಗಳು ಮುಂದೆ ಬರಬಹುದು. ಹೀಗಾಗಿ ಕುತೂಹಲದ ತಾಣವಾದ ಬಾಹ್ಯಾಕಾಶದ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆದು ಬಾಹ್ಯಾಕಾಶ ಕ್ರಾಂತಿ ಉಂಟಾಗಲು ಕಾರಣವಾಗಬಹುದು.

ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಪೂರಕ
ಯಾವುದೇ ದೇಶ ಸಬ್‌ಆರ್ಬಿಟಲ್‌ ವಾಹನಗಳ ಉಡಾವಣೆಗಳಲ್ಲಿ ಯಶಸ್ಸು ಸಾಧಿಸಿದರೆ, ದಿನ ಕಳೆದಂತೆ ಆ ದೇಶದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಅಭಿವೃದ್ಧಿ ಕಾಣುತ್ತದೆ. ಆದರೆ ಭಾರತದಲ್ಲಿ ಸದ್ಯಕ್ಕೆ ಉಪಗ್ರಹಗಳ ಉಡಾವಣೆಗೆ ಮಾತ್ರ ಸಬ್‌ಆರ್ಬಿಟಲ್‌ ರಾಕೆಟ್‌ಗಳ ಬಳಕೆಗೆ ಅವಕಾಶವಿದೆ. ಮಾನವರನ್ನು ಕೊಂಡೊಯ್ಯಬಲ್ಲ ಕ್ಯಾಪ್ಸೂಲ್‌ಗ‌ಳ ಬಗ್ಗೆ ಭಾರತದಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಪ್ರಸ್ತುತ ಇಂತಹ ರಾಕೆಟ್‌ ತಂತ್ರಜ್ಞಾನವನ್ನೇ ಬಳಸಿಕೊಂಡು ಅಮೆರಿಕ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ನಡೆಸುತ್ತಿದೆ. ಬಾಹ್ಯಾಕಾಶದ ಬಗ್ಗೆ ಕುತೂಹಲ ಹೆಚ್ಚಾಗುತ್ತಿದ್ದಂತೆ ಬಾಹ್ಯಾಕಾಶಕ್ಕೆ ಹೋಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದೊಂದು ಯಶಸ್ವಿ ಉದ್ಯಮವಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು.

ಭೂಮಿಯಿಂದ 100 ಕಿ.ಮೀ.ವರೆಗಿನ ಉಪ ಕಕ್ಷೆಗೆ ಯಾಕಿಷ್ಟು ಮಹತ್ವ?
ಭೂಮಿಯಿಂದ ಸುಮಾರು 83ರಿಂದ 100 ಕಿ.ಮೀ. ಎತ್ತರದ ಪ್ರದೇಶವನ್ನು ಉಪಕಕ್ಷೆ (ಸಬ್‌ ಆರ್ಬಿಟ್‌) ಎಂದು ಗುರುತಿಸಲಾಗುತ್ತದೆ. ಇಷ್ಟು ಎತ್ತರಕ್ಕೆ ಗಂಟೆಗೆ 28,000 ಕಿ.ಮೀ. ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುವ ವಸ್ತುಗಳು, ಕೆಲವು ಕಾಲ ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಂಡಂತಾದರೂ ಕೆಲವು ಸಮಯದÇÉೇ ಭೂಮಿಯ ಸೆಳೆತಕ್ಕೆ ಸಿಕ್ಕಿ ಭೂಮಿಗೆ ಬೀಳುತ್ತವೆ. ಹೀಗಾಗಿ ಗಂಟೆಗೆ ಸುಮಾರು 6,000 ಕಿ.ಮೀ. ವೇಗದಲ್ಲಿ ಚಲಿಸುವ ರಾಕೆಟ್‌ಗಳು ಸಬ…ಆರ್ಬಿಟಲ್‌ ರಾಕೆಟ್‌ಗಳಾಗಿರುತ್ತವೆ. ಇವು ಭೂಮಿಯ ಗುರುತ್ವಾಕರ್ಷಣ ವಲಯವನ್ನು ಬಿಟ್ಟು ಹೋಗಲಾರವು. ಸಣ್ಣ ಸಣ್ಣ ಉಪಗ್ರಹಗಳ ಉಡಾವಣೆ, ಬಾಹ್ಯಾಕಾಶ ಪ್ರವಾಸ ಎಲ್ಲವೂ ಇಷ್ಟು ಎತ್ತರದÇÉೇ ನಡೆಯುತ್ತವೆ. ಹೀಗಾಗಿ ಇತ್ತೀಚಿನ ವರ್ಷಗಳನ್ನು ಉಪ ಕಕ್ಷೆಯ ಉಡಾವಣೆಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ.

ಭೂ ಕಕ್ಷೆ ಉಡಾವಣೆಗೂ, ಉಪ ಕಕ್ಷೆ ಉಡಾವಣೆಗೂ ವ್ಯತ್ಯಾಸಗಳೇನು?
ಉಪಗ್ರಹಗಳನ್ನು ಭೂ ಕಕ್ಷೆಗೆ ತಲುಪಿಸುವ ರಾಕೆಟ್‌ಗಳ ಉಡಾವಣೆಗೂ, ಉಪ ಕಕ್ಷೆಗಳ ಉಡಾವಣೆಗೆ ತಲುಪಿಸುವ ರಾಕೆಟ್‌ಗಳ ಉಡಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಎರಡೂ ರಾಕೆಟ್‌ಗಳನ್ನು ಉಡಾವಣೆ ಮಾಡುವ ಕೋನಗಳು, ವೇಗ ಬೇರೆ ಬೇರೆಯಾಗಿರುತ್ತದೆ. ಭೂ ಕಕ್ಷೆಗೆ ರಾಕೆಟ್‌ ತಲುಪಬೇಕಿ­ದ್ದರೆ, ಅದರ ವೇಗ ಗಂಟೆಗೆ 28,000 ಕಿ.ಮೀ.ನಷ್ಟಿರಬೇಕು. ಆದರೆ ಉಪಕಕ್ಷೆಗೆ ತಲುಪುವ ರಾಕೆಟ್‌ನ ವೇಗ ಗಂಟೆಗೆ 6,000 ಕಿ.ಮೀ.ನಷ್ಟಿದ್ದರೆ ಸಾಕು. ಇದನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು.

ಉದಾಹರಣೆ: ಬಹುತೇಕ ಮಂದಿಗೆ ಕ್ರಿಕೆಟ್‌ ಆಡಿ ಅಭ್ಯಾಸವಿರುತ್ತದೆ. ಫೀಲ್ಡರ್‌ ಬೌಂಡರಿ ಲೈನ್‌ನಿಂದ ಚೆಂಡು ಎಸೆಯುವಾಗ ಕೆಲವೊಮ್ಮೆ ಭೂಮಿಗೆ ಸಮಾನಾಂತರವಾಗಿ ವೇಗವಾಗಿ ಎಸೆಯುತ್ತಾನೆ. ಆಗ ಚೆಂಡು ಅದೇ ಅಂತರದಲ್ಲಿ ಬಹುದೂರದವರೆಗೆ ಚಲಿಸುತ್ತದೆ. ಚೆಂಡಿನ ಮೇಲೆ ಪ್ರಯೋಗವಾದ ಶಕ್ತಿ ಕುಂಠಿತವಾಗುತ್ತಿದ್ದಂತೆ ಚೆಂಡು ಕೆಳಗೆ ಬೀಳುತ್ತದೆ. ಯೋಚಿಸಿ ಒಂದು ವೇಳೆ ಫೀಲ್ಡರ್‌ನ ಕೈಯಿಂದ ಹೊರಟಾಗ ಚೆಂಡಿನ ಮೇಲೆ ಪ್ರಯೋಗವಾಗಿದ್ದ ಶಕ್ತಿ ಕುಂಠಿತವಾಗದೇ ಇದ್ದಿದ್ದರೆ! ಆ ಚೆಂಡು ಅದೇ ಅಂತರದಲ್ಲಿ ಭೂಮಿಯನ್ನು ಒಂದು ಸುತ್ತು ಹಾಕುತ್ತಿತ್ತು. ಇದೇ ತಂತ್ರಜ್ಞಾನವನ್ನು ಭೂ ಕಕ್ಷೆ ತಲುಪುವ ರಾಕೆಟ್‌ಗಳನ್ನು ಬಳಸಲಾಗಿರುತ್ತದೆ. ನಿಗದಿತ ಎತ್ತರ ತಲುಪುತ್ತಿದ್ದಂತೆ ರಾಕೆಟ್‌ ಭೂಮಿಗೆ ಸಮಾನಾಂತರವಾಗಿ ಚಲಿಸಿ ನಿರ್ದಿಷ್ಟ ದೂರವನ್ನು ತಲುಪುತ್ತದೆ. ಬಳಿಕ ಅದು ಭೂಮಿಗೆ ಬೀಳದೇ ಭೂಮಿಯನ್ನೇ ಸುತ್ತಲು ಆರಂಭಿಸುತ್ತದೆ. ಅದೇ ರೀತಿ ಫೀಲ್ಡರ್‌ ಚೆಂಡನ್ನು ಭೂಮಿಯಿಂದ ಮೇಲ್ಭಾಗಕ್ಕೆ ಎಸೆದರೆ, ಬಲ ಕಡಿಮೆಯಾಗುತ್ತಿದ್ದಂತೆ ಮತ್ತೆ ಭೂಮಿಗೆ ಬೀಳುತ್ತದೆ. ಎಸೆಯುವ ಕೋನಗಳು ಬದಲಾ ದಂತೆ ಚೆಂಡು ಬೀಳುವ ದೂರವೂ ಬದಲಾಗುತ್ತದೆ. ಇದನ್ನೇ ಸಬ…ಆರ್ಬಿಟಲ್‌ ರಾಕೆಟ್‌ನಲ್ಲಿ ಬಳಕೆ ಮಾಡಲಾಗುತ್ತದೆ. ರಾಕೆಟ್‌ ನಿಗದಿತ ಎತ್ತರ ತಲುಪಿದ ಕೂಡಲೇ ಎಂಜಿನ್‌ ಆಫ್ ಮಾಡಲಾಗುತ್ತದೆ. ಭೂಮಿಯ ಸೆಳೆತಕ್ಕೆ ಸಿಲುಕುವ ರಾಕೆಟ್‌ ಭೂಮಿಗೆ ಬೀಳುತ್ತದೆ. ಈ ವೇಳೆ ಪ್ಯಾರಾಚೂಟ್‌ ಬಳಸಿ ಅದು ಭೂಮಿಗೆ ಅಪ್ಪಳಿಸದಂತೆ ನೋಡಿಕೊಳ್ಳಲಾಗುತ್ತದೆ.

– ಗಣೇಶ್‌ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.