Advertisement
ಒಂದೂವರೆ ವರ್ಷದ ಬಳಿಕ ಶಾಲೆಗಳತ್ತ ಹೆಜ್ಜೆ ಹಾಕಿರುವ ಚಿಣ್ಣರನ್ನು ಆಯಾಯ ಶಾಲೆಗಳಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿವಿಧ ಶಾಲೆಗಳನ್ನು ತಳಿರು ತೋರಣ, ಸ್ವಾಗತ ಕಮಾನುಗಳ ಮೂಲಕ ಸಿಂಗರಿಸಲಾಗಿತ್ತು. ಕೆಲವು ಶಾಲೆಗಳಲ್ಲಿ ಸಿಹಿತಿಂಡಿ, ಚಾಕಲೆಟ್ ನೀಡಿ ಶಿಕ್ಷಕರು ಸ್ವಾಗತಿಸಿದರು. ಜತೆಗೆ ಕೆಲವು ಶಾಲೆಯಲ್ಲಿ ಹೂ ನೀಡಿ ಮಕ್ಕಳನ್ನು ಬರಮಾಡಿಕೊಂಡರು.
ಉಡುಪಿ ಜಿಲ್ಲೆಯಲ್ಲಿ 1ನೇ ತರಗತಿಗೆ 14,623, ಎರಡನೇ ತರಗತಿಗೆ 14,431, ಮೂರನೇ ತರಗತಿಗೆ 14,766, ನಾಲ್ಕನೇ ತರಗತಿಗೆ 14,051, ಐದನೇ ತರಗತಿಗೆ 15,289 ಮಂದಿ ವಿದ್ಯಾರ್ಥಿಗಳು ಹಾಜರಾದರು. ತರಗತಿಗಳಲ್ಲಿ ಕೊರೊನಾ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪಾಲಿಸಲಾಗಿತ್ತು. ಡಿಡಿಪಿಐ ಸಹಿತ ಎಲ್ಲ ವಲಯದ ಬಿಇಒಗಳು ತರಗತಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ಹಾಜರಾಗದವರಿಗೆ ಆನ್‌ಲೈನ್ ತರಗತಿ“ಪ್ರತೀ ದಿನ ಮಧ್ಯಾಹ್ನದವರೆಗೆ ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಮಾತ್ರ ದಿನ ಬಿಟ್ಟು ದಿನ ಹಾಜರಾಗುವಂತೆ ಆಯಾ ಶಾಲೆಗಳಲ್ಲಿ ಸೂಚಿಸಲಾಗಿದೆ. ವಿದ್ಯಾರ್ಥಿಗಳು ತುಂಬ ಉತ್ಸಾಹ ದಿಂದಲೇ ಮೊದಲ ದಿನ ಹಾಜರಾಗಿ ದ್ದಾರೆ. ಶಾಲೆಗೆ ಬರಲು ಇಷ್ಟವಿಲ್ಲದ ವರು ಆನ್‌ಲೈನ್ ಮೂಲಕವೂ ಕಲಿಯಲು ಅವಕಾಶವಿದೆ’ ಎಂದು ಉಭಯ ಜಿಲ್ಲಾ ಡಿಡಿಪಿಐಗಳು “ಉದಯವಾಣಿ’ಗೆ ತಿಳಿಸಿದ್ದಾರೆ.