Advertisement

ವಿವಿಧ ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ

09:23 AM Aug 08, 2017 | |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ 7 ಅಕಾಡೆಮಿಗಳು ಮತ್ತು ಎರಡು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. 

Advertisement

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರ ಸಂಖ್ಯೆಯನ್ನು 10ರಿಂದ 15ಕ್ಕೆ ಹೆಚ್ಚಿಸಲಾಗಿದೆ. ಹಾಗೆಯೇ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಸದಸ್ಯರ ಸಂಖ್ಯೆಯನ್ನು 10ರಿಂದ 12ಕ್ಕೆ ಹೆಚ್ಚಿಸಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಅರವಿಂದ ಮಾಲಗತ್ತಿ (ಮೈಸೂರು), ಸದಸ್ಯರಾಗಿ ಸಾವಿತ್ರಿ ಮುಜುಂದಾರ್‌(ಕೊಪ್ಪಳ), ಡಾ.ಶಿವಗಂಗಾ ರುಮ್ಮು(ಕಲಬುರ್ಗಿ), ಕವಿತಾ ಕುಸುಗಲ್‌ (ಬೆಳಗಾವಿ), ಬಿ.ಎಂ.ಹರಪನಹಳ್ಳಿ(ಗದಗ), ಅಶೋಕ ಬ ಹಳ್ಳಿಯವರ್‌ (ಹಾವೇರಿ), ಸಿದ್ದಲಿಂಗಪ್ಪ ಬೀಳಗಿ (ಬಾಗಲಕೋಟೆ), ಸ.ರಘುನಾಥ್‌ (ಕೋಲಾರ), ಡಾ.ರಂಗನಾಥ ಕಂಟನಕುಂಟೆ (ಬೆಂ.ಗ್ರಾ), ಡಾ.ರಾಜಶೇಖರ ಮಠಪತಿ, ಸಂಗಮೇಶ ಬಾದವಾಡಗಿ (ಬೆಂಗಳೂರು), ಕೆ.ವಿ.ರಾಜೇಶ್ವರಿ (ಚಿಕ್ಕಬಳ್ಳಾಪುರ), ಡಾ.ಬೈರಮಂಗಲ ರಾಮೇಗೌಡ (ರಾಮನಗರ), ಡಾ.ಸಿ.ನಾಗಣ್ಣ (ಚಾಮರಾಜನಗರ), ಡಾ.ಪ್ರಶಾಂತ ನಾಯಕ (ಶಿವಮೊಗ್ಗ), ಮುಮ್ತಾಜ್‌ ಬೇಗಂ (ಉಡುಪಿ). 

ಕರ್ನಾಟಕ ನಾಟಕ ಅಕಾಡೆಮಿ: ಅಧ್ಯಕ್ಷರಾಗಿ ಜೆ.ಲೋಕೇಶ್‌(ಬೆಂಗಳೂರು), ಸದಸ್ಯರಾಗಿ ವೆಂಕಟರಾಜು, ಬಲವಂತರಾವ್‌ ವಿಠ್ಠಲ, ಬಿ.ಎಸ್‌. ವಿದ್ಯಾರಣ್ಯ (ಬೆಂಗಳೂರು), ರಾಮಕೃಷ್ಣ ಬೇಳೂರು (ಕೋಲಾರ), ಮೈಲಾರಪ್ಪ (ತುಮಕೂರು), ಹೊನ್ನ ನಾಯಕ (ಮಂಡ್ಯ), ಬೇಲೂರು ರಘುನಂದನ್‌ (ಹಾಸನ), ಬಾಸುಮಾ ಕೊಡಗು (ಉಡುಪಿ), ಬಿ.ಸಂದೀಪ್‌ (ಕಲಬುರ್ಗಿ), ಶಿವಕುಮಾರಿ (ಬಳ್ಳಾರಿ), ಶಾಂತಾ ಕುಲಕರ್ಣಿ (ರಾಯಚೂರು), ಕೇದಾರಸ್ವಾಮಿ ಶೇಖರಯ್ಯ (ಗದಗ), ಗಣೇಶ ಅಮೀನಗಡ (ಬಾಗಲಕೋಟೆ), ಬಸವರಾಜಪ್ಪ ಶಿವಪ್ಪ ದೊಡ್ಡಮನಿ (ಧಾರವಾಡ), ಪ್ರೇಮಾ ತಾಳಿಕೋಟೆ (ವಿಜಯಪುರ).

ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ: ಅಧ್ಯಕ್ಷರಾಗಿ ಪಂಡಿತ್‌ ಫ‌ಯಾಜ್‌ಖಾನ್‌ (ಧಾರವಾಡ), ಸದಸ್ಯರಾಗಿ ನಿರುಪಮಾ ರಾಜೇಂದ್ರ, ರತ್ನಮಾಲಾ ಪ್ರಕಾಶ್‌ (ಬೆಂಗಳೂರು), ವಿ.ರಮೇಶ್‌ (ಕೋಲಾರ), ರೂಪಾ ರಾಜೇಶ್‌ (ಚಿಕ್ಕಬಳ್ಳಾಪುರ), ಡಾ.ಆರ್‌. ಎನ್‌.ಶ್ರೀಲತಾ (ಮೈಸೂರು), 
ಎಂ.ವಿ.ಗೋಪಾಲ (ಶಿವಮೊಗ್ಗ), ಆನಂದ ಮಾದಲಗೆರೆ (ಹಾಸನ), ಅರವಿಂದ ಹೆಬ್ಟಾರ (ಉಡುಪಿ), ಶಿವಣ್ಣ ಹೂಗಾರ ದೇಸಾಯಿ ಕಲ್ಲೂರ (ಕಲಬುರ್ಗಿ), ನಾಗರಾಜ ಶ್ಯಾವಿ (ಕೊಪ್ಪಳ), ಎಸ್‌.ವಿ.ಕಲ್ಮಟ (ಬೀದರ), ಅಶೋಕ ಹುಗ್ಗಣ್ಣನವರ (ಉ.ಕ), ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ (ಗದಗ), ಎಸ್‌. ಬಾಳೇಶ್‌ (ಬೆಳಗಾವಿ) ಮತ್ತು ಹನುಮಂತಪ್ಪ ಮೇತ್ರಿ (ಬಾಗಲಕೋಟೆ).

Advertisement

ಕರ್ನಾಟಕ ಜಾನಪದ ಅಕಾಡೆಮಿ: ಅಧ್ಯಕ್ಷರಾಗಿಬಿ. ಟಾಕಪ್ಪ (ಶಿವಮೊಗ್ಗ), ಸದಸ್ಯರಾಗಿ ಬಿ.ಎಸ್‌. ತಳವಾಡಿ(ಬೆಂಗಳೂರು), ನಿರ್ಮಲಾ (ಬೆಂಗಳೂರು ಗ್ರಾಮಾಂತರ), ಡಿ.ರಾಜಪ್ಪ (ಕೋಲಾರ), ಚಂದ್ರಪ್ಪ ಕಲ್ಕೆರೆ (ಚಿತ್ರದುರ್ಗ), ಕಾಳಯ್ಯ (ರಾಮನಗರ), ಮಹದೇವು (ಮೈಸೂರು), ವೆಂಕಟೇಶ್‌ ಹಿಂದವಾಡಿ (ಚಾ.ನಗರ), ಸವಿತಾ ಚಿರಕುನ್ನಯ್ಯ (ಮಂಡ್ಯ), ಸಿ.ರಂಗಸ್ವಾಮಿ (ಚಿಕ್ಕಮಗಳೂರು), ಹನುಮಂತ ಬರಗಾಲ (ಬಾಗಲಕೋಟೆ), ಕೆ.ಸಿ.ನಾಗರಜ್ಜಿ (ಹಾವೇರಿ), ಪುರುಷೋತ್ತಮ ಪಿ.ಗೌಡ (ಉ.ಕ.), ವಿಜಯಕುಮಾರ ಸೋನಾರೆ (ಬೀದರ್‌), ಮಂಜಮ್ಮ ಜೋಗತಿ (ಬಳ್ಳಾರಿ), ಪ್ರಕಾಶ್‌ ಎಸ್‌.ಅಂಗಡಿ (ಯಾದಗಿರಿ).

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಅಧ್ಯಕ್ಷರಾಗಿ ಕಾಳಾಚಾರ್‌ (ಚಿತ್ರದುರ್ಗ), ಸದಸ್ಯರಾಗಿ ಕೃಷ್ಣಾ ನಾಯಕ, ಎಂ.ರಘು ಶಿಲ್ಪಿ, ಜಿ.ಲಕ್ಷ್ಮೀಪತಿ (ಬೆಂಗಳೂರು), ಎಸ್‌.ಜಿ.ಅರುಣಕುಮಾರ (ಕೋಲಾರ), ಸಿ.ಪಿ.ವಿಶ್ವನಾಥ್‌ (ತುಮಕೂರು), ಎಚ್‌.ಎಚ್‌.ಭರತರಾಜ್‌ (ದಾವಣಗೆರೆ), ಪಿ.ಬಾಬು
(ಉಡುಪಿ), ಬಿ.ಸಿ.ಸುಕೇಶ್‌ (ಚಿಕ್ಕಮಗಳೂರು), ಬಸವರಾಜ ಪಾಂಡುರಂಗ ಕಂಬಾರ, ಅಲ್ಲಿಬಾಬ ಸೈನದಾಫ‌ (ಬಾಗಲಕೋಟೆ), ವಿಠ್ಠಲ ಮನೋಹರ ಬಡಿಗೇರ (ವಿಜಯಪುರ), ಸುಮಲತಾ ಕವಲೂರು (ಗದಗ), ವಿರುಪಾಕ್ಷಪ್ಪ ಶಿಲ್ಪಿ (ಬಳ್ಳಾರಿ), ನಿಂಗಪ್ಪ ದೇವೀಂದ್ರಪ್ಪ ಕೇರಿ, ಗಾಯಿತ್ರಿ ಎ.ಶಿಲ್ಪಿ (ಕಲಬುರ್ಗಿ). 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ:
ಅಧ್ಯಕ್ಷರಾಗಿ ಮೋಹನ ವರ್ಣೇಕರ್‌(ಬೆಂಗಳೂರು), ಸದಸ್ಯರಾಗಿ ಜೋಕಿಂಸ್ಟಾನ್ಲಿ, ಪಾವು ಮೋರಾಸ್‌, ದಾಮೋದರ್‌ ಭಂಡಾರಕರ್‌, ಲಿಂಗಪ್ಪಗೌಡ (ದ. ಕನ್ನಡ), ಉಲ್ಲಾಸ್‌ ಲಕ್ಷ್ಮೀನಾರಾಯಣ, ಸುಮಂಗಲಾ ಸದಾನಂದ ನಾಯಕ, ನಾಗೇಶ ಅಣೆಕರ್‌, (ಉ.ಕ), ರಾಮ ಎ.ಮೇಸ್ತ, ಪೂರ್ಣಿಮಾ ಸುರೇಶ್‌, ಓಂ ಗಣೇಶ ಉಪ್ಪುಂದ (ಉಡುಪಿ) ಮತ್ತು ಸಂತೋಷ ಮಹಾಲೆ (ಧಾರವಾಡ). 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಎ.ಸಿ.ಭಂಡಾರಿ, ಸದಸ್ಯರಾಗಿ ಸುಧಾ ನಾಗೇಶ್‌, ವಿಜಯಾಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು,
ಗೋಪಾಲ್‌ ಅಂಚನ್‌, ಎಸ್‌.ವಿದ್ಯಾಶ್ರೀ, ದುರ್ಗಾ ಮೆನನ್‌, ಶಿವಾನಂದ ಕರ್ಕೆರಾ, ಬೆನೆಟ್‌ ಅಮ್ಮಣ್ಣ, ಚಂದ್ರಶೇಖರ ಗಟ್ಟಿ ಬೋಳೂರು, ಡಾ.ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು (ದಕ್ಷಿಣ ಕನ್ನಡ) ಮತ್ತು ಡಾ.ವೈ.ಎನ್‌.ಶೆಟ್ಟಿ (ಉಡುಪಿ). 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷರನ್ನಾಗಿ ಹಿರಿಯ ಚಿಂತಕ ಡಾ.ಕೆ.ಮರುಳಸಿದ್ದಪ್ಪ (ಬೆಂಗಳೂರು), ಸದಸ್ಯರಾಗಿ ಡಾ.ಎಂ.ಜಿ.ಹೆಗಡೆ(ಉ.ಕ), ಡಾ.ಟಿ.ಎಸ್‌. ವಿವೇಕಾನಂದ, ದೇವರಾಜ ಕುರುಬ (ಬೆಂಗಳೂರು), ಎಂ.ಎಸ್‌.ಶಶಿಕಲಾಗೌಡ (ಮೈಸೂರು), ಡಾ.ತಾರಿಣಿ
ಶುಭದಾಯಿನಿ (ಚಿತ್ರದುರ್ಗ), ಡಾ.ಮೋಹನ ಕುಂಠಾರ (ಬಳ್ಳಾರಿ), ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ(ವಿಜಯಪುರ), ಆರೀಫ್ ರಾಜಾ
(ರಾಯಚೂರು).

ಕರ್ನಾಟಕ ಪುಸ್ತಕ ಪ್ರಾಧಿಕಾರ: ಅಧ್ಯಕ್ಷರಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ (ರಾಯಚೂರು), ಸದಸ್ಯರಾಗಿ ಡಾ.ಸಿದ್ದಣ್ಣ ಉಕ್ಕನಾಳ (ವಿಜಯಪುರ), ಡಾ.ಜಯದೇವಿ ಗಾಯಕವಾಡ (ಬೀದರ), ಪ್ರಕಾಶ ಕಂಬತ್ತಹಳ್ಳಿ (ಬೆಂಗಳೂರು), ದ್ವಾರನಕುಂಟೆ ಪಾತಣ್ಣ (ತುಮಕೂರು) ಮತ್ತು ಡಾ.ಕವಿತಾ ರೈ (ಕೊಡಗು).  

Advertisement

Udayavani is now on Telegram. Click here to join our channel and stay updated with the latest news.

Next