Advertisement

ಸರ್ಕಾರಿ ಪದವಿ ಕಾಲೇಜಿಗೆ ಅತಿಥಿ ಉಪನ್ಯಾಸಕರ ನೇಮಕ

08:25 AM Aug 02, 2017 | Team Udayavani |

ಬೆಂಗಳೂರು: ಸರ್ಕಾರಿ ಪದವಿ ಕಾಲೇಜಿನಲ್ಲಿ ವಿವಿಧ ವಿಷಯಕ್ಕೆ ಕಾಯಂ ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿಯ ನಂತರ ಕಾರ್ಯಭಾರಕ್ಕೆ ಅನುಗುಣವಾಗಿ ಆ.3ರಿಂದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

Advertisement

ಭೌತಶಾಸOಉ ವಿಭಾಗದ 11, ವಾಣಿಜ್ಯ ಮತ್ತು ನಿರ್ವಹಣಾ ಶಾಸOಉದ 273, ಕಂಪ್ಯೂಟರ್‌ ಸೈನ್ಸ್‌ನ 60, ಇಂಗ್ಲಿಷ್‌ನ 112, ಹಿಂದಿಯ 14, ಇತಿಹಾಸದ 68, ಕಾನೂನು ಶಾಸOಉದ 4, ಗಣಿತದ 23 ಹಾಗೂ ರಾಜ್ಯಶಾಸOಉದ 69 ಹುದ್ದೆ ಸೇರಿ ರಾಜ್ಯದ ವಿವಿಧ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 634 ಹುದ್ದೆ ಖಾಲಿ
ಇದೆ. ಈಗಾಗಲೇ ನೇಮಿಸಿಕೊಂಡಿರುವ ಅತಿಥಿ ಉಪನ್ಯಾಸಕರ ಆಯ್ಕೆಯನ್ನು ರದ್ದುಪಡಿಸಿ, ಹೊಸದಾಗಿ ಆಯ್ಕೆ
ಮಡಿಕೊಳ್ಳಲಾಗುತ್ತದೆ. ಕಾಲೇಜಿನ ಕಾರ್ಯಭಾರಕ್ಕೆ ಅನುಗುಣವಾಗಿ ಪ್ರಾಂಶುಪಾಲರೇ ಗರಿಷ್ಠ 10 ತಿಂಗಳಿಗೆ
ಅತಿಥಿ ಉಪನ್ಯಾಸಕರನ್ನು ನೇಮಿಸಿ ಕೊಳ್ಳಲಿದ್ದಾರೆ. ಆನ್‌ಲೈನ್‌ ಮೂಲಕವೇ ಅರ್ಜಿ ಪಡೆದು ನೇಮಕಾತಿ ಪ್ರಕ್ರಿಯೆ
ಯನ್ನು ಸರ್ಕಾರದ ನಿಮಯದಂತೆ ಮಾಡಲು ಸೂಚನೆ ನೀಡಲಾಗಿದೆ.

ಅಭ್ಯರ್ಥಿ ಸಂಬಂಧಪಟ್ಟ ಸ್ನಾತಕೋತ್ತರ ಪದವಿಯಲ್ಲಿ ಪಡೆದ ಅಂಕ, ಪಿಎಚ್‌.ಡಿ, ಎನ್‌ಇಟಿ ಅಥವಾ ಎಸ್‌ಎಲ್‌ಇಟಿ,
ಎಂ.μಲ್‌ ಪದವಿ, ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಮಾಹಿತಿ ಇತ್ಯಾದಿ ಮಾನದಂಡದಲ್ಲಿ
ನೇಮಕಾತಿ ಪ್ರಕ್ರಿಯೆ ಮೆರಿಟ್‌ ಅಧಾರದಲ್ಲಿ ನಡೆಯಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next