ತಾಂತ್ರಿಕ ಕೋರ್ಸ್‌ನಲ್ಲೂ ನಾಲ್ಕು ವರ್ಷದ ಹಾನರ್ಸ್ ಪದವಿ ಇರಲಿದೆಯೇ? - ಮನೋಜ್ಞಾ, ಬೆಂಗಳೂರು
ಉತ್ತರ: ತಾಂತ್ರಿಕ ಕೋರ್ಸ್‌ಗಳಲ್ಲಿ ಪದವಿಯೇ 4 ವರ್ಷಗಳ ಅವಧಿಯದ್ದಾಗಿರುತ್ತದೆ. ಇದರ 2 ಮತ್ತು 3ನೇ ವರ್ಷಗಳಿಗೆ ಸಂಬಂಧಿಸಿ “ಎಕ್ಸಿಟ್ ಆಪ್ಷನ್’ಗಳಲ್ಲಿ ವ್ಯತ್ಯಾಸ ಇರಬಹುದು. ಈ ಬಗ್ಗೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಮಾರ್ಗದರ್ಶಿ ಸೂತ್ರಗಳನ್ನು ಇನ್ನಷ್ಟು ಕೂಲಂಕಷವಾಗಿ ಅಧ್ಯಯನ ಮಾಡಿ ಸೂಕ್ತ ನಿರ್ಧಾರಕ್ಕೆ ಬರಲಾಗುತ್ತದೆ.
ಸರಕಾರಿ ಪದವಿ ಕಾಲೇಜಿನಲ್ಲಿ ಬೋಧಕರ ಹುದ್ದೆ ಕೊರತೆಯಿದೆ. ಇದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಮೇಲೆ ಹೊಡೆತ ಬೀಳುವುದಿಲ್ಲವೇ?-ಜಿ.ಬನ್ನಪ್ಪ, ಗುಂಜನೂರು, ಯಾದಗಿರಿ
ಉತ್ತರ: ಈ ನೀತಿ ಅನುಷ್ಠಾನಗೊಂಡ ಮೇಲೆ ಬೋಧಕರ ಕಾರ್ಯ, ಅವರ ಹೊಣೆಗಾರಿಕೆ ಹೆಚ್ಚುವುದು ನಿಜ. ಆದರೆ, ಅದಕ್ಕೆ ಬೇಕಿರುವಷ್ಟು ಸಂಖ್ಯೆಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ವೃತ್ತಿಪರ ಕೋರ್ಸ್‌ಗಳ ಬೋಧನೆಗೆ ಉದ್ಯಮ ವಲಯದ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳ ಪರಿಣಿತರನ್ನು ಸಂದರ್ಶಕ ಬೋಧಕರಾಗಿ ನೇಮಿಸಿಕೊಳ್ಳಲಾಗುತ್ತದೆ.
ನಿಮ್ಮ ಪ್ರಶ್ನೆಗಳನ್ನು ಇಲ್ಲಿಗೆ ವಾಟ್ಸ್‌ಪ್ ಮಾಡಿ
8861196369