Advertisement

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

10:56 PM Apr 30, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಹೆಚ್ಚುವರಿಯಾಗಿ 18 ಮಂದಿ ಅಧಿಕಾರಿ-ಸಿಬ್ಬಂದಿ ನೇಮಕ ಮಾಡಲಾಗಿದೆ.

Advertisement

ಹಾಸನದ ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಶಾಸಕ ಎಚ್‌.ಡಿ.ರೇವಣ್ಣ ಹಾಗೂ ಪುತ್ರ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದೆ. ಈ ಸಂಬಂಧ ಈಗಾಗಲೇ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್‌, ಮೈಸೂರು ಎಸ್ಪಿ ಸೀಮಾ ಲಾಟ್ಕರ್‌, ಸುಮನ್‌ ಡಿ.ಪೆನ್ನೇಕರ್‌ ನೇತೃತ್ವದ ತಂಡ ತನಿಖೆ ಆರಂಭಿಸಿದೆ. ಈ ತಂಡಕ್ಕೆ ಹೆಚ್ಚುವರಿಯಾಗಿ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಮೂವರು ಎಸಿಪಿ ಸೇರಿ 19 ಮಂದಿ ಅಧಿಕಾರಿ-ಸಿಬ್ಬಂದಿ ನೇಮಿಸಲಾಗಿದೆ.

ಎಸ್‌ಐಟಿ ತಂಡದ ಅಧಿಕಾರಿಗಳು: ಬೆಂಗಳೂರು ಮಾರತ್ತಹಳ್ಳಿ ಉಪವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್‌ ಸಾನಿಕೊಪ್ಪ, ಸಿಸಿಬಿಯ ಎಸ್‌.ಬಿ.ವಿಭಾಗದ ಸತ್ಯನಾರಾಯಣ ಸಿಂಗ್‌, ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್‌.ನಾಯ್ಕ, ಕೆ.ಆರ್‌.ಪೇಟೆ ಟೌನ್‌ ಠಾಣೆಯ ಪಿಐ ಬಿ.ಎಸ್‌.ಸುಮರಾಣಿ, ಮೈಸೂರಿನ ಆಲನಹಳ್ಳಿ ಠಾಣೆಯ ಬಿ.ಎಸ್‌.ಸ್ವರ್ಣಾ, ಮಂಗಳೂರಿನ ಊರ್ವ ಠಾಣೆಯ ಪಿಐ ಜಿ.ಭಾರತಿ, ವೈಟ್‌ಫೀಲ್ಡ್‌ ಸಿಇಎನ್‌ ಠಾಣೆಯ ಪಿಐ ಎಂ.ಹೇಮಂತ್‌ಕುಮಾರ್‌, ಬೆಂಗಳೂರು ಸಿಸಿಬಿ ಪಿಐ ಜಿ.ಸಿ.ರಾಜಾ, ಮಲ್ಪೆ ಸಿಎಸ್‌ಪಿಯ ಪಿಎಸ್‌ಐ ವೈಲೆಟ್‌ ಪ್ಲೆಮೀನಾ, ಬೆಂಗಳೂರು ಸಿಸಿಆರ್‌ಬಿ ಪಿಎಸ್‌ಐ ವಿನುತಾ, ಚಾಮರಾಜನಗರ ಜಿಲ್ಲೆಯ ಯಳಂದೂರು ಠಾಣೆಯ ಪಿಎಸ್‌ಐ ನಂದೀಶ್‌, ಮೈಸೂರು ಜಿಲ್ಲೆಯ ಇಲವಾಲ ಠಾಣೆ ಪಿಎಸ್‌ಐ ಕುಮುದಾ, ಕೊಡಗು ಮಹಿಳಾ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಸುಮತಿ, ಹುಣಸೂರು ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಮನೋಹರ್‌, ಬೆಂಗಳೂರು ಸಿಇಎನ್‌ ಠಾಣೆಯ ಹೆಚ್‌ಸಿ ಸುನೀಲ್‌ ಬೆಳವಗಿ, ಶಿರಸಿಯ ಎನ್‌ಎಂಪಿಎಸ್‌ ಎಚ್‌ಸಿ ಬಸವರಾಜ ಮೈಗೇರಿ, ಮೈಸೂರು ಸಿಇಎನ್‌ ಠಾಣೆಯ ಕಾನ್‌ಸ್ಟೆಬಲ್‌ಗ‌ಳಾದ ರಂಗಸ್ವಾಮಿ, ಸಿಂಧು ಎಂಬವರನ್ನು ವಿಶೇಷ ತಂಡಕ್ಕೆ ನೇಮಿಸಿಕೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next