Advertisement
ಕೊರೊನಾದ ಬಳಿಕ ಸಂಘ-ಸಂಸ್ಥೆಗಳು ಹಾಗೂ ಕಾಲೇಜುಗಳಲ್ಲಿ ನಡೆಯುತ್ತಿದ್ದ ರಕ್ತದಾನ ಶಿಬಿರಗಳು ಸ್ಥಗಿತವಾಗಿ ರಾಜ್ಯಾದ್ಯಂತ ರಕ್ತದ ಅಭಾವ ಎದುರಾಗಿತ್ತು. ಪ್ರಸ್ತುತ ಅವಳಿ ಜಿಲ್ಲೆಯಲ್ಲಿ ರಕ್ತ ಸಂಗ್ರಹದ ಪ್ರಮಾಣದಲ್ಲಿ ಬಹಳ ಎನ್ನುವಷ್ಟು ಏರಿಕೆಯಾಗದಿದ್ದರೂ ಬೇಡಿಕೆಗೆ ತಕ್ಕಂತೆ ಸಂಗ್ರಹವಿದೆ ಎನ್ನುವುದು ನೆಮ್ಮದಿಯ ವಿಚಾರ.
Related Articles
ಲಾಕ್‌ಡೌನ್ ಸಂದರ್ಭ ಜಿಲ್ಲೆಗಳಲ್ಲಿ ಸರಾಸರಿ 20-30 ಯೂನಿಟ್ ಸಂಗ್ರಹ ವಾಗು ತ್ತಿತ್ತು. ಆ ಸಂದರ್ಭದಲ್ಲಿ ಬೇಡಿಕೆ ಕಡಿಮೆ ಯಿದ್ದ ಕಾರಣ ತುರ್ತು ಪರಿಸ್ಥಿತಿ ಎದುರಾಗಿರಲಿಲ್ಲ. ಜತೆಗೆ ಕೇಂದ್ರದ ವೈದ್ಯಕೀಯ ಸಿಬಂದಿ ತುರ್ತು ಸಂದರ್ಭದಲ್ಲಿ ದಾನಿ ಗಳನ್ನು ಕರೆದು ರಕ್ತ ಸಂಗ್ರಹಿಸುತ್ತಿದ್ದರು. ಪ್ರಸ್ತುತ ಉಡುಪಿಯ ಕೇಂದ್ರದಲ್ಲಿ ಒಬ್ಬ ವ್ಯಕ್ತಿಗೆ 1 ಯೂನಿಟ್ ರಕ್ತ ನೀಡಲಾಗುತ್ತದೆ. ಹೆಚ್ಚು ಅಗತ್ಯವಿರುವವರಿಗೆ ಪರ್ಯಾಯ ರಕ್ತ ಕಲ್ಪಿಸು ವಂತೆ ಮನವಿ ಮಾಡಲಾಗುತ್ತಿದೆ. ಅವರಿಗೆ ಕಷ್ಟವಾದ ಸಂದರ್ಭದಲ್ಲಿ ಸಿಬಂದಿ ದಾನಿಗಳ ಹುಡುಕಾಟ ನಡೆಸುತ್ತಾರೆ.
Advertisement
ಲಾಕ್‌ಡೌನ್ ಸಂದರ್ಭ ಹೋಲಿಸಿದರೆ ರಕ್ತ ಸಂಗ್ರಹದ ಪ್ರಮಾಣ ಅಕ್ಟೋಬರ್ ಬಳಿಕ ಚೇತರಿಕೆಯಾಗಿದೆ. ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಂಡು ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ.-ಡಾ| ವೀಣಾ ಕುಮಾರಿ, ಮುಖ್ಯಸ್ಥರು, ರಕ್ತನಿಧಿ ಕೇಂದ್ರ, ಜಿಲ್ಲಾಸ್ಪತ್ರೆ, ಉಡುಪಿ ಜಿಲ್ಲೆಯಲ್ಲಿ ರಕ್ತದ ಕೊರತೆ ಇಲ್ಲ. ಪ್ರಸ್ತುತ ಬೇಡಿಕೆ ಕಡಿಮೆ ಇರುವುದರಿಂದ ತುರ್ತು ಪರಿಸ್ಥಿತಿ ಎದುರಾಗಿಲ್ಲ. ಇದೀಗ ರಕ್ತ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿದೆ.
ಡಾ| ಶರತ್‌ಕುಮಾರ್, ಮುಖ್ಯಸ್ಥರು, ರಕ್ತನಿಧಿ ಕೇಂದ್ರ, ಮಂಗಳೂರು, ದ.ಕ. ಜಿಲ್ಲೆ.