Advertisement

ಈ ಬಾರಿ ಗೋಧಿ ಇಳುವರಿ ದಾಖಲೆ?- ಆಹಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿಕೆ

11:37 PM Jan 03, 2024 | Team Udayavani |

ಹೊಸದಿಲ್ಲಿ: ಹವಾಮಾನ ಪರಿಸ್ಥಿತಿಯು ಅನುಕೂಲಕರವಾಗಿ ಮುಂದುವರಿದರೆ 2023-24ರ ಬೆಳೆ ವರ್ಷದಲ್ಲಿ (ಜುಲೈ-ಜೂನ್‌) ಭಾರತದ ಗೋಧಿ ಬೆಳೆಯ ಇಳು ವರಿ ದಾಖಲೆಯ 11.4 ಕೋಟಿ ಟನ್‌ಗೆ ಮುಟ್ಟಲಿದೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಗೋಧಿಯ ಕೊನೆಯ ಹಂತದ ಬಿತ್ತನೆ ಕಾರ್ಯ ನಡೆಯುತ್ತಿದ್ದು, ಮುಂದಿನ ವಾರದವರೆಗೂ ಮುಂದುವರಿಯಲಿದೆ.

Advertisement

ಕಳೆದ ವಾರದವರೆಗೂ 320.54 ಲಕ್ಷ ಹೆಕ್ಟೇರ್‌ಗಳಲ್ಲಿ ಗೋಧಿ ಬಿತ್ತನೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. 2022-23ರಲ್ಲಿ ದಾಖಲೆಯ 11.05 ಕೋಟಿ ಟನ್‌ ಗೋಧಿ ಇಳುವರಿ ಕಂಡಿತ್ತು. 2021-22ರಲ್ಲಿ 10.77 ಕೋಟಿ ಟನ್‌ ಗೋಧಿ ಇಳುವರಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next