Advertisement
ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ನಿಂದ ಭಾನುವಾರ ಹರಿದಾಸ ಕೀರ್ತನೆಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕರ್ನಾಟಕ ಸೇರಿ ಏಳು ರಾಜ್ಯಗಳಿಂದ ಆಗಮಿಸಿದ್ದ ಹಲವು ಭಜನಾ ಮಂಡಳಿಗಳು, ಸಹಸ್ರಾರು ಮಹಿಳೆಯರು 9 ವಿಭಿನ್ನ ದಾಖಲೆಗಳ ನಿರ್ಮಾಣಕ್ಕೆ ತಮ್ಮ ಕೊಡುಗೆ ನೀಡಿದರು. ಹರಿದಾಸರ ಆಂಜನೇಯ ಕೀರ್ತನೆಗಳ ಗಾಯನದಲ್ಲಿ ಸುಮಾರು 100 ಭಜನಾ ಮಂಡಳಿಗಳು, 2000 ಮಹಿಳಾ ಸದಸ್ಯರು ಪಾಲ್ಗೊಂಡು ಗಮನ ಸೆಳೆದರು. ನಿರಂತರ ಗಾಯನದಲ್ಲಿ ಕನ್ನಡ ಭಾಷಾ ಜ್ಞಾನ ಇಲ್ಲದವರು ಕೂಡ ದಾಸರ ಕೀರ್ತನೆಗಳನ್ನು ಕಂಠಪಾಠ ಮಾಡಿ ಹಾಡುವ ಮೂಲಕ ಗಮನ ಸೆಳೆದರು.
ವಿಶ್ವದ ವಿವಿಧ 9 ದಾಖಲೆಗಳನ್ನು ಏಕಕಾಲಕ್ಕೆ ನಿರ್ಮಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಆರಂಭಿಸಲಾಯಿತು. ವಿವಿಧ ಭಜನಾ ಮಂಡಳಿಗಳ ಪುರುಷರು, ಮಹಿಳೆಯರು ಸೇರಿ 2500 ಗಾಯಕರು ಆಂಜನೇಯ ಸ್ವಾಮಿಯ 108 ಕೀರ್ತನೆಗಳನ್ನು ಹಾಡಿದರು. ಒಂದರ ನಂತರ ಒಂದರಂತೆ ಕೀರ್ತನೆ ಹಾಡಲಾಯಿತು. ತೆಲುಗು ಬುಕ್ ಆಫ್ ರೆಕಾರ್ಡ್, ಇಂಡಿಯನ್ ಟ್ಯಾಲೆಂಟ್ ಆರ್ಗನೈಸೇಶನ್ ರೆಕಾರ್ಡ್, ವಂಡರ್ ಬುಕ್ ಆಫ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಇಂಡಿಯಾ, ಜೀನಿಯಸ್ ಬುಕ್ ಆಫ್ ರೆಕಾರ್ಡ್, ಮಿರಾಕಲ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ಬುಕ್ ಆಫ್ ಇಂಡಿಯಾ, ಗೋಲ್ಡ್‌ನ ಸ್ಟಾರ್ ರೆಕಾರ್ಡ್, ಹೈರೇಂಜ್ ಬುಕ್ ಆಫ್ ರೆಕಾರ್ಡ್, ಮಾರಬಲೆಸ್ ರೆಕಾರ್ಡ್ ಸೇರಿ ಒಟ್ಟು ಒಂಭತ್ತು ದಾಖಲೆಗಳಿಗೆ ಕಾರ್ಯಕ್ರಮ ಸೇರ್ಪಡೆಯಾಯಿತು. ಇದಕ್ಕೆ ವಿವಿಧ ವಾದ್ಯಮೇಳಗಳು ಸಾಥ್ ನೀಡಿದವು.