Advertisement

ದಾಖಲೆಯ ಜಿಎಸ್ ಟಿ ಸಂಗ್ರಹ : ಆರ್ಥಿಕ ಚೇತರಿಕೆಯಾಗುತ್ತಿದೆ ಎಂದ ಹಣಕಾಸು ಸಚಿವೆ

12:43 PM Feb 01, 2022 | Team Udayavani |

ನವದೆಹಲಿ : ದಾಖಲೆ ಪ್ರಮಾಣದಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ ಬಜೆಟ್ ಮಂಡನೆಯ ವೇಳೆ ಉಲ್ಲೇಖಿಸಿ, ದೇಶದಲ್ಲಿ ಆರ್ಥಿಕ ಚೇತರಿಕೆ ವೇಗ ಪಡೆದಿದೆ ಎಂದಿದ್ದಾರೆ.

Advertisement

ಬಜೆಟ್ ಮಂಡನೆಯ ನಡುವೆ, ಪ್ರತಿಯಲ್ಲಿ ಇಲ್ಲ ಆದರೂ ನಾನು ಸದನದ ಗಮನಕ್ಕೆ ಈ ಮಹತ್ವದ ವಿಚಾರ ತಿಳಿಸಲು ಬಯಸುತ್ತೇನೆ ಜನವರಿಯವರೆಗೆ ದಾಖಲೆಯ GST ಸಂಗ್ರಹಣೆಯಾಗಿದ್ದು, ಒಟ್ಟು 1 ಲಕ್ಷ 40 ಸಾವಿರದ 9 ನೂರು ಕೋಟಿ GST ಸಂಗ್ರಹಿಸಲಾಗಿದ್ದು, ಇದು GST ಆರಂಭವಾದಾಗಿನಿಂದ ಅತೀ ಹೆಚ್ಚು ಸಂಗ್ರಹವಾಗಿದೆ. ಕೋವಿಡ್ ನಂತರದ, ತ್ವರಿತ ಆರ್ಥಿಕ ಚೇತರಿಕೆಯ ಸ್ಪಷ್ಟ ನಿದರ್ಶನ ಇದು ಎಂದು ಸಚಿವೆ ಒತ್ತಿ ಹೇಳಿದರು.

ಈ ವಿಚಾರವನ್ನು ಘೋಷಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next