ಗೋಲ್ಡ್ ಕೋಸ್ಟ್ : ವಿಶ್ವ ಚಾಂಪ್ಯನ್ ವೇಟ್ ಲಿಫ್ಟರ್ ಮೀರಾಬಾಯಿ ಚಾನು (48 ಕೆಜಿ ವಿಭಾಗ) ಅವರು ತನ್ನ ವಿಭಾಗದ ಎಲ್ಲ ಮೂರು ಸ್ಪರ್ಧೆಗಳಲ್ಲಿ ಅತ್ಯದ್ಭುತ ನಿರ್ವಹಣೆಯನ್ನು ದಾಖಲಿಸಿ ಇಲ್ಲೀಗ ಸಾಗುತ್ತಿರುವ 21ನೇ ಕಾಮನ್ವೆಲ್ತ್ ಗೇಮ್ಸ್‌ನ ಮೊದಲ ಚಿನ್ನದ ಪದಕವನ್ನು ಭಾರತಕ್ಕೆ ಗೆದ್ದುಕೊಟ್ಟಿದ್ದಾರೆ.
ಮೀರಾ ಬಾಯಿ ಚಾನು ಅವರು ತನ್ನ ಎಲ್ಲ ಮೂರು ಯತ್ನಗಳಲ್ಲಿ (80 ಕೆಜಿ, 84 ಕೆಜಿ ಮತುತ 86 ಕೆಜಿ) ಕ್ಲೀನ್ ಲಿಫ್ಟ್ ಸಾಧಿಸಿ ಈ ಹಿಂದಿನ ಕಾಮನ್ವೆಲ್ತ ಮತ್ತು ಗೇಮ್ಸ್ ದಾಖಲೆಯನ್ನು ಮುರಿದಿದ್ದಾರೆ.
ಮೀರಾ ಬಾಯಿ ಅವರು ಅನಂತರ ತನ್ನ ದುಪ್ಪಟ್ಟು ದೇಹ ತೂಕವನ್ನು ಮೀರಿ (103 ಕೆಜಿ, 107 ಕೆಜಿ ಮತು 110 ಕೆಜಿ) ಎಲ್ಲ ಮೂರು ಯಶಸ್ವೀ ಯತ್ನಗಳಲ್ಲಿ ಕ್ಲೀನ್ ಆ್ಯಂಡ್ ಜರ್ಕ್ ಮತ್ತು ಒಟ್ಟಾರೆ ಗೇಮ್ಸ್ ದಾಖಲೆಗಳನ್ನು ಹೊಸದಾಗಿ ಬರೆಯುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದರು.
ಮೀರಾ ಬಾಯಿ ಚಾನು ಅವರು 2014ರ ಗ್ಲಾಸ್‌ಗೊà ಸಿಡಬ್ಲ್ಯುಜಿ ಯಲ್ಲಿ ಬೆಳ್ಳಿ ಪದಕ ಗೆಲ್ಲುವಲಿ ದಾಖಲಿಸಿದ್ದ ನಿರ್ವಹಣೆಯನ್ನು ಇಲ್ಲಿ ಇನ್ನೂ ಉತ್ತಮ ಪಡಿಸಿ ಚಿನ್ನದ ಪದಕ ಗೆದ್ದುಕೊಂಡು ಭಾರತಕ್ಕೆ ಅತೀವ ಹೆಮ್ಮೆ ತಂದರು.
ಮೀರಾ ಬಾಯಿ ಅವರು ಅಂತಿಮವಾಗಿ 196 ಕೆಜಿ ಸ್ಕೋರ್ (86 + 110 ಕೆಜಿ) ದಾಖಲಿಸಿ ಕೆರಾರಾ ನ್ಪೋರ್ಟ್ಸ್ ಮತ್ತು ಲೀಶರ್ ಸೆಂಟರ್‌ನಲ್ಲಿ ಜಮಾಯಿಸಿದ್ದ ಕ್ರೀಡಾಭಿಮಾನಗಳಿಂದ ಕಿವಿಗಡ ಚಿಕ್ಕುವ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.