Advertisement

ದಾಖಲೆ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 4.2 ಲಕ್ಷ ಕೋವಿಡ್ 19 ಮಾದರಿ ಪರೀಕ್ಷೆ

06:35 PM Jul 25, 2020 | Nagendra Trasi |

ನವದೆಹಲಿ:ಭಾರತದಲ್ಲಿ ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ನಡುವೆಯೇ ದೇಶದಲ್ಲಿ ಕಳೆದ 24ಗಂಟೆಯಲ್ಲಿ ಬರೋಬ್ಬರಿ 4,20,000ಕ್ಕೂ ಅಧಿಕ ಎಂಬಂತೆ ದಾಖಲೆ ಪ್ರಮಾಣದಲ್ಲಿ ಕೋವಿಡ್ 19 ಪರೀಕ್ಷೆ ನಡೆಸಿದೆ.

Advertisement

ಕಳೆದ 24ಗಂಟೆಯಲ್ಲಿ 4,20,898 ಕೋವಿಡ್ 19 ಸ್ಯಾಂಪಲ್ಸ್ ಅನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರಿಂದ ಭಾರತ ಕೋವಿಡ್ 19 ಸೋಂಕಿತರ ಪರೀಕ್ಷೆಯಲ್ಲಿ ಹೆಚ್ಚಿನ ಸಾಧನೆ ತೋರಿರುವುದಾಗಿ ವರದಿ ವಿವರಿಸಿದೆ.

ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ದೇಶದಲ್ಲಿ ಪ್ರಯೋಗಾಲಯದ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 2020ರ ಜನವರಿಯಲ್ಲಿ ಒಂದು ಲ್ಯಾಬ್ ಇದ್ದಿದ್ದರೆ, ಅದು ಜುಲೈ ವೇಳೆಗೆ 1301ಕ್ಕೆ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ. 902 ಸರ್ಕಾರಿ ಪ್ರಯೋಗಾಲಯ ಹಾಗೂ 399 ಖಾಸಗಿ ಪ್ರಯೋಗಾಲಯ ಇದರಲ್ಲಿ ಸೇರಿದೆ ಎಂದು ತಿಳಿಸಿದೆ.

ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡಿದ್ದು, ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್ ಎಂಬ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ 19 ಸೋಂಕು ನಿವಾರಣೆಗೆ ಮುಂದಾಗಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next