Advertisement

ನದಿಯ ಮರು ನಿರ್ಮಾಣ ; ಲಾಸ್‌ ಏಂಜಲೀಸ್‌ನಲ್ಲಿ ಅನುಷ್ಠಾನಗೊಳ್ಳಲಿದೆ ಹೊಸ ಯೋಜನೆ

12:00 AM Nov 20, 2022 | Team Udayavani |

ವಿಶ್ವದ ಬಹುತೇಕ ನಗರಗಳಿಗೆ ನದಿಗಳೇ ನೀರಿನ ಮೂಲ. ನದಿಯ ಜಲಾನಯನ ಪ್ರದೇಶದಲ್ಲಿ ಸುರಿಯುವ ಮಳೆಯನ್ನು ಅನುಸರಿಸಿ ಈ ನದಿಗಳಲ್ಲಿನ ನೀರಿನ ಪ್ರಮಾಣವೂ ಏರಿಳಿತ ಕಾಣುತ್ತಿರುತ್ತದೆ. ಸಹಜವಾಗಿಯೇ ಪ್ರವಾಹ ಮತ್ತು ಬರ ಪರಿಸ್ಥಿತಿ ಈ ನಗರಗಳನ್ನೂ ಕಾಡುತ್ತದೆ. ಹವಾಮಾನ ಬದಲಾವಣೆಯ ತೀವ್ರ ಪರಿಣಾಮ ನದಿಗಳ ಮೇಲೂ ಆಗಿದೆ. ಯುರೋಪ್‌ ರಾಷ್ಟ್ರಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನೀರಿನ ತೀವ್ರ ಅಭಾವದ ಕಾರಣದಿಂದಾಗಿ ದಕ್ಷಿಣ ಕ್ಯಾಲಿಫೋರ್ನಿಯಾ ಕ್ಯಾನೋಗಾ ಪಾರ್ಕ್‌ನ ಸುಮಾರು ಆರು ಮಿಲಿಯನ್‌ ಜನರಿಗೆ ನೀರಿನ ಬಳಕೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ. ಈ ನಡುವೆ ಲಾಸ್‌ ಏಂಜಲೀಸ್‌ ಬರಗಾಲ ಎದುರಿಸಲು 2007ರಿಂದಲೇ ಯೋಜನೆಗಳನ್ನು ರೂಪಿಸಿ ಅವುಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಈಗ ಹೊಸದಾಗಿ ನದಿಯನ್ನೇ ಮರು ನಿರ್ಮಾಣ ಮಾಡುವ ಮಹತ್ತರವಾದ ಯೋಜನೆಯನ್ನು ಕೈಗೆತ್ತಿಕೊಂಡಿದೆ.

Advertisement

ಎಲ್ಲಿ ?
ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಈ ಬೃಹತ್‌ ಯೋಜನೆ ಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಸರಿಸುಮಾರು ಎಂಭತ್ತು ವರ್ಷಗಳ ಬಳಿಕ ವಿಶ್ವದಲ್ಲೇ ಬಹುದೊಡ್ಡ ನಿರ್ಮಾಣ ಯೋಜನೆಯೊಂದನ್ನು ಕೈಗೆತ್ತಿಕೊಂಡಿ ರುವ ಅಮೆರಿಕ ಇದನ್ನು ಪೂರ್ಣಗೊಳಿಸಿದರೆ ಇದು ವಿಶ್ವ ದಲ್ಲಿಯೇ ಕಾರ್ಯಗತಗೊಂಡ ಅತೀ ದೊಡ್ಡ ಮೂಲಸೌಕರ್ಯ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ನದಿ ಮರು ನಿರ್ಮಾಣ ಯೋಜನೆಯನ್ನು ಹಂತಹಂತವಾಗಿ ಕಾರ್ಯಗತ ಗೊಳಿಸಲಾಗುತ್ತಿದ್ದು ಯೋಜನೆಯ ಸಂಪೂರ್ಣ ನೀಲನಕ್ಷೆ ಯನ್ನು ಬಿಡುಗಡೆ ಮಾಡಲಾಗಿದೆ. ಈ ನಕ್ಷೆಯಂತೆ ನದಿಗೆ ಕಾಯಕಲ್ಪ ನೀಡಲಾಗುತ್ತಿದ್ದು ಕಾಮಗಾರಿಗಳೆಲ್ಲವೂ ಪೂರ್ಣ ಗೊಂಡಾಗ ನಗರದ ಒಟ್ಟಾರೆ ಚಿತ್ರಣವೇ ಬದಲಾಗಲಿದೆ.

ಏನು?
ಲಾಸ್‌ ಏಂಜಲೀಸ್‌ ಕೌಂಟಿ ಬೋರ್ಡ್‌ ಜೂನ್‌ನಲ್ಲಿ ಹೊಸ ಮಾಸ್ಟರ್‌ ಪ್ಲ್ರಾನ್‌ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 51 ಮೈಲು ಉದ್ದದ ನದಿಯನ್ನು ಮರುರೂಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ನಗರ ಮತ್ತದರ ಸುತ್ತಮುತ್ತಲಿನ ಪ್ರದೇಶಗಳಿಗೆ ಬೇಡಿಕೆಗೆ ತಕ್ಕಷ್ಟು ನೀರನ್ನು ಪೂರೈಸುವ ದೃಷ್ಟಿಯಿಂದ ನೀರಿನ ಮೂಲವನ್ನು ಕಾಯ್ದುಕೊಳ್ಳುವ ಜತೆಯಲ್ಲಿ ಅಕಾಲಿಕ ಮಳೆಯ ಸಂದರ್ಭದಲ್ಲಿ ನದಿಯಲ್ಲಿ ಕಾಣಿಸಿಕೊಳ್ಳುವ ಪ್ರವಾಹ ಭೀತಿಯಿಂದ ನಗರವನ್ನು ರಕ್ಷಿಸುವ ಉದ್ದೇಶದಿಂದ ಈ ಮಹತ್ತರವಾದ ನದಿ ಮರು ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಯಾಕೆ?
ನಗರಗಳು ಬೆಳೆದಂತೆ ನದಿ ಮಾತ್ರವಲ್ಲ ಅದರ ದಡದಲ್ಲಿರುವ ಜೌಗು ಪ್ರದೇಶಗಳು ಅತಿಕ್ರಮಣಗೊಳ್ಳುತ್ತವೆ. ರೈಲ್ವೇ, ರಸ್ತೆಗಳ ನಿರ್ಮಾಣಕ್ಕೆ ನದಿ ದಂಡೆಯಲ್ಲಿರುವ ಮರಗಳನ್ನು ಕಡಿಯಲಾಗುತ್ತದೆ. ಪ್ರವಾಹದ ಅಪಾಯ ಕಡಿಮೆ ಮಾಡಲು ಭೂಮಿಯನ್ನು ಸಮತಟ್ಟುಗೊಳಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಿದ್ದಾಗ ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಳಸಿ ನೀರಿನ ಮೂಲಗಳ ಮೇಲೆ ನಾವು ಹೆಚ್ಚಿನ ಒತ್ತಡ ಹೇರುತ್ತೇವೆ. ಅಷ್ಟು ಮಾತ್ರವಲ್ಲದೆ ಸುರಿಯುವ ಮಳೆ ನೀರನ್ನು ಭೂಮಿ ಇಂಗಿಕೊಳ್ಳಲು ಇನ್ನಿಲ್ಲದ ಅಡೆತಡೆಗಳನ್ನು ಒಡ್ಡಿ ಅಂತರ್ಜಲ ಮಟ್ಟದ ಕುಸಿತಕ್ಕೆ ನಾವೇ ನೇರ ಕಾರಣರಾಗುತ್ತಿದ್ದೇವೆ. ಅಂತಿಮವಾಗಿ ನಮ್ಮ ಬೇಡಿಕೆಗೆ ತಕ್ಕಷ್ಟು ನೀರನ್ನು ಪೂರೈಸಲು ಜಲಮೂಲಗಳಿಗೆ ಸಾಧ್ಯವಾಗದೇ ಹೋದಾಗ ನಮಗೆ ಜೀವಜಲದ ಮಹತ್ವದ ಅರಿವಾಗುತ್ತದೆ. ಇದರ ಜತೆಯಲ್ಲಿ ಪ್ರಕೃತಿಯ ಮೇಲೆ ಮಾನವ ನಡೆಸುತ್ತಿರುವ ನಿರಂತರ ಪ್ರಹಾರದ ಪರಿಣಾಮವಾಗಿ ಹವಾಮಾನ ವೈಪರೀತ್ಯದ ಪರಿಣಾಮಗಳು ಗೋಚರಿಸಲಾರಂಭಿಸಿದ್ದು ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಉಂಟಾಗಿ ಪ್ರಾಣಹಾನಿ, ಆಸ್ತಿಪಾಸ್ತಿ ಗೆ ನಷ್ಟ ಉಂಟಾಗುತ್ತಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಬರದ ಛಾಯೆ ಇಡೀ ವಿಶ್ವವನ್ನು ಆವರಿಸತೊಡಗಿದೆ. ನೀರಿಲ್ಲದ ಜೀವನವನ್ನು ಊಹಿಸಲೂ ಅಸಾಧ್ಯ. ಆದರೆ ನೀರಿನ ಸಂರಕ್ಷಣೆಗೆ ನೀಡಬೇಕಾದ ಒತ್ತನ್ನು ನೀಡದೇ ಇರುವುದರಿಂದ ಭೂಮಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಲೇ ಸಾಗಿದೆ. ಪ್ರವಾಹಕ್ಕಿಂತಲೂ ಬರ ಹೆಚ್ಚು ಅಪಾಯಕಾರಿ ಎಂಬುದು ನಮ್ಮ ಅರಿವಿಗೆ ಬಂದಾಗ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಇದುವೇ ಲಾಸ್‌ ಏಂಜಲೀಸ್‌ ಮತ್ತು ಸುತ್ತಲಿನ ಪ್ರದೇಶಗಳ ಸದ್ಯದ ಸ್ಥಿತಿಗತಿ.

ಏನಾಗಿತ್ತು?
1938ರ ಫೆಬ್ರವರಿಯಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ಭಾರೀ ಮಳೆಯಾಗಿತ್ತು. ತಗ್ಗು ಪ್ರದೇಶ, ಬೀದಿ, ಕಾಲುವೆಗಳಲ್ಲಿ ನೀರು ತುಂಬಿಕೊಂಡು ಸಂಚಾರ ಕಷ್ಟವಾಯಿತು. ಫೆ. 27ರಂದು ಬೀಸಿದ ಬಿರುಗಾಳಿಯ ಪರಿಣಾಮ ಮುಂದಿನ 24 ಗಂಟೆಯಲ್ಲಿ ಮತ್ತೆ ಎರಡನೇ ಬಾರಿಗೆ ನಗರದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿಯಿತು. ಪರಿಣಾಮವಾಗಿ ಜಲಾಶಯಗಳು ತುಂಬಿ ಹರಿದವು, ಅಣೆಕಟ್ಟುಗಳಲ್ಲಿ ನೀರು ಉಕ್ಕಿದವು. ಲಾಸ್‌ ಏಂಜಲೀಸ್‌ ನದಿಯ ಕಡೆಗೆ ಹರಿಯುವ ಪಕೊಯಿಮಾ ವಾಶ್‌ ಮತ್ತು ತುಜುಂಗಾ ವಾಶ್‌ನಲ್ಲಿ ಪ್ರವಾಹದ ನೀರು ತುಂಬಿಕೊಂಡಿತು. ಇದರಿಂದ ಸೈಂಟ್‌ ಲೂಯಿಸ್‌ನಲ್ಲಿರುವ ಮಿಸಿಸಿಪ್ಪಿ ನದಿ ನೀರಿನಲ್ಲಿ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಯಿತು. ಲಂಕರ್‌ಶಿಮ್‌ ಸೇತುವೆ ಕುಸಿಯಿತು, ಮನೆಗಳು ಪ್ರವಾಹದಲ್ಲಿ ಮುಳುಗಿಹೋದವು. ಸುಮಾರು 87 ಮಂದಿ ಮೃತಪಟ್ಟರು. ರಸ್ತೆ, ಚರಂಡಿ, ಅನಿಲ ಸೇರಿದಂತೆ ಎಲ್ಲ ಸಂಪರ್ಕಗಳು ಕಡಿತಗೊಂಡವು.

Advertisement

ಹೇಗಿದೆ ಪರಿಸ್ಥಿತಿ?
ಲಾಸ್‌ ಏಂಜಲೀಸ್‌ನಲ್ಲಿ ಹರಿಯುವ ಪಕೊಯಿಮಾ ವಾಶ್‌ ಮತ್ತು ತುಜುಂಗಾ ವಾಶ್‌ ದೊಡ್ಡ ನದಿಗಳೇನಲ್ಲ. ಇವು ಜಲಮೂಲಗಳು ಮಾತ್ರ. ಇವೆರಡರಲ್ಲೂ ನೀರಿನ ಹರಿವು ಹೆಚ್ಚೇನಿಲ್ಲ ಮಾತ್ರವಲ್ಲ ಅಷ್ಟೇನೂ ಆಳವನ್ನೂ ಹೊಂದಿಲ್ಲ. ಇವು ವರ್ಷದ ಬಹುತೇಕ ತಿಂಗಳು ಬರಡಾಗಿಯೇ ಇರುತ್ತವೆ. ಸದಾ ಒಣಗಿದ ಭೂಮಿಯಂತಿರುವ ಈ ಎರಡು ನದಿಗಳಲ್ಲಿ ಸರಿಸುಮಾರು 9 ದಶಕಗಳ ಹಿಂದೆ ಒಂದೇ ದಿನ ಸುರಿದ ಭಾರೀ ಮಳೆಯ ಪರಿಣಾಮ ಪ್ರವಾಹ ತಲೆದೋರಿ ಭಾರೀ ಆಸ್ತಿಪಾಸ್ತಿ, ಪ್ರಾಣ ಹಾನಿ ಸಂಭವಿಸಿತ್ತು. ಸ್ಯಾನ್‌ ಫೆರ್ನಾಂಡೋ ಕಣಿವೆಯಲ್ಲಿ ಹುಟ್ಟುವ ಈ ನದಿಗಳು 51 ಮೈಲುಗಳಷ್ಟು ದೂರದವರೆಗೆ ಹರಿಯುತ್ತವೆ. ಕ್ಯಾನೋಗಾ ಪಾರ್ಕ್‌ನ ಸಮೀಪ ಪ್ರಾರಂಭವಾಗಿ ಲಾಂಗ್‌ ಬೀಚ್‌ನಲ್ಲಿರುವ ಸಾಗರವನ್ನು ಸೇರುತ್ತದೆ. ಮಿಸಿಸಿಪ್ಪಿಯ 2,000 ಮೈಲಿಗಿಂತ ಹೆಚ್ಚು ವಿಸ್ತಾರವಾಗಿ ಹರಿಯುವ ಈ ನದಿಗಳು ಭಾರೀ ಪ್ರಮಾಣದಲ್ಲಿ ನೀರನ್ನು ತನ್ನ ಒಡಲೊಳಗೆ ತುಂಬಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಏನು ಕ್ರಮ?
ಲಾಸ್‌ ಏಂಜಲೀಸ್‌ನಲ್ಲಿ ಹರಿಯುವ ನದಿಯಲ್ಲಿನ ಪ್ರವಾಹದ ಅಪಾಯದ ಅರಿವಿರುವುದರಿಂದ 1913ರಿಂದಲೇ ಅದಕ್ಕೆ ತಡೆ ಹಾಕುವ ಪ್ರಯತ್ನ ನಡೆಸಲಾಗುತ್ತಿತ್ತು. ಮಿಸಿಸಿಪ್ಪಿಯ ಪಶ್ಚಿಮದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಕಾಪ್ಸ್‌ì ಆಫ್ ಎಂಜಿನಿಯರ್ಸ್‌ ಕೈಗೊಂಡ ಅತೀದೊಡ್ಡ ಸಾರ್ವಜನಿಕ ಕಾರ್ಯ ಯೋಜನೆ ಇದಾಗಿದ್ದು, ಇದರಲ್ಲಿ ನದಿಯ ಅಗಲ, ಆಳವನ್ನು ಹೆಚ್ಚಿಸುವುದು, ನದಿಯಲ್ಲಿ ನೀರು ನೇರವಾಗಿ ಮತ್ತು ಸಮಪ್ರಮಾಣದಲ್ಲಿ ಹರಿಯುವಂತಾಗಲು ಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸುವುದು ಒಳಗೊಂಡಿತ್ತು. ವಿಮಾನ ನಿಲ್ದಾಣದ ರನ್‌ ವೇ ಮಾದರಿಯಲ್ಲಿ ನಿರ್ಮಾಣಗೊಂಡ ಈ ಯೋಜನೆಯಲ್ಲಿ ಸುಮಾರು ಶತಕೋಟಿ ಗ್ಯಾಲನ್‌ಗಳಷ್ಟು ಮಳೆ ನೀರನ್ನು ತ್ವರಿತವಾಗಿ ಸಾಗರಕ್ಕೆ ಸಾಗಿಸಲು ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಪ್ರವಾಹದ ವೇಳೆ ತಗ್ಗು ಪ್ರದೇಶ ಹಾಗೂ ನಗರಗಳ ಸಂರಕ್ಷಣೆಗಾಗಿ ಲಾಸ್‌ ಏಂಜಲೀಸ್‌ನಲ್ಲಿ ಇದರ ನಿರ್ಮಾಣವಾಯಿತು. ಈ ಎಲ್ಲ ನಿರ್ಮಾಣ ಕಾಮಗಾರಿಗಳು ನಡೆದ ಬಳಿಕ ನದಿ ಯಲ್ಲಿ ನೀರು ಸಮರ್ಪಕವಾಗಿ ಹರಿಯುವಂತಾಗಿದೆಯಲ್ಲದೆ ಪ್ರವಾಹವೂ ಕಾಣಿಸಿ ಕೊಂಡಿಲ್ಲ. 1960ರ ದಶಕ ದಲ್ಲೇ ಇದು ಪೂರ್ಣ ಗೊಂಡಿತ್ತು. ನದಿ ಯಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್‌ ಗೋಡೆಗಳ ವಿರುದ್ಧ ಪರಿಸರವಾದಿಗಳು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಇದ್ದರು. ಇದಕ್ಕಾಗಿ ಸರಿಸುಮಾರು ಎಂಭತ್ತು ವರ್ಷಗಳ ಬಳಿಕ ಇದೀಗ ಸುಮಾರು 51 ಮೈಲು ಉದ್ದ ಹರಿಯುವ ನದಿಯನ್ನು ಮರು ರೂಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಹೇಗೆ?
ನದಿಯಲ್ಲಿರುವ ಕಾಂಕ್ರೀಟ್‌ಗೋಡೆಗಳನ್ನು ತೆರವು ಮಾಡಿದರೆ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ಉಳಿಸಿಕೊಂಡು ಯೋಜನೆ ರೂಪಿಸುವುದು ಅನಿವಾರ್ಯ. ಇದಕ್ಕಾಗಿ ಸೌತ್‌ ಗೇಟ್‌, ಲಿನುÌಡ್‌, ಡೌನಿ, ಕಾಂಪ್ಟನ್‌ ಮತ್ತು ಬೆಲ್‌ ಗಾರ್ಡನ್‌ಗಳನ್ನು ಒಳಗೊಂಡಿರುವ ಗೇಟೆÌà ನಗರ ಪ್ರದೇಶವಿರುವ ನದಿಯ ದಕ್ಷಿಣ ಭಾಗದ ಕಾಂಕ್ರೀಟ್‌ ಚಾನಲ್‌ಗ‌ಳ ಮೇಲೆ ಪ್ಲ್ರಾಟ್‌ಫಾರ್ಮ್, ಉದ್ಯಾನ, ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ ಮಾಡಲಾಗುತ್ತದೆ. ಬೆಟ್ಟ, ಕುದುರೆ ಮಾರ್ಗ, ವಾಕಿಂಗ್‌ ಟ್ರ್ಯಾಕ್‌ಗಳನ್ನು ನಿರ್ಮಾಣ ಮಾಡಿ ನದಿಯ ಎರಡೂ ಬದಿ ಸುಮಾರು ಒಂದು ಮೈಲು ಉದ್ದದ ಹಸುರು ಪ್ರದೇಶಗಳನ್ನು ನಿರ್ಮಿಸಲಾಗುತ್ತದೆ.

ವಿರೋಧ ಯಾಕೆ?
ನದಿ ಮರು ನಿರ್ಮಾಣದ ಯೋಜನೆಗೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾರಣ ಇದು ಹೆಚ್ಚು ನೈಸರ್ಗಿಕ ಆವೃತ್ತಿಗೆ ಒತ್ತು ನೀಡುತ್ತದೆ. ಇದರಿಂದ ನದಿ ತೀರದಲ್ಲಿ ವಾಸ ಮಾಡುವ ಬಡ ವರ್ಗದ ಜನರನ್ನು ಸ್ಥಳಾಂತರಿಸುವುದು ಅನಿ ವಾರ್ಯವಾಗಿರುವುದರಿಂದ ಅವರು ಅತಂತ್ರ ರಾಗುತ್ತಾರೆ. ಅಷ್ಟು ಮಾತ್ರವಲ್ಲದೆ ನಿಸರ್ಗ ದತ್ತ ಸೃಷ್ಟಿಗೆ ವಿರುದ್ಧವಾಗಿ ಈ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗು ತ್ತಿರುವು ದರಿಂದ ಇದು ನಗರದ ಸಮಸ್ಯೆಗೆ ಶಾಶ್ವತ ಪರಿಹಾರವಾಗ ಲಾರದು ಎಂಬುದು ಅವರ ವಾದ. ನಗರದ ದಶಕ ಗಳ ನೀರಿನ ಬೇಡಿಕೆ ಮತ್ತು ನಗರದ ಅಭಿವೃದ್ಧಿ ಸಾಧ್ಯತೆಯನ್ನು ಗಮನದಲ್ಲಿರಿಸಿ ನದಿಯ ಮರು ನಿರ್ಮಾಣ ಯೋಜನೆ ಅನುಷ್ಠಾನಿಸಲಾಗುತ್ತಿದ್ದು ಅಪಾರ ಪ್ರಮಾಣದ ಹಣವನ್ನು ವೆಚ್ಚ ಮಾಡ ಲಾಗುತ್ತಿದೆ. ಆದರೆ ಈ ಯೋಜನೆಯ ಉದ್ದೇಶ ಈಡೇರುವುದು ಕಷ್ಟಸಾಧ್ಯ ಎಂಬುದು ಅವರ ಇನ್ನೊಂದು ಆರೋಪ.

ಮುಂದೇನು?
2007ರಿಂದಲೇ ಕ್ಯಾಲಿಫೋರ್ನಿಯಾದಲ್ಲಿ ನೀರಿನ ಬಳಕೆ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಇದಕ್ಕಾಗಿ ನೀರಿನ ಸಂಸ್ಕರಣ ಸೌಲಭ್ಯ, ಹೆಚ್ಚು ನೀರು- ಸಮರ್ಥ ಉಪಕರಣಗಳ ಬಳಕೆ ಮತ್ತು ವಿವಿಧ ಸಂರಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಲಾಸ್‌ ಏಂಜಲೀಸ್‌ಗೆ ಅರ್ಧದಷ್ಟು ನೀರನ್ನು ಲಾಸ್‌ ಏಂಜಲೀಸ್‌ ಅಕ್ವೆಡೆಕ್ಟ್ ಮತ್ತು ಶೇ. 40ರಷ್ಟನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಮೆಟ್ರೋಪಾಲಿಟನ್‌ ವಾಟರ್‌ ಡಿಸ್ಟ್ರಿಕ್ಟ್ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇದು ಕೊಲೊರಾಡೋ ನದಿ ಮತ್ತು ಉತ್ತರ ಕ್ಯಾಲಿಫೋರ್ನಿಯಾವನ್ನು ಅವಲಂಬಿಸಿದೆ. ಆದರೆ ಇಲ್ಲಿ ಬರಗಾಲ ಹೆಚ್ಚಾಗಿರುವುದರಿಂದ ನೀರು ಪೂರೈಕೆ ಅನಿಶ್ಚಿತತೆಯಿಂದ ಕೂಡಿರುತ್ತದೆ. ಹೀಗಾಗಿ ವಸಂತ ಋತುವಿನಲ್ಲೇ ನೀರು ಬಳಕೆಯ ಮೇಲೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಿರ್ಬಂಧ ಹೇರಿದ್ದು, ಉತ್ತರ ಕ್ಯಾಲಿಫೋರ್ನಿಯಾದ ಮೇಲೂ ಪರಿಣಾಮ ಬೀರಿದೆ.

ಯಾವ ಹಂತದಲ್ಲಿದೆ?
2019ರಲ್ಲಿ ಲಾಸ್‌ ಏಂಜಲೀಸ್‌ ಕೌಂಟಿಯು ಜಲಾಶಯಗಳಿಂದ 97 ಶತಕೋಟಿ ಗ್ಯಾಲನ್‌ ನೀರನ್ನು ಪಡೆದುಕೊಂಡಿದೆ. ಇದು ವರ್ಷಕ್ಕೆ 2.4 ಮಿಲಿಯನ್‌ ಜನರಿಗೆ ಸಾಕಾಗುತ್ತದೆ. ಕೆಲವು ದೊಡ್ಡ ಅಂತರ್ಜಲ ಸಂಸ್ಕರಣ ಘಟಕಗಳು ನಿರ್ಮಾಣ ಹಂತದಲ್ಲಿವೆ. ಸ್ಥಳೀಯ ತ್ಯಾಜ್ಯ ನೀರಿನ ಸಂಸ್ಕರಣ ಘಟಕಗಳ ನವೀಕರಣಗಳೂ ನಡೆಯುತ್ತಿವೆ. 2045ರ ವೇಳೆಗೆ ನಗರದ ಶೇ. 70ರಷ್ಟು ನೀರನ್ನು ಸ್ಥಳೀಯ ಮೂಲಗಳಿಂದ, ಮಳೆ, ಅಂತರ್ಜಲದಿಂದ ಪಡೆಯಬಹುದು. ಹೊಸ ಯೋಜನೆ ಪೂರ್ಣಗೊಂಡರೆ ಲಾಸ್‌ ಏಂಜಲೀಸ್‌ನಲ್ಲಿ ಮುಂದೆಂದು ಬರಗಾಲ ಸೃಷ್ಟಿಯಾಗದು ಎನ್ನುತ್ತಾರೆ ಅಧಿಕಾರಿಗಳು.

-  ವಿದ್ಯಾ ಇರ್ವತ್ತೂರು

Advertisement

Udayavani is now on Telegram. Click here to join our channel and stay updated with the latest news.

Next