Advertisement
ಬ್ಯಾಂಕ್ ಸಿಇಒ ನೇಮಕದ ವಿಧಾನಗಳನ್ನು ಬಿಗಿಗೊಳಿಸಲು ಆರ್‌ಬಿಐ ನಿರ್ಧರಿಸಿದೆ. ಈಗಾಗಲೇ ಬ್ಯಾಂಕ್ ಚೇರ್‌ಮನ್ ಸಂಜೀವ್ ಮಿಶ್ರಾಗೆ ಈ ಸಂಬಂಧ ಬರೆದಿರುವ ಪತ್ರದಲ್ಲಿ, ಶಿಖಾರನ್ನು ನಾಲ್ಕನೇ ಬಾರಿಗೆ ಆಯ್ಕೆ ಮಾಡಿರುವುದಕ್ಕೆ ಕಾರಣ ನೀಡುವಂತೆ ಸೂಚಿಸಿದೆ. ಬ್ಯಾಂಕ್‌ನ ಸ್ವತ್ತು ಗುಣಮಟ್ಟ ಇಳಿಕೆಯಾಗಿದ್ದು, ಸಾಧನೆಯೂ ಕಳಪೆ ಯಾಗಿದೆ ಎಂದು ಆರ್‌ಬಿಐ ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿಖಾ ಶರ್ಮಾರನ್ನು ಕೇವಲ ಒಂದು ವರ್ಷದ ಅವಧಿಗೆ ಮುಂದುವರಿಸಿ, ಈ ಅವಧಿಯಲ್ಲಿ ಹೊಸ ಸಿಇಒ ನೇಮಕ ಮಾಡುವ ಬಗ್ಗೆ ಮಂಡಳಿ ಚಿಂತನೆ ನಡೆಸಿದೆ ಎನ್ನಲಾಗಿದೆ. 2009ರಲ್ಲಿ ಮೊದಲ ಬಾರಿಗೆ ಸಿಇಒ ಆಗಿ ನೇಮಕವಾಗಿದ್ದ ಶಿಖಾ, ಸದ್ಯ ಮೂರನೇ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್‌ನಲ್ಲಿ ಅವರ ನಾಲ್ಕನೇ ಅವಧಿ ಆರಂಭವಾಗಲಿದೆ.