ಬೆಳ್ತಂಗಡಿ: ಚುನಾವಣೆಗಾಗಿ ದ.ಕ.ದಲ್ಲಿ ಕೋಮಗಲಭೆ ಉಂಟು ಮಾಡಲಾಗುತ್ತಿದೆ. ಸಾಮರಸ್ಯ ನಡಿಗೆಗೆ ಪಕ್ಷ ಮುಖ್ಯ ಅಲ್ಲ. ಜಿಲ್ಲೆಯ ಸಾಮರಸ್ಯವೇ ಮುಖ್ಯ. ಇಲ್ಲಿ ಯಾವುದೇ ಘೋಷಣೆಗಳಿಗೆ ಅವಕಾಶ ಇಲ್ಲ. ಕೇವಲ ಮೌನ ನಡಿಗೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಾತ್ಯತೀತ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಡಿ.12ರಂದು ಫರಂಗಿ ಪೇಟೆಯಿಂದ ಮಾಣಿವರೆಗೆ ನಡೆಯುವ ಸಾಮರಸ್ಯ ನಡಿಗೆ ಸೌಹಾರ್ದದ ಕಡೆಗೆ ಕುರಿತು ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ಬಿಜೆಪಿಗೆ ಹೋಗಲಾರೆ
ಕೆಲವು ಮಾಧ್ಯಮಗಳಿಗೂ ಸಂಯಮದ ಅಗತ್ಯವಿದೆ. ಇಲ್ಲಸಲ್ಲದ್ದನ್ನು ಇಡೀ ದಿನ ಪ್ರಚಾರ ಮಾಡಬಾರದು. ಬಂಗೇರ ಬಿಜೆಪಿಗೆ ಎಂದು ಅಪಪ್ರಚಾರ ಮಾಡಿದರು. ಸ್ಪಷ್ಟನೆ ನೀಡಿದರೆ ಅದನ್ನು ಸಣ್ಣದಾಗಿ ಹಾಕಿದರು. ನಾನು ಬಿಜೆಪಿಗೆ ಖಂಡಿತ ಹೋಗುವುದಿಲ್ಲ. ಬಿಜೆಪಿಗೆ ಹೋಗುವುದು ಎಂದರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ ಎಂದರು.
ಜಿಲ್ಲೆಗೆ ಕಳಂಕ ತರುವ ಕೆಲಸ
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಬದುಕಿಗೆ ಒಡ್ಡಿಕೊಂಡವನು ನಾನು. ಅಂದಿನ ಹಳ್ಳಿಗಳಲ್ಲಿ ಜಾತಿಗಳ ನಡುವೆ ವೈಷಮ್ಯ ಇರಲಿಲ್ಲ. ಇತ್ತೀಚೆಗೆ ಮನುಷ್ಯ, ಮನುಷ್ಯರ ನಡುವೆ ವರ್ಗ ಸಂಘರ್ಷ ತಂದಿಡುವ ಕೆಲಸವನ್ನು ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಮಾಡುತ್ತಿವೆ. ದ್ವೇಷದ ರಾಜಕೀಯ ಹರಡಿಸುತ್ತಿವೆ. ಇದು ಸಾಮರಸ್ಯಕ್ಕೆ ದೊಡ್ಡ ಗಂಡಾಂತರ. ಬುದ್ಧಿವಂತರ ಜಿಲ್ಲೆಯಲ್ಲಿ ಘರ್ಷಣೆ ಮಾಡಿ ಜಿಲ್ಲೆಗೆ ಕಳಂಕ ತರುವ ಕೆಲಸ ನಡೆದಿದೆ ಎಂದರು.
ಸಮಾಲೋಚನಾ ಸಭೆಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಹಿಂದುಳಿದ ಘಟಕಗಳ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ರಾಜಶೇಖರ ಅಜ್ರಿ, ಗ್ರಾಮಾಂತರ ಅಧ್ಯಕ್ಷ ಶ್ರೀನಿವಾಸ ಕಿಣಿ, ಕೆಪಿಸಿಸಿ ಸದಸ್ಯ ರಾಮಚಂದ್ರ ಗೌಡ, ಸಿಪಿಐಎಂ ಕಾರ್ಯದರ್ಶಿ ಶಿವಕುಮಾರ್, ರೈತ ಸಂಘದ ಬಿ.ಎಂ. ಭಟ್, ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗ ಸಂಚಾಲಕ ಚಂದು ಎಲ್, ಜಿ.ಪಂ. ಸದಸ್ಯರಾದ ಧರಣೇಂದ್ರ, ಸಾಹುಲ್ ಹಮೀದ್ ಕೆ.ಕೆ., ನಮಿತಾ, ಶೇಖರ ಕುಕ್ಕೇಡಿ, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಸದಸ್ಯ ಪ್ರವೀಣ್, ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷ ಡಿ. ಜಗದೀಶ್, ಸದಸ್ಯರಾದ ಸಂತೋಷ್ ಕುಮಾರ್ ಜೈನ್, ಮಮತಾ ವಿ. ಶೆಟ್ಟಿ, ನಳಿನಿ ವಿಶ್ವನಾಥ್, ರಮೇಶ್ ಪೂಜಾರಿ, ಜೆಡಿಎಸ್‌ನ ಸುದರ್ಶನ ಹೆಗ್ಡೆ, ಕಾಂಗ್ರೆಸ್‌ನ ಮುಖಂಡರಾದ ಹರೀಶ ಗೌಡ ಬಂದಾರು, ನಾಗರಾಜ ಲಾೖಲ, ಪ್ರಮೋದ್ ರೆಖ್ಯ, ಪದ್ಮನಾಭ ಸಾಲ್ಯಾನ್ ಮಾಲಾಡಿ, ಮೋಹನ ಗೌಡ ಕಲ್ಮಂಜ, ಇಸುಬು ಇಳಂತಿಲ, ಅಶ್ರಫ್ ನೆರಿಯ, ಶ್ರೀನಿವಾಸ್ ಉಜಿರೆ, ಬಿ.ಎಂ. ಹಮೀದ್, ರಫೀಕ್ ಸವಣಾಲು, ವಿಠಲ ಕುಕ್ಕೇಡಿ, ಅಶೊಕ್ ಪಾಣೂರು, ಮಲಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್‌ನ ಮ್ಯಾಥ್ಯೂ ಎ.ಸಿ., ಅಜಯ್ ಬೆಳ್ತಂಗಡಿ, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕರೀಂ ಗೇರುಕಟ್ಟೆ, ಕರ್ನಾಟಕ ಆದಿವಾಸಿ ಮಲೆಕುಡಿಯ ಸಂಘದ ಸಂಚಾಲಕ ಜಯಾನಂದ ಪಿಜಕಳ, ಮೂಲನಿವಾಸಿ ಮಲೆಕುಡಿಯ ಸಂಘದ ಕಾರ್ಯದರ್ಶಿ ಲೋಕೇಶ್ ಬಿ.ಕೆ., ಡಿಎಸ್‌ಎಸ್‌ನ ಬಿ.ಕೆ. ವಸಂತ್, ನೇಮಿರಾಜ ಕಿಲ್ಲೂರು, ನಾರಾಯಣ ಪುದುವೆಟ್ಟು, ಆದಿವಾಸಿ ಹಕ್ಕುಗಳ ಹೋರಾಟ ಸಮಿತಿಯ ಶೇಖರ್ ಎಲ್., ಆದಿವಾಸಿ ಸಮನ್ವಯ ಸಮಿತಿ ಸದಸ್ಯ ವಸಂತ ನಡ, ತಾಲೂಕು ಬೈರ ಸಮಾಜ ಸಂಘದ ಅಧ್ಯಕ್ಷ ಉದಯ್‌ಕುಮಾರ್ ಲಾೖಲ, ತಾಲೂಕು ಮುಸ್ಲಿಂ ಒಕ್ಕೂಟದ ನಜೀರ್ ಬೆಳ್ತಂಗಡಿ, ಹಸನಬ್ಬ ಚಾರ್ಮಾಡಿ, ಜಮೀಯತುಲ್ ಫಲಾಹ್‌ನ ಕಾಸಿಂ ಮಲ್ಲಿಗೆಮನೆ, ಉಮ್ಮರ್‌ಕುಂಞಿ ನಾಡ್ಜೆ, ಅಲ್ಪಸಂಖ್ಯಾಕ ಘಟಕ ಮುಖಂಡ ಅಬ್ದುಲ್ ರಹಿಮಾನ್ ಪಡ್ಪು , ಪ್ರಗತಿಪರ ಚಿಂತಕ ದಮ್ಮಾನಂದ, ಜಯರಾಮ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.