Advertisement

“ಅಪರಾಧ ಕೃತ್ಯಗಳಲ್ಲಿ ಪುನರಪಿ ತೊಡಗಿದರೆ ಗೂಂಡಾ ಕಾಯ್ದೆ’

10:58 PM Sep 13, 2019 | Team Udayavani |

ಮಹಾನಗರ: ಕ್ರಿಮಿನಲ್‌ ಚಟುವಟಿಕೆ ಮತ್ತು ಕಾನೂನು ಉಲ್ಲಂಘನೆಯಂತಹ ಕೃತ್ಯಗಳನ್ನು ಪುನರಪಿ ಎಸಗುವ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಅಥವಾ ಕೋಕಾ (ಸಂಘಟಿತ ಅಪರಾಧ ನಿಯಂತ್ರಣ) ಕಾಯ್ದೆ ಜಾರಿಯಂತಹ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಹೇಳಿದರು.

Advertisement

ಶುಕ್ರವಾರ ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ವಿಶೇಷ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೌಡಿ ಶೀಟರ್‌ಗಳಿಗೆ ಮನಃ ಪರಿವರ್ತನೆ ಹೊಂದಿ ಸನ್ನಡತೆಯಿಂದ ಜೀವನ ಸಾಗಿಸಲು ವಿನೂತನ ಆಫರ್‌ ಒಂದನ್ನು ನೀಡಲಾಗಿದ್ದು, ಈಗಾಗಲೇ ಹಲವಾರು ಮಂದಿ ರೌಡಿಗಳು ಇದಕ್ಕೆ ಸ್ಪಂದಿಸಿ ಮುಂದೆ ಬರುತ್ತಿದ್ದಾರೆ. ಒಂದೊಮ್ಮೆ ಯಾವನೇ ರೌಡಿ ಶೀಟರ್‌ ಇದನ್ನು ನಿರ್ಲಕ್ಷಿಸಿ ಅಪರಾಧ ಕೃತ್ಯಗಳನ್ನು ಮುಂದುವರಿಸಲು ಇಚ್ಛಿಸಿದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿನ ಕ್ರಮ ಜರಗಿಸಲಾಗುವುದು ಎಂದರು.

“ಆಶಾ ಕಿರಣ’ ಘಟಕ ಆರಂಭ
ರೌಡಿಗಳ ಜತೆ ಸಂವಾದ ನಡೆಸಿ ಅವರನ್ನು ಸರಿ ದಾರಿಗೆ ತರಲು “ಆಶಾ ಕಿರಣ’ ಎಂಬ ಘಟಕವನ್ನು ಆರಂಭಿಸಲಾಗಿದೆ. ಠಾಣಾ ವಾರು ಹಲವು ಮಂದಿ ರೌಡಿಗಳು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಅವರನ್ನು ಕೌನ್ಸೆ ಲಿಂಗ್‌ ನಡೆಸಲಾಗುವುದು. ಅವರಿಗೆ ಪುನ ರ್ವಸತಿ ಕಲ್ಪಿಸುವ ಬಗ್ಗೆ ಈ ತಿಂಗಳ ಅಂತ್ಯಕ್ಕೆ ವೃತ್ತಿ ತರಬೇತಿ ನಡೆಸಲಾಗುವುದು. ಮಾದಕ ದ್ರವ್ಯ ಮೂಲೋತ್ಪಾಟನೆ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಮಾ ಯಕ ಯುವಕ- ಯುವತಿಯರನ್ನು ಮಾದಕ ವ್ಯಸನದಿಂದ ಮುಕ್ತ ಮಾಡಲು ಕ್ಯಾಂಪಸ್‌ ಕನೆಕ್ಟ್ ಯೋಜನೆಯನ್ನು ಆರಂಭಿಸ ಲಾಗಿದ್ದು, ಶೀಘ್ರ ಅದರ ಉದ್ಘಾ ಟನೆ ಮಾಡಲಾಗುವುದು ಎಂದರು.

ಪೊಲೀಸರ ಕಲ್ಯಾಣಕ್ಕಾಗಿ ಆಡಳಿತಾತ್ಮಕ ಕೆಲಸ ಸುಧಾರಿಸಲು ಈಮೇಲ್‌ ಐಡಿಯನ್ನು ನೀಡಲಾಗಿದೆ. ಯಾವುದೇ ಸಮಸ್ಯೆಯನ್ನು ಅವರು ಈಮೇಲ್‌ ಮೂಲಕ ಕಳುಹಿಸ ಬಹುದಾಗಿದ್ದು, 3 ದಿನಗಳೊಳಗೆ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಮಾಡಲಾಗಿದೆ. ಶಕ್ತಿ ನಗ ‌ರದಲ್ಲಿ ಶಿಥಿಲಗೊಂಡಿರುವ ಪೊಲೀಸ್‌ ವಸತಿ ಗೃಹಗಳಲ್ಲಿ ಇರುವ ಪೊಲೀಸ್‌ ಸಿಬಂದಿ ಯನ್ನು ಹೊಸ ವಸತಿ ಗೃಹಗಳಿಗೆ ಸ್ಥಳಾಂತರಿ ಸಲು ಕ್ರಮ ವಹಿಸಲಾಗಿದೆ ಎಂದರು.

ಹೊರ ಜಿಲ್ಲೆಗಳಿಂದ ಬಂದು ಇಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್‌ ಸಿಬಂದಿ ಇಲ್ಲಿನ ತುಳು ಭಾಷೆಯನ್ನು ಕಲಿತು ಸಂಸ್ಕೃತಿ, ಆಚಾರ ವಿಚಾರಗಳನ್ನು ಅರಿತುಕೊಳ್ಳಲು ಪ್ರಯತ್ನಿಸ ಬೇಕು ಎಂದು ಆಯುಕ್ತರು ಸಲಹೆ ಮಾಡಿದರು.

Advertisement

ಕೊನೆಯಲ್ಲಿ “ಈ ದಿನದ ಕವಾಯತ್‌ಗ್‌ ವಿಶೇಷವಾದ್‌ ಆಶೀರ್ವಾದ ಮಲ್ತ್‌ದ್‌ ಪೊಲೀಸ್‌ದಕ್ಲೆನ ಒಟ್ಟುಗು ಪ್ರತಿ ಹೆಜ್ಜೆಡ್‌ಲಾ ಜತೆಯಾದ್‌ ಇಪ್ಪುನ ತುಳುನಾಡ್‌ದ ಎನ್ನ ಪೂರಾ ಅಣ್ಣ ತಮ್ಮನಕ್ಲೆಗ್‌ ಬೊಕ್ಕ ಮೆಗಿª ಪಲಿನಕ್ಲೆಗ್‌ ಎನ್ನ ಉಡಲ್‌ ದಿಂಜಿನ ಸೊಲ್ಮೆಲು. ನಿಕ್ಲೆನ ಬೆಂಬಲೊಡು ಕುಡ್ಲನ್‌ ಜಗತ್ತ್ಡ್‌ ಅತ್ಯಂತ ಶಾಂತಿಯುತವಾಯಿನ ನಗರವಾದ್‌ ಮಲ್ಪುಗ, ಸೊಲ್ಮೆಲು’ ಎಂದು ತುಳುವಿನಲ್ಲಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಮಕ್ಕಳಿಗೆ ವೃತ್ತಿ ತರಬೇತಿ
ಪೊಲೀಸರ ಮಕ್ಕಳಿಗೆ ಉನ್ನತ ಶಿಕ್ಷಣ ಅಥವಾ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ಸೂಕ್ತ ತರಬೇತಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

30,000 ಬೀಟ್‌ ಸದಸ್ಯರ ಸೇರ್ಪಡೆ
ಪೊಲೀಸ್‌ ವ್ಯವಸ್ಥೆಯನ್ನು ಹೆಚ್ಚು ಜನಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರಂಭಿಸಿದ “ಮೈ ಬೀಟ್‌ ಮೈ ಪ್ರೈಡ್‌’ಗೆ ತಿಂಗಳಲ್ಲಿ 30,000 ನಾಗರಿಕರು ಸದಸ್ಯರಾಗಿದ್ದಾರೆ. ಒಟ್ಟು 756 ಬೀಟ್‌ ಗ್ರೂಪ್‌ಗ್ಳಿದ್ದು, ಮುಂದಿನ 2- 3 ತಿಂಗಳಲ್ಲಿ ಬೀಟ್‌ ಸದಸ್ಯರ ಸಂಖ್ಯೆ 2.5 ಲಕ್ಷಕ್ಕೇರಲಿದೆ. ಬೀಟ್‌ ಪ್ರತಿನಿಧಿಗಳು ವಿವಿಧ ಸಮಸ್ಯೆಗಳನ್ನು ತರುತ್ತಿದ್ದಾರೆ. ಅವರು ನೀಡಿದ ಮಾಹಿತಿಯ ಮೂಲಕ ಈಗಾಗಲೇ ಕೆಲವು ಸಮಸ್ಯೆಗಳು ಬಗೆಹರಿದಿವೆ, ಕೆಲವು ಜನ ಹಳೆ ಆರೋಪಿಗಳ ಪತ್ತೆ ಸಾಧ್ಯವಾಗಿದೆ. ಜನ ಮುಖೀಯಾಗಿ ಕೆಲಸ ಮುಂದುವರಿಸಿ ಕೊಂಡು ಹೋಗಲು ನಮಗೆ ನಾಗರಿಕರ ಸಹಕಾರ ಬೇಕು ಎಂದು ಆಯುಕ್ತರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರದ ಸಶಸ್ತ ಮೀಸಲು ಪಡೆಯ ಎಸಿಪಿ ಎಂ.ಎ. ಉಪಾಸೆ ಅವರ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. ಡಿಸಿಪಿಗಳಾದ ಅರುಣಾಂಶುಗಿರಿ, ಲಕ್ಷ್ಮೀ ಗಣೇಶ್‌ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಫೇಸುºಕ್‌ ಮತ್ತು ಟ್ವಿಟರ್‌ ಮೂಲಕ ಸಾಮಾಜಿಕ ಜಾಲ ತಾಣದ ಮೂಲಕ ನೇರ ಪ್ರಸಾರ ಮಾಡಲಾಯಿತು.

ನಾನು ಪಿಸಿ, ನೀವೂ ಪಿಸಿ; ಜತೆಯಾಗಿ ಕೆಲಸ ಮಾಡೋಣ
ನಾನೂ ಪಿಸಿ (ಪೊಲೀಸ್‌ ಕಮಿಷನರ್‌), ನೀವೂ ಪಿಸಿ (ಪೊಲೀಸ್‌ ಕಾನ್‌ಸ್ಟೆಬಲ್‌). ನಾವು ಜತೆಯಾಗಿ ಕೆಲಸ ಮಾಡೋಣ. ನಿಮ್ಮ ಯಾವುದೇ ಸಮಸ್ಯೆ ಇತ್ಯರ್ಥಕ್ಕೆ ನನ್ನ ಕಚೇರಿಯ ಬಾಗಿಲುಗಳು ಯಾವಾಗಲೂ ತೆರೆದಿವೆ ಎಂದರು ಡಾ| ಹರ್ಷ.

Advertisement

Udayavani is now on Telegram. Click here to join our channel and stay updated with the latest news.

Next