Advertisement

ಬೀಡಿ ಉದ್ಯಮಕ್ಕೆ ಹೆಚ್ಚಿನ ತೆರಿಗೆ ಹಾಕಲು ಶಿಫಾರಸು

09:09 PM May 20, 2023 | Team Udayavani |

ನವದೆಹಲಿ:ತಂಬಾಕು ಉತ್ಪನ್ನಗಳ ಮಾದರಿಯಲ್ಲೇ ಬೀಡಿ ಉದ್ಯಮದ ಮೇಲೆ ತೆರಿಗೆ ಹೆಚ್ಚಳ ಮಾಡಿ, ನಿಯಂತ್ರಕ ಕ್ರಮಗಳನ್ನು ಬಲಪಡಿಸಬೇಕು. ಆಗ ಅವುಗಳ ಬಳಕೆ ಕಡಿಮೆಯಾಗುತ್ತದೆ ಮತ್ತು ಮರಣ ಪ್ರಮಾಣವೂ ತಗ್ಗುತ್ತದೆ.

Advertisement

ಜೋಧ್‌ಪುರದ ಏಮ್ಸ್‌ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮತ್ತು ಇಂಟರ್‌ನ್ಯಾಷನಲ್‌ ಯೂನಿಯನ್‌ ಅಗೈನ್ಸ್‌$r ಟ್ಯುಬರ್‌ಕ್ಯುಲೋಸಿಸ್‌ ಆ್ಯಂಡ್‌ ಲಂಗ್‌ ಡಿಸೀಸ್‌ ಜಂಟಿಯಾಗಿ ನಡೆಸಿ ಸಲ್ಲಿಸಿದ ಅಧ್ಯಯನ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ.

ಬೀಡಿ ಬಳಕೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆ, ಪರಿಸರದ ಮೇಲಿನ ಹಾನಿ ಹಾಗೂ ಆರ್ಥಿಕ ಹೊರೆಯನ್ನು ಗಣನೆಗೆ ತೆಗೆದುಕೊಂಡು, ಬೀಡಿ ಉದ್ಯಮಕ್ಕೆ ನೀಡಿರುವ “ಗುಡಿ ಕೈಗಾರಿಕೆ’ ಸ್ಥಾನಮಾನವನ್ನು ರದ್ದು ಮಾಡಬೇಕು. ತೆರಿಗೆ ಹೆಚ್ಚಳ ಮಾಡಬೇಕು.

ಆಗ ಬೀಡಿ ದರ ಸಹಜವಾಗಿಯೇ ಏರಿಕೆ ಕಾಣುತ್ತದೆ. ಇದರಿಂದ ಅದರ ಬೇಡಿಕೆಯೂ ತಗ್ಗುತ್ತದೆ. ಜತೆಗೆ, ಬೀಡಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next