Advertisement

ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸಲು ಸಲಹೆ

11:30 AM Aug 10, 2018 | |

ಮುದ್ದೇಬಿಹಾಳ: ಕ್ರೀಡೆಯಿಂದ ಮಕ್ಕಳ ಶಾರೀರಿಕ ಬೆಳವಣಿಗೆ ಜೊತೆಗೆ ಮಾನಸಿಕ ಬೆಳವಣಿಗೆ ಹೆಚ್ಚು ವಿಕಸನಗೊಳ್ಳುತ್ತದೆ ಎನ್ನುವ ಅರಿವನ್ನು ಮಕ್ಕಳಲ್ಲಿ ಮೂಡಿಸಲು, ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸಲು ಪಾಲಕರು, ಶಿಕ್ಷಕರು ಹೆಚ್ಚು ಕಾಳಜಿ ವಹಿಸಬೇಕು ಎಂದು ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಹೇಳಿದರು.

Advertisement

ಇಲ್ಲಿನ ಮಹೆಬೂಬ ನಗರದಲ್ಲಿರುವ ಸರ್ಕಾರಿ ಉರ್ದು ಪಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ಮುದ್ದೇಬಿಹಾಳ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದು ಆಧುನಿಕ, ಸ್ಪರ್ಧಾತ್ಮಕ ಯುಗ. ಪ್ರತಿಯೊಂದರಲ್ಲೂ ಸ್ಪರ್ಧೆ ಕಾಣುತ್ತೇವೆ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಜೀವನ
ನಡೆಸಬೇಕಾದಲ್ಲಿ ಸ್ಪರ್ಧೆ ಅನಿವಾರ್ಯ. ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳನ್ನು ಸ್ಪರ್ಧಾತ್ಮಕ ರೀತಿಯಲ್ಲೇ ದೇಶದ ಸಮರ್ಥ ನಾಗರಿಕನನ್ನಾಗಿ ರೂಪಿಸಬೇಕು ಎಂದರು.

ಕ್ರೀಡಾಜ್ಯೋತಿ ಸ್ವೀಕರಿಸಿದ ತಹಶೀಲ್ದಾರ್‌ ಎಂ.ಎಸ್‌. ಬಾಗವಾನ, ಮುಖ್ಯ ಅತಿಥಿಯಾಗಿದ್ದ ಡಾ| ಎ.ಎಂ.
ಮುಲ್ಲಾ ಮಾತನಾಡಿದರು. ಉರ್ದು ಶಾಲೆ ಎಸಿಎಂಸಿ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ
ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ಲ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ಕ್ರೀಡಾಧಿಕಾರಿ ಎಚ್‌.ಎಲ್‌. ಕರಡ್ಡಿ, ಸಮಾಜಸೇವಕ ಅಯ್ಯೂಬ ಮನಿಯಾರ, ಶಿಕ್ಷಣ ಸಂಯೋಜಕರಾದ ಎ.ಎಸ್‌. ಬಾಗವಾನ, ವಿಜಯಲಕ್ಷ್ಮೀ ಚಿಲ್ಲಾಳಶೆಟ್ಟರ, ಪುರಸಭೆ ಸದಸ್ಯರಾದ ಶರಣು ಬೂದಿಹಾಳಮಠ, ಸಂತೋಷ ನಾಯ್ಕೋಡಿ, ರಾಜಶೇಖರ ಹೊನ್ನುಟಗಿ, ಬಿಆರ್‌ಪಿ ಎಸ್‌.ಬಿ. ಸಜ್ಜನ, ಸಿಆರ್‌ ಪಿಗಳಾದ ಎಂ.ಎ. ತಳ್ಳಿಕೇರಿ, ಡಿ.ಎ. ಸಿಂದಗಿ, ಮುಖ್ಯಾಧ್ಯಾಪಕಿ ಎಫ್‌. ಎಸ್‌. ಬಾಗವಾನ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌. ಆರ್‌. ಸುಲ್ಪಿ, ಗುತ್ತಿಗೆದಾರ ಖಾದರ ಹಿರೇಮನಿ, ಇಸ್ಮಾಯಿಲ್‌ ಗೊಳಸಂಗಿ ವೇದಿಕೆಯಲ್ಲಿದ್ದರು.

ಮೌಲಾನಾ ನಿಸಾರ್‌ ಅಹ್ಮದ್‌ ಕುರಾನ್‌ ಪಠಿಸಿದರು. ನಜೀಫಾ ಪಿಂಜಾರ ಹಮ್‌, ಅಲ್ತಾಫ್‌ ಸಾಲಿ ನಾಥ್‌ ಹೇಳಿದರು. ಸಹ ಶಿಕ್ಷಕಿ ಆರ್‌ .ಬಿ. ಮ್ಯಾಗೇರಿ ಸ್ವಾಗತಿಸಿದರು. ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ ಪ್ರಾಸ್ತಾವಿಕ ಮಾತನಾಡಿದರು. ಸಿಆರ್‌ಪಿ ಟಿ.ಡಿ. ಲಮಾಣಿ ನಿರೂಪಿಸಿದರು. 

Advertisement

ಸಹಶಿಕ್ಷಕ ಎಸ್‌. ಮಂಜು ವಂದಿಸಿದರು. ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಎ.ಸಿ. ಕೆರೂರ ಕ್ರೀಡಾಪಟುಗಳಿಗೆ
ಪ್ರಮಾಣ ವಚನ ಬೋಧಿಸಿದರು. ಮನವಿ ಸಲ್ಲಿಕೆ: ಇದೇ ವೇಳೆ ಸರ್ಕಾರಿ ಉರ್ದು ಶಾಲೆಗೆ ಶಾಸಕರ ಅನುದಾನದಲ್ಲಿ
ಕಾಂಪೌಂಡ್‌ ನಿರ್ಮಿಸುವಂತೆ ಮತ್ತು ಶಾಲೆ ಆವರಣದಲ್ಲಿರುವ ಬಯಲು ಶೌಚಾಲಯವನ್ನು ಬೇರೆಡೆ
ಸ್ಥಳಾಂತರಿಸುವಂತೆ ಕೋರಿ ಶಾಲೆ ವತಿಯಿಂದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next