Advertisement
ನ.10 ರಂದು ಚಂದ್ರಚೂಡ್ ನಿವೃತ್ತರಾಗಲಿದ್ದಾರೆ. ನ.11ರಂದು ನ್ಯಾ| ಸಂಜೀವ್ ಖನ್ನಾ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಅವರ ಅಧಿಕಾರಾವಧಿ 6 ತಿಂಗಳಿಗೂ ತುಸು ಹೆಚ್ಚಿರ ಲಿದೆ. 2025 ಮೇ 13ರಂದು ನಿವೃತ್ತರಾಗಲಿದ್ದಾರೆ.
1960 ಮೇ 14 ರಂದು ಜನಿಸಿದ ಸಂಜೀವ್ ಅವರು ದಿಲ್ಲಿ ವಿವಿಯ ಕ್ಯಾಂಪಸ್ ಲಾ ಸೆಂಟರ್‌ನಲ್ಲಿ ಕಾನೂನು ಓದಿದ್ದಾರೆ. 2005ರಲ್ಲಿ ಅವರನ್ನು ದಿಲ್ಲಿ ಹೈ ಕೋರ್ಟ್‌ನ ಹೆಚ್ಚುವರಿ ಜಡ್ಜ್ ಆಗಿ ನೇಮಿಸಲಾಯಿತು. 2006ರಲ್ಲಿ ಶಾಶ್ವತ ನ್ಯಾಯಮೂರ್ತಿಯಾದರು. ಬಳಿಕ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯ ಮೂರ್ತಿಯಾಗಿ ನೇಮಕ ಮಾಡಲಾಯಿತು. ಇವಿಎಂ ಸಿಂಧುತ್ವ ಸೇರಿದಂತೆ ಅನೇಕ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದ ಪೀಠಗಳ ಭಾಗವಾಗಿದ್ದಾರೆ.