Advertisement

“ಕನ್ನಡ ಹೋರಾಟಗಾರರನ್ನು ಗುರುತಿಸುವುದು ಕರ್ತವ್ಯ’

02:17 PM Apr 14, 2017 | |

ದೇಲಂಪಾಡಿ: ಕಾಸರಗೋಡಿನಲ್ಲಿ ಕನ್ನಡವು ಇಂದು ಈ ಮಟ್ಟಿಗಾದರೂ ಉಳಿದಿದ್ದರೆ ಅದಕ್ಕೆ ಕಾರಣ ಏಕೀಕರಣ ಹೋರಾಟದ ಸಮಯದಲ್ಲಿ ಮತ್ತು ಅದರ ನಂತರ ಇಂದಿನವರೆಗೆ ಕಾಸರಗೋಡಿನ ಕನ್ನಡದ ಮಹನೀಯರು ನಿರಂತರವಾಗಿ ನಡೆಸಿದ ಶ್ರಮ ಮತ್ತು ಪ್ರಯತ್ನವೇ ಆಗಿದೆ. ಅವರ ಆ ಪ್ರಯತ್ನದ ಫಲವನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ. 

Advertisement

ಇಲ್ಲದಿದ್ದರೆ ಕಾಸರಗೋಡಿನಲ್ಲಿ ಈಗಾಗಲೇ ಕನ್ನಡದ ನಾಮಾವಶೇಷ ವಾಗಿರುತ್ತಿತ್ತು. ಅವರ ಆ ಪ್ರಯತ್ನವನ್ನು ಗುರುತಿಸಿ ಅವರನ್ನು ಗೌರವಿಸಬೇಕಾದುದು ನಮ್ಮ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ. ಭಟ್‌ ಅವರು ಹೇಳಿದರು.

ಅವರು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಮಾಸ್ತರ್‌ ವಿಷ್ಣು ಭಟ್‌ ಸ್ಮಾರಕ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡ ಘಟಕದ ವತಿಯಿಂದ ಜರಗಿದ ಕರ್ನಾಟಕ ಏಕೀಕರಣ ಹೋರಾಟದ ವಜ್ರಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಕಾಸರಗೋಡಿನ ಕನ್ನಡದ ಹೋರಾಟ ಮತ್ತು ಉಳಿವಿನಲ್ಲಿ ಮಹತ್ತರ ಪಾತ್ರ ವಹಿಸಿದ ನ್ಯಾಯವಾದಿ ಅಡೂರು ಉಮೇಶ್‌ ನಾೖಕ್‌, ಡಾ| ರಮಾನಂದ ಬನಾರಿ, ಎಂ.ವಿ. ಬಳ್ಳುಳ್ಳಾಯ ಮತ್ತು ಪುರುಷೋತ್ತಮ ಮಾಸ್ತರ್‌ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ ಮತ್ತು ಸಮ್ಮಾನ ಪತ್ರವನ್ನು ಸಮರ್ಪಿಸುವುದರ ಮೂಲಕ ಸಮ್ಮಾನಿಸಿ ಮಾತನಾಡಿದರು.

ವಿಶ್ವವಿನೋದ ಬನಾರಿ, ಎಂ.ರಮಾನಂದ ಬನಾರಿ ದೇಲಂಪಾಡಿ, ಗಣರಾಜ ಬನಾರಿ, ದಿವಾಣ ಶಿವಶಂಕರ ಭಟ್‌ ಸಮ್ಮಾನ ಪತ್ರವನ್ನು ವಾಚಿಸಿದರು. ಬೆಟ್ಟಂಪಾಡಿ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿ ಮತ್ತು ಡಾ|ನರೇಶ್‌ ಮುಳ್ಳೇರಿಯ ಅವರು ಏಕೀಕರಣ ಹೋರಾಟದ ಕುರಿತು ಮತ್ತು ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಕುರಿತು ಮಾತನಾಡಿದರು. ಪ್ರಖ್ಯಾತ ಹಿರಿಯ ಮೃದಂಗ ವಿದ್ವಾನ್‌ ಬಾಬು ರೈ ಅವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ವನಮಾಲ ಕೇಶವ ಭಟ್‌ ಶುಭಹಾರೈಸಿದರು. ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಮೊಖೆ¤àಸರ ಎ.ನಾರಾಯಣ ನಾಯ್ಕ ಊಜಂಪಾಡಿ ಉಪಸ್ಥಿತರಿದ್ದರು.

ಬೆಳ್ಳಿಪ್ಪಾಡಿ ಸದಾಶಿವ ರೈ ಸ್ವಾಗತಿಸಿದರು. ದೇಲಂಪಾಡಿ ಎಂ.ರಮಾನಂದ ರೈ ವಂದಿಸಿದರು. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃ ತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇಲಂಪಾಡಿ ಒಕ್ಕೂಟ ಮತ್ತು ಸ್ಥಳೀಯ ಪ್ರತಿಭೆಗಳಿಂದ ವಿವಿಧ ನೃತ್ಯ ಕಾರ್ಯಕ್ರಮಗಳು ಜರಗಿದವು. ನಂತರ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಲಾವಿದರಿಂದ ವಿಶ್ವವಿನೋದ ಬನಾರಿ ಅವರ ನೇತೃತ್ವದಲ್ಲಿ ಪಾರ್ಥ ಸಾರಥ್ಯ ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next