Advertisement

ಪುಸ್ತಕ ಸಂಸ್ಕೃತಿಗೆ ಆಧುನಿಕತೆಯಲ್ಲೂ ಮಾನ್ಯತೆ

05:00 PM Sep 03, 2018 | |

ಕೊಪ್ಪಳ: ಡಿಜಿಟಲ್‌ ಜಗತ್ತಿನ ಹಾವಳಿಯಲ್ಲಿಯೂ ಪುಸ್ತಕ ಸಂಸ್ಕೃತಿಗೆ ಸಾರ್ವತ್ರಿಕ ಮಾನ್ಯತೆಯಿದೆ. ಲೇಖಕರ ಅನುಭವವನ್ನು ಅಕ್ಷರದ ಸಂವಹನದ ಮೂಲಕವೇ ಉಣ ಬಿಡಿಸುತ್ತಿದ್ದಾರೆ. ಅಕ್ಷರ ಪ್ರಪಂಚ ಅನ್ನುವುದು ಯಾವಾಗಲೂ ದೊಡ್ಡದಿದೆ ಎಂದು ಬೆಂಗಳೂರಿನ ಭಾಷಾಂತರ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಈರಪ್ಪ ಕಂಬಳಿ ಹೇಳಿದರು.

Advertisement

ಕೊಪ್ಪಳದ ಖಾಸಗಿ ವಸತಿ ಗೃಹದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಾನು ಆಕಸ್ಮಿಕವಾಗಿ ಅಕ್ಷರ ಲೋಕಕ್ಕೆ ಬಂದುದರಿಂದ ಅನ್ನದ ಜೊತೆಗೆ ಸ್ಥಾನಮಾನಗಳೂ ದೊರೆತವು. ನಾವು ಅಕ್ಷರದ ಆರಾಧಕರಾಗಬೇಕು. ಅದೇನು ಬರೆಯುತ್ತಿದ್ದೇನೆಂದು ಇನ್ನೂ ನನಗೆ ಸ್ಪಷ್ಟ ಅರಿವಿಲ್ಲವಾದರೂ ನಿರೀಕ್ಷೆ ಮೀರಿದ ಮಾನ್ಯತೆ ಸಿಕ್ಕಿದ್ದನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಅಕ್ಷರ ಲೋಕದ ಈ ಔಧಾರ್ಯಕ್ಕೆ ನಾನು ಆಬಾರಿಯಾಗಿದ್ದೇನೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಹನುಮಂತಪ್ಪ ಅಂಡಗಿ ಮಾತನಾಡಿ, ಈರಪ್ಪ ಕಂಬಳಿ ಅವರ ಲಲಿತ ಪ್ರಬಂಧಗಳು ಸಹೃದಯರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗುತ್ತವೆ. ವೈಚಾರಿಕತೆಯ ಚೌಕಟ್ಟನ್ನು ಹೊಂದಿರುವ ಆಡು ಭಾಷೆಯ ಶೃಂಗಾರವಿರುವ, ಸುತ್ತಮುತ್ತಲಿನ ಘಟನೆಗಳನ್ನು ಕ್ಯಾಮರಾ ಕಣ್ಣುಗಳಂತೆ ವೀಕ್ಷಿಸುವ ಅವರ ಚಿಂತಕನ ಒಳನೋಟ, ಮಾನವೀಯ ದೃಷ್ಟಿಕೋನದಿಂದ ಸಮಾಜವನ್ನು ಗ್ರಹಿಸುವ ಅವರ ಸಾಹಿತ್ಯ ಮೆಚ್ಚುವಂತಹದ್ದು ಎಂದರು. ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಉತ್ತರ ಕರ್ನಾಟಕ ಗ್ರಾಮೀಣ ಭಾಷೆಯನ್ನು ತಮ್ಮ ಲಲಿತ ಪ್ರಬಂಧಗಳಲ್ಲಿ ಹಿಡಿದಿಟ್ಟಿರುವ ಈರಪ್ಪ ಕಂಬಳಿ ಅವರು ತಮ್ಮ ಹಲವು ಬಗೆಯ ಓದುಗಳಿಂದ ಲಭಿಸಿದ ಜ್ಞಾನವನ್ನು ಧಾರೆ ಎರೆದು ಪ್ರಬಂಧ ಪ್ರಕಾರವನ್ನು ಸದೃಢಗೊಳಿಸಿದ್ದಾರೆ ಎಂದರು. ಹಿರಿಯ ಸಾಹಿತಿಗಳಾದ ಎಚ್‌.ಎಸ್‌.ಪಾಟೀಲ, ಅಲ್ಲಮಪ್ರಭು ಬೆಟ್ಟದೂರು, ಈಶ್ವರ ಹತ್ತಿ ಡಾ| ಮಹಾಂತೇಶ ಮಲ್ಲನಗೌಡರ, ಬಸವರಾಜ ಆಕಳವಾಡಿ, ಪ್ರಕಾಶಕರಾದ ಡಿ.ಎಂ. ಬಡಿಗೇರ, ಪತ್ರಕರ್ತ ರಮೇಶ ಸುರ್ವೇ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next