Advertisement

ಅಕ್ಕಮಹಾದೇವಿ ವಚನ ಅರಿತು ಅಳವಡಿಸಿಕೊಳ್ಳಿ: ಡಾ|ಪಟ್ಟದ್ಧೇವರು

11:14 AM Mar 28, 2022 | Team Udayavani |

ಚಿಂಚೋಳಿ: ಶಿವಶರಣೆ ಜಗನ್ಮಾತೆ ಅಕ್ಕಮಹಾದೇವಿ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ, ಪೂಜ್ಯ ಡಾ| ಬಸವಲಿಂಗ ಪಟ್ಟದೇವರು ನುಡಿದರು.

Advertisement

ದೇಗಲಮಡಿ ಗ್ರಾಮದಲ್ಲಿ ಪರಮ ಪೂಜ್ಯ ಡಾ| ಬಸವಲಿಂಗ ಅವಧೂತರ 10ನೇ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಶರಣೆ ಅಕ್ಕಮಹಾದೇವಿ ವಚನಗಳನ್ನು ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು. ಮನಸ್ಸು ಪವಿತ್ರವಾಗಿದ್ದರೆ ದೇವರನ್ನು ಕಾಣಬಹುದು ಎಂದರು.

ಪೂಜ್ಯ ಡಾ| ಬಸವಲಿಂಗ ಅವದೂತರ ಆರ್ಶೀವಚನ ನೀಡಿ, ಭಕ್ತರು ಹಣೆಯ ಮೇಲೆ ವಿಭೂತಿ ಹಚ್ಚಿಕೊಂಡರೆ ನಾವು ಮಾಡಿದ ಪಾಪಗಳು ಪರಿಹಾರ ಆಗುತ್ತವೆ ಎಂದು ಹೇಳಿದರು.

ತಡೋಳ ಕಟ್ಟಿಮಠ ಸಂಸ್ಥಾನ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಯಾರ ಮನೆಯಲ್ಲಿ ಭಜನೆ ಮತ್ತು ಭೋಜನ ಇರುತ್ತದೋ ಅಲ್ಲಿ ಸ್ವರ್ಗ ಮತ್ತು ಆನಂದ ಇರುತ್ತದೆ ಎಂದರು.

Advertisement

ಶಾಸಕ ಡಾ| ಅವಿನಾಶ ಜಾಧವ ಮಾತನಾಡಿ, ಅವಧೂತರ ಪುಣ್ಯಾಶ್ರಮಕ್ಕೆ ನಾನು ಶಾಸಕನಾಗಿ ಬಂದಿಲ್ಲ. ಮಠದ ಭಕ್ತನಾಗಿ ಬಂದಿದ್ದೇನೆ. ಅಧಿಕಾರ ಇರಲಿ, ಬಿಡಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪೂಜ್ಯರ ಆಶೀರ್ವಾದ ನನ್ನ ಮೇಲಿರಲಿ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ, ಕಲಬುರಗಿ ಸಂಸದ ಡಾ| ಉಮೇಶ ಜಾಧವ, ಡಿವೈಎಸ್ಪಿ ಬಸವೇಶ್ವರ ಹೀರಾ, ದೇಗಲಮಡಿ ಗ್ರಾಪಂ ಅಧ್ಯಕ್ಷೆ ಶೋಭಾ ಮುದ್ದಾ, ಉಮಾ ಪಾಟೀಲ, ಲಕ್ಷ್ಮಣ ಆವಂಟಿ, ಶ್ರೀಮಂತ ಕಟ್ಟಿಮನಿ, ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ, ಚಿತ್ರಶೇಖರ ಪಾಟೀಲ, ಶರಣಗೌಡ ಮುದ್ದಾ, ವಿವೇಕ ಪಾಟೀಲ, ಹಿರಿಯ ಪತ್ರಕರ್ತ ಶಾಮರಾವ ಚಿಂಚೋಳಿ, ಜಗನ್ನಾಥ ಶೇರಿಕಾರ, ಅವಿನಾಶ ಗೋಸುಲ, ಸಿದ್ಧಪ್ಪಗೌಡ ಮುದ್ದ ಇನ್ನಿತರರು ಭಾಗವಹಿಸಿದ್ದರು. ಕು. ಅನ್ವಿತಾ ಪಾಟೀಲ ಪ್ರಾರ್ಥಿಸಿದರು, ಬೀದರ ದೇವೇಂದ್ರ ಕರಂಜಿ ಸ್ವಾಗತಿಸಿದರು, ನವಲಿಂಗ ಪಾಟೀಲ ವಂದಿಸಿದರು. ಬೀದರ, ಜಹೀರಾಬಾದ, ಚಿಂಚೋಳಿ, ಹುಮನಾಬಾದ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದ ಭಕ್ತರು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next