Advertisement

ರಿಸೆಷನ್‌ V/s ಡಿಪ್ರೆಷನ್!

04:27 AM May 18, 2020 | Lakshmi GovindaRaj |

ರಿಸೆಷನ್‌ ಎಂದರೆ, ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳುವುದು. ರಿಸೆಷನ್‌ ಅನ್ನು, ಒಂದು ಪ್ರಾಂತ್ಯಕ್ಕೆ ಸೀಮಿತವಾದ ಆರ್ಥಿಕ ಕುಸಿತ ಎಂದೂ ಹೇಳುತ್ತಾರೆ. ಜಿಡಿಪಿ ರೇಟ್‌ ಮೂಲಕ ರಿಸೆಷನ್‌ ಅನ್ನು ಪತ್ತೆಹಚ್ಚಬಹುದು. ವ್ಯವಹಾರ ,  ಉತ್ಪಾದನೆ, ಸ್ಟಾಕ್‌ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ, ಖರೀದಿ ಸಾಮರ್ಥ್ಯ ಕುಸಿತ, ವ್ಯಾಪಾರದಲ್ಲಿ ನಷ್ಟ ಮತ್ತು ಸಾಲ ಅಲಭ್ಯತೆ, ಇವೆಲ್ಲಾ ರಿಸೆಷನ್‌ನ ಅಡ್ಡ ಪರಿಣಾಮಗಳು. ರಿಸೆಶನ್‌, ಹಲವು ತಿಂಗಳುಗಳ ಕಾಲ ಬಾಧಿಸುತ್ತದೆ. ಇದನ್ನು ಪತ್ತೆ ಹಚ್ಚಲು, ಜಿಡಿಪಿ ಜೊತೆಗೆ 5 ಮಾನದಂಡಗಳ ಪರಿಶೀಲನೆ ನಡೆಸಲಾಗುತ್ತದೆ.

Advertisement

ಉದ್ಯೋಗ: ರಿಸೆಷನ್‌ನ ಪ್ರತಿಕೂಲ ಪರಿಣಾಮ, ನೇರವಾಗಿ ಉದ್ಯೋಗ ಕ್ಷೇತ್ರದ ಮೇಲಾಗುತ್ತದೆ. ಆರೋಗ್ಯಯುತ ಆರ್ಥಿಕತೆಯನ್ನು, ಅಲ್ಲಿ ಸೃಷ್ಟಿಯಾಗುತ್ತಿರುವ ಉದ್ಯೋಗಗಳನ್ನು ಗಮನಿಸಿ ಅಳೆಯುತ್ತಾರೆ, ರಿಯಲ್‌ ಇನ್‌ ಕಂ: ರಿಯಲ್‌  ಇನ್‌ ಕಂ ಎಂದರೆ, ಹಣದ ಪರ್ಚೇಸಿಂಗ್‌ ಪರ್ವ (ಖರೀದಿ ಸಾಮರ್ಥ್ಯ). ವಸ್ತುಗಳ ಬೆಲೆ ಏರಿದಾಗ ರಿಯಲ್‌ ಇನ್‌ ಕಂ ಇಳಿಯುತ್ತದೆ. ಉದಾಹರಣೆಗೆ, ನಮ್ಮ ಬಳಿ 10 ರೂ ಇದೆ ಎಂದುಕೊಂಡರೆ, ಅದರಲ್ಲಿ ಒಂದು ಪೆನ್ನು ಖರೀದಿಸಬಹುದು.  ಪೆನ್ನಿನ ಬೆಲೆ 15 ರೂ.ಗೆ ಏರಿದರೆ, ನಮ್ಮ ಬಳಿ ಇರುವ 10 ರೂ.ಗೆ ಪೆನ್ನು ಖರೀದಿಸುವ ಸಾಮರ್ಥ್ಯ ಇಲ್ಲವಾಗುತ್ತದೆ. ಹೀಗಾಗಿ, ರಿಯಲ್‌ ಇನ್‌ ಕಂ, ಹಣದುಬ್ಬರಕ್ಕೆ ಸರಿ ಹೊಂದುವ ಆದಾಯ ಎಂದೂ ತಿಳಿಯಬಹುದು.

ಉತ್ಪಾದನೆ: ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ಸರಕುಗಳ ಪ್ರಮಾಣ.

ಹೋಲ್‌ ಸೇಲ್- ರೀಟೇಲ್‌ ಮಾರಾಟ: ಉತ್ಪಾದನೆ ಮತ್ತು ಮಾರಾಟ ಎರಡೂ ಒಂದಕ್ಕೊಂದು ಬೆಸೆದುಕೊಂಡಿದೆ. ಬೇಡಿಕೆಗೆ ಅನುಗುಣವಾಗಿ ಇವೆರಡೂ ವಿಭಾಗಗಳು ಕೆಲಸ ಮಾಡುತ್ತವೆ.

ಡಿಪ್ರೆಷನ್: ರಿಸೆಷನ್‌ ಬಿರುಗಾಳಿಯಾದರೆ, ಡಿಪ್ರೆಷನ್ ಚಂಡಮಾರುತ. ಡಿಪ್ರೆಷನ್, ರಿಸೆಷನ್‌ಗಿಂತಲೂ ತೀವ್ರವಾಗಿರುತ್ತ ದೆ. ರಿಸೆಷನ್‌ ತಿಂಗಳುಗಳ ಕಾಲ ಇದ್ದರೆ, ಡಿಪ್ರೆಷನ್ ವರ್ಷಗಳ ಕಾಲ ಇರುತ್ತದೆ. ಈ ಹಿಂದೆ ಹೇಳಿದಂತೆ, ರಿಸೆಷನ್‌ನ  ಆಯುಷ್ಯ ಹಲವು ತಿಂಗಳು ಗಳು. ಅದಕ್ಕೂ ಹೆಚ್ಚಿನಕಾಲ ಇದ್ದರೆ, ಅದು ಡಿಪ್ರೆಷನ್ಗೆ ಕಾರಣ  ವಾಗುತ್ತದೆ. ಜಿಡಿಪಿ (ಗ್ರಾಸ್‌ ಡೊಮೆಸ್ಟಿಕ್‌ ಪ್ರಾಡಕ್ಟ್) ಮತ್ತು ಜಿಎನ್‌ಪಿ (ಗ್ರಾಸ್‌ ನ್ಯಾಷನಲ್‌ ಪ್ರಾಡಕ್ಟ್) ಎರಡೂ ನೆಗೆಟಿವ್‌ಗೆ ಜಾರುತ್ತದೆ.

Advertisement

ಬಂಡವಾಳ ಹೂಡಿಕೆಯ ಮೇಲೆ ತೀವ್ರತರ ಪೆಟ್ಟು ಬೀಳುತ್ತದೆ. 1929ರಲ್ಲಿ ಜಗತ್ತು ಕಂಡ ಡಿಪ್ರೆಷನ್ “ದಿ ಗ್ರೇಟ್‌ ಡಿಪ್ರೆಷನ್’ ಎಂದೇ ಕುಖ್ಯಾತಿ ಪಡೆದಿದೆ. ಅಮೆರಿಕದಲ್ಲಿ ಪ್ರಾರಂಭವಾಗಿ, ಸುಮಾರು 10 ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಅದು ಶುರುವಾದ ದಿನ ಅಕ್ಟೋಬರ್‌ 24, 1929. ಅವತ್ತು ಗುರುವಾರ. ಇಂದಿಗೂ ಅಲ್ಲಿ ಆ ದಿನವನ್ನು “ಬ್ಲ್ಯಾಕ್‌ ಥರ್ಸ್‌ ಡೇ’ ಎಂದೇ ಕರೆಯಲಾ ಗು ತ್ತದೆ. ಭಾರತದ ಸ್ವಾತಂತ್ರ ಸಂಗ್ರಾಮದ ಮೇಲೆ “ದಿ ಗ್ರೇಟ್‌ ಡಿಪ್ರೆಷನ್’ ಪ್ರಭಾವವೂ ಇದೆ  ಎಂದು ಇತಿಹಾಸಕಾರರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next