Advertisement
ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತದ ಸ್ಥಿತಿಯಿದೆ. 2023ರಲ್ಲಿ ಒಟ್ಟಾರೆಯಾಗಿ ಜಪಾನ್ ಜಿಡಿಪಿಯಲ್ಲಿ ಶೇ.1.9 ಏರಿಕೆಯಾಗಿದೆ. ಆದರೆ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.0.4, ಅದಕ್ಕೂ ಮುಂಚಿನ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.2.9ರಷ್ಟು ಕುಸಿತವಾಗಿತ್ತು. ಸತತ ಎರಡು ತ್ತೈಮಾಸಿಕಗಳ ಕುಸಿತವನ್ನು ನೋಡಿದಾಗ, ಜಪಾನ್ ತಾಂತ್ರಿಕವಾಗಿ ಹಿಂಜರಿತಕ್ಕೆ ತುತ್ತಾಗಿದೆ ಎಂದು ಹೇಳಲಾಗಿದೆ. 2010ರವರೆಗೆ ವಿಶ್ವದ 2ನೇ ಬೃಹತ್ ಆರ್ಥಿಕತೆಯಾಗಿದ್ದ ಜಪಾನ್ ನಂತರ 3ಕ್ಕೆ ಕುಸಿದಿತ್ತು. ಚೀನಾ 2ನೇ ಸ್ಥಾನ ಪಡೆದುಕೊಂಡಿತ್ತು. ಈಗ ಜಪಾನ್ 3ನೇ ಸ್ಥಾನವನ್ನೂ ಕಳೆದುಕೊಂಡು, ಅದನ್ನು ಜರ್ಮನಿಗೆ ಬಿಟ್ಟುಕೊಟ್ಟಿದೆ.
Related Articles
Advertisement
– ಇಳಿಮುಖವಾದ ಉತ್ಪಾದಕತೆ
– ದೇಶದ ಸ್ಪರ್ಧಾಶಕ್ತಿ ಕಡಿಮೆಯಾಗಿದ್ದು
ಬ್ರಿಟನ್‌ಗೂ ಹಿಂಜರಿತದ ಬಿಸಿ
ಲಂಡನ್: ಜಗತ್ತಿನ 6ನೇ ಬೃಹತ್ ಆರ್ಥಿಕತೆಯಾಗಿರುವ ಬ್ರಿಟನ್ ಕೂಡ ಆರ್ಥಿಕ ಹಿಂಜರಿತಕ್ಕೆ ತುತ್ತಾಗಿದೆ. ಈ ವರ್ಷಾಂತ್ಯಕ್ಕೆ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗುತ್ತಿರುವ ಪ್ರಧಾನಿ ರಿಷಿ ಸುನಕ್‌ಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. 2023 ಅಕ್ಟೋಬರ್-ಡಿಸೆಂಬರ್ ತ್ತೈಮಾಸಿಕದಲ್ಲಿ ಬ್ರಿಟನ್ ಜಿಡಿಪಿ ಶೇ.0.1 ಕುಸಿತಕ್ಕೊಳಗಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ ಶೇ.0.3ರಷ್ಟು ಕುಸಿದಿದೆ. ಜುಲೈ-ಸೆಪ್ಟೆಂಬರ್‌ನಲ್ಲೂ ಶೇ.0.1 ಕುಸಿತವಾಗಿತ್ತು. ಸತತ 2ನೇ ತ್ತೈಮಾಸಿಕದಲ್ಲಿ ಕುಸಿತ ಕಂಡಿದ್ದು, ಬ್ರಿಟನ್ ಸರ್ಕಾರವನ್ನು ಕಂಗೆಡಿಸಿದೆ.