ಚಾಮರಾಜನಗರ: ಚಿತ್ರಮಂದಿರಗಳು ಮುಚ್ಚುತ್ತಿ ರುವ ಇಂದಿನ ದಿನಗಳಲ್ಲಿ ಸಿಂಹ ಚಿತ್ರಮಂದಿರವನ್ನು ಜಿಲ್ಲೆಯಲ್ಲೇ ಉತ್ತಮವಾಗಿ ನಿರ್ವಹಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಕೃಷ್ಣಕುಮಾರ್ ಹೇಳಿದರು.
ನಗರದ ನಂಜನಗೂಡು ರಸ್ತೆಯಲ್ಲಿ ಇರುವ ಸಿಂಹ ಮೂವಿ ಪ್ಯಾರಡೈಸ್ ಚಿತ್ರಮಂದಿರದ 16ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಮನೋರಂಜನೆ ಬಹಳ ಮುಖ್ಯ. ಹಿಂದೆ ಚಲನಚಿತ್ರಗಳನ್ನು ನೋಡಲು ಬಹಳ ಸಂಖ್ಯೆಗಳಲ್ಲಿ ಜನರು ಗ್ರಾಮೀಣ ಭಾಗಗಳಿಂದ ಬರುತ್ತಿದ್ದರು. ಇಂದು ಚಿತ್ರ ಮಂದಿರ ಗಳಲ್ಲಿ ಚಲನಚಿತ್ರಗಳನ್ನು ನೋಡುವವರು ಬಹಳ ಕಡಿಮೆಯಾಗಿದ್ದಾರೆ ಎಂದು ವಿಷಾದಿಸಿದರು.
ಯಶಸ್ವಿಯಾಗಿ ನಡೆಯಲಿ: ಚಿತ್ರಮಂದಿರಗಳನ್ನು ಶಾಪಿಂಗ್ ಕಾಂಪ್ಲೆಕ್ಸ್, ಕಲ್ಯಾಣ ಮಂದಿರ ಮಾಡಲಾ ಗುತ್ತಿದೆ. ಚಾಮರಾಜನಗರದಲ್ಲಿ ಸಿಂಹ ಮೂವಿ ಪ್ಯಾರಡೈಸ್ 16 ವರ್ಷಗಳಿಂದಲೂ ಉತ್ತಮ ಮಟ್ಟ ದಲ್ಲಿ ಸಿನಿಮಾ ಮಂದಿರವನ್ನು ನಿರ್ವಹಣೆ ಮಾಡಿ ಕೊಂಡು ಬಂದಿದೆ. ಇದು ಹೀಗೆಯೇ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಉತ್ತಮ ಸಾಧನೆ: ಮೈಸೂರಿನ ಜಯ ಚಾಮ ರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಸೈಯದ್ ಶಕೀಬ್ ಉರ್ ರೆಹಮಾನ್ ಮಾತನಾಡಿ, ನಾನು 16 ವರ್ಷದ ಹಿಂದೆ ಬಂದು ನೋಡಿದ್ದ ಹಾಗೆಯೇ, ಅದೇ ರೀತಿಯಲ್ಲಿ ಚಿತ್ರ ಮಂದಿರವನ್ನು ಜಯಸಿಂಹ ನೋಡಿಕೊಂಡಿ ದ್ದಾರೆ. ಚಿತ್ರಮಂದಿರದ ವಾರ್ಷಿಕೋತ್ಸವ ಸಂದರ್ಭ ದಲ್ಲಿ ಪ್ರತಿವರ್ಷವೂ ಕಲಾವಿದರು ಮತ್ತು ಸಾಧನೆ ಮಾಡಿದವರನ್ನು ಗೌರವಿಸುತ್ತ ಬಂದಿರುವುದು ಉತ್ತಮ ಕೆಲಸ ಎಂದರು.
ಕಡಿಮೆಯಾಗುತ್ತಿರುವ ವೀಕ್ಷಕರು: ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಇ.ಎನ್.ಟಿ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಎ.ಆರ್.ಬಾಬು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್ ಬಂದ ಮೇಲೆ ಚಿತ್ರ ಮಂದಿರಗಳಲ್ಲಿ ಚಲನಚಿತ್ರವನ್ನು ನೋಡುವವರು ಕಡಿಮೆಯಾಗಿದ್ದಾರೆ ಆದರೂ ಜಯಸಿಂಹ ಅವರು ಸಿಂಹ ಮೂವಿ ಚಿತ್ರಮಂದಿರ ವನ್ನು ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಮನೋರಂಜನೆಗೆ ಮುಡುಪಾಗಿಟ್ಟಿದ್ದೇವೆ: ಸಿಂಹ ಚಿತ್ರಮಂದಿರದ ಮಾಲೀಕ, ಎ.ಜಯಸಿಂಹ, ನಮ್ಮ ಚಿತ್ರ ಮಂದಿರವು ಸುತ್ತೂರು ಶ್ರೀಗಳಿಂದ ಉದ್ಘಾಟನೆ ಗೊಂಡು 16 ವರ್ಷಗಳು ಕಳೆದಿದೆ. ಪ್ರತಿವರ್ಷವು ರಾಜಕೀಯ ವ್ಯಕ್ತಿಗಳು, ಜಾನಪದ ಕಲಾವಿದರನ್ನು ಗೌರವಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಎಷ್ಟೋ ಚಿತ್ರ ಮಂದಿಗಳು ಕಲ್ಯಾಣ ಮಂಟಪವಾಗಿದೆ. ಅದರೆ ನಮ್ಮ ಚಿತ್ರ ಮಂದಿರನ್ನು ಜನರ ಮನೋರಂಜನೆಗೆ ಮುಡುಪಾಗಿಟ್ಟಿದ್ದೇವೆ ಎಂದರು.
ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಇ.ಎನ್. ಟಿ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಎ.ಆರ್. ಬಾಬು, ನಿವೃತ್ತ ಪ್ರಾಂಶುಪಾಲ ಡಾ. ಸೈಯದ್ ಶಕೀಬ್ ಉರ್ ರೆಹಮಾನ್ ಅವರನ್ನು ಸನ್ಮಾನಿಸಲಾಯಿತು.