ಕೊರಟಗೆರೆ: ನಿರುದ್ಯೋಗ ಮತ್ತು ಬಡತನ ಎರಡನ್ನೂ ಸವಾಲಾಗಿ ಸ್ವೀಕರಿಸಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕ ನದಾಫ್ ದಲಿತರಿಗೆ ಕಿವಿಮಾತು ಹೇಳಿದರು.
ಮುಖ್ಯವಾಹಿನಿಗೆ ಬನ್ನಿ:ಗ್ರಾಮೀಣ ಪ್ರದೇಶದಲ್ಲಿನ ಶಾಲೆಗೆ ಹೋಗದೇ ಮನೆಯಲ್ಲಿಯೇ ಉಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಬೇಕು. ಸರ್ಕಾರದ ಹತ್ತಾರು ಯೋಜನೆಗಳ ಬಗ್ಗೆ ದಲಿತರಿಗೆ ವಿದ್ಯಾವಂತ ಯುವಕರು ಮಾಹಿತಿ ನೀಡಬೇಕು. ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರುವ ಪ್ರಯತ್ನವನ್ನು ದಲಿತರು ಮಾಡಬೇಕು ಎಂದು ಸಲಹೆ ನೀಡಿದರು.
ಆರಕ್ಷಕ ಉಪನಿರೀಕ್ಷಕ ಮಂಜುನಾಥ ಮಾತ ನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿ ವಹಿಸಬೇಕು. ದಲಿತ ಕಾಲೋನಿಯಲ್ಲಿ ಮದ್ಯಪಾನ ಮತ್ತು ಇಸ್ಪೀಟ್ಆಟ ಕಂಡು ಬಂದರೇ ಪೊಲೀಸ್ ಠಾಣೆಗೆ ದೂರು ನೀಡಿ ಸಹಕಾರ ನೀಡಬೇಕು. ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಈಗಾಗಲೇ ಹತ್ತಾರು ಪ್ರಕರಣ ದಾಖಲಿಸಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ದಲಿತ ಸೇನೆ ಉಪಾಧ್ಯಕ್ಷ ಜಯರಾಂ ಮಾತ ನಾಡಿ, ಕೊರಟಗೆರೆ ಕ್ಷೇತ್ರದ ದಲಿತ ಕುಟುಂಬಗಳಿಗೆ ಸ್ಮಶಾನಕ್ಕೂ ಜಾಗದ ಕೊರತೆ ಎದುರಾಗಿದೆ. ದಲಿತ ಕಾಲೋನಿಯಲ್ಲಿ ಮದ್ಯ ಮಾರಾಟ ರಾಜಾರೋಷ ವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಮಾರಾಟ ಮಾಡುವ ವ್ಯಕ್ತಿ ಮತ್ತು ಕೊಡುವ ವೈನ್ಸ್ ಮಾಲಿಕನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಮದ್ಯದ ಅಂಗಡಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.
Advertisement
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ದಲಿತರ ಕುಂದು ಕೊರತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
Related Articles
Advertisement
ಅಬಕಾರಿ ನಿರೀಕ್ಷಕ ರಾಮಚಂದ್ರ ಮಾತನಾಡಿ, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿ ಕಳೆದ 2 ತಿಂಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣ ದಾಖಲು ಮಾಡಿದ್ದೇವೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು ಕಾನೂನು ಬಾಹಿರ. ಬಾರ್ ಮತ್ತು ವೈನ್ಸ್ ಅಂಗಡಿಗಳ ಮುಂದೆ ಮದ್ಯದ ಬೆಲೆ ಪಟ್ಟಿ ಪ್ರಕಟ ಮಾಡುವಂತೆ ಸೂಚನೆ ನೀಡುತ್ತೇನೆಂದು ಹೇಳಿದರು.
ಸಹಕಾರ ನೀಡಿ: ಡಿಎಸ್‌ಎಸ್ ಅಧ್ಯಕ್ಷ ಲಕ್ಷ್ಮೀನರಸಯ್ಯ ಮಾತ ನಾಡಿ, ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆ ದಲಿತರ ಕುಂದು ಕೊರತೆ ಸಭೆ ನಡೆಸಲು ಹಿಂದೇಟು ಹಾಕುತ್ತಿದೆ. ದಲಿತ ಕಾಲೋನಿ ಅಭಿವೃದ್ಧಿ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ಇಲ್ಲದಾಗಿದೆ. ನಾವು ಇಲಾಖೆಗೆ ಭೇಟಿ ನೀಡಿದರೂ ಅಧಿಕಾರಿ ವರ್ಗ ಕೈಗೆ ಸಿಗುವುದೇ ಕಷ್ಟಸಾಧ್ಯವಾಗಿದೆ. ದಲಿತರ ರಕ್ಷಣೆ ಮತ್ತು ಅಭಿವೃದ್ಧಿ ಅಧಿಕಾರಿ ವರ್ಗ ಸಹಕಾರ ನೀಡಬೇಕು ಒತ್ತಾಯ ಮಾಡಿದರು.
ಸಭೆಯಲ್ಲಿ ದಲಿತ ಮುಖಂಡರಾದ ಚಿಕ್ಕ ರಂಗ ಯ್ಯ, ಗಂಗರಂಗಯ್ಯ, ವೆಂಕಟೇಶ್, ಜಯರಾಂ, ನರಸಿಂಹಮೂರ್ತಿ, ಭೂತಿಸಿದ್ದಪ್ಪ, ಗಂಗಣ್ಣ, ಸುರೇ ಶ್, ಶಿವರಾಮಯ್ಯ, ಸುಬ್ಬಣ್ಣ, ಹರೀಶ್, ಸಿದ್ದಲಿಂ ಗಯ್ಯ, ನಾಗೇಶ್, ನಾಗರಾಜು ಮತ್ತಿತರರಿದ್ದರು.