Advertisement

ಸಮಭಾವದಿಂದ ಸೋಲು-ಗೆಲುವು ಸ್ವೀಕರಿಸಿ 

11:29 AM Nov 10, 2017 | |

ಮೈಸೂರು: ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸಬೇಕಿದ್ದು ಯುವಜನತೆ ಕ್ರೀಡೆಗಳಲ್ಲಿ ತೊಡಗಿದರೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ ಮಹದೇವಪ್ಪ ಹೇಳಿದರು.

Advertisement

ಮೈಸೂರು ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ನಂಜನಗೂಡು ತಾಲೂಕಿನ ಹದಿನಾರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ವಿಭಾಗದಿಂದ ಆಯೋಜಿಸಲಾಗಿದ್ದ 2017-18ನೇ ಸಾಲಿನ ಮೈಸೂರು ವಿಭಾಗ ಮತ್ತು ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿ 14-17 ವರ್ಷದೊಳಗಿನ ಶಾಲಾ ಬಾಲಕ-ಬಾಲಕಿಯರ ಪಂದ್ಯಾವಳಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಈ ವೇಳೆ ಹದಿನಾರು ಪ್ರೌಢಶಾಲೆಯಲ್ಲಿ ತಾವು ಓದುವಾಗ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದೆ ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.  ಹದಿನಾರು ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ತಿರುಮಲೇಶ್‌, ರಾಜ್ಯ ಮಟ್ಟದ 4 ವಿಭಾಗಗಳಾದ ಮೈಸೂರು, ಬೆಂಗಳೂರು, ಕಲಬುರ್ಗಿ, ಬೆಳಗಾವಿ ತಂಡಗಳ ಲೀಗ್‌ ಪಂದ್ಯಗಳು ಶುಕ್ರವಾರ ನಡೆಯಲಿವೆ.

ಸೆಮಿಫೈನಲ್‌ ಮತ್ತು ಫೈನಲ್‌ ಶನಿವಾರ ನಡೆಯಲಿದೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದ 14, 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡದ 4 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುತ್ತವೆ ಎಂದು ತಿಳಿಸಿದರು. ಆಟದ ಮೈದಾನದಲ್ಲಿ ನಾಲ್ಕು ಅಂಕಣ ಸಿದ್ಧಪಡಿಸಿ ಅಂಕಣಗಳಿಗೆ ಝಾನ್ಸಿ, ಇಳ, ಅರ್ಜುನ ಮತ್ತು ಏಕಲವ್ಯ ಹೆಸರು ಇಡಲಾಗಿದೆ.

ಶಾಸಕ ಕಳಲೆ ಕೇಶವಮೂರ್ತಿ,  ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಜಿಲ್ಲಾಧಿಕಾರಿ ಡಿ.ರಂದೀಪ್‌, ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತಿತರರಿದ್ದರು.
  
ಮೊದಲ ದಿನ 32 ತಂಡ ಭಾಗಿ: 480 ಕ್ರೀಡಾಪಟುಗಳು, 64 ಕೋಚ್‌, ವ್ಯವಸ್ಥಾಪಕರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಬಾಲಕರಿಗೆ ಶಾಲೆಯಲ್ಲಿ ವಸತಿ ಮತ್ತು ಬಾಲಕಿಯರಿಗೆ ಛತ್ರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಮೊದಲ ದಿನ ಮೈಸೂರು ವಿಭಾಗ ಮಟ್ಟದ ಮೈಸೂರು, ಚಾಮರಾಜನಗರ ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಮಂಗಳೂರು ಉಡುಪಿ ಜಿಲ್ಲೆಗಳಿಂದ ಒಟ್ಟು 32 ತಂಡಗಳು ಪಾಲ್ಗೊಂಡಿದ್ದವು. 14 ಮತ್ತು 17 ವರ್ಷದೊಳಗಿನ ಬಾಲಕರ 16 ತಂಡ ಮತ್ತು ಬಾಲಕಿಯರ 16 ತಂಡಗಳು ನಾಕೌಟ್‌ ಪಂದ್ಯಗಳನ್ನು ಆಡಿ ರಾಜ್ಯ ಮಟ್ಟಕ್ಕೆ 4 ತಂಡ ಆಯ್ಕೆ ಆಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next