Advertisement

ಸಂವಿಧಾನ ಬದಲಾದರೆ ದಂಗೆ: ಸಿಎಂ

01:29 PM Jan 15, 2018 | |

ಬೆಂಗಳೂರು: ದೇಶದಲ್ಲಿ ಜಾತ್ಯತೀತ ತತ್ವ ಪ್ರತಿಪಾದಿಸುವ ಸಂವಿಧಾನ ಬದಲಾಯಿಸಲು ಮುಂದಾದರೆ ಶೋಷಿತ
ಸಮುದಾಯಗಳು ದಂಗೆ ಏಳುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

 ಭಾನುವಾರ ವಿವೇಕ ನಗರದ ಇನ್‌ಫ್ಯಾಂಟ್‌ ಜೀಸಸ್‌ ಚರ್ಚ್‌ನಲ್ಲಿ ನಡೆದ ಬಾಲ ಏಸುಹಬ್ಬ, ಚರ್ಚ್‌ನ 47ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಕೆಲವರು ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಹಾಗೇನಾದರೂ ಆದರೆ ಶೋಷಿತ ವರ್ಗದ ಜನ ದಂಗೆ ಏಳಲಿದ್ದು, ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು
ತಿಳಿಸಿದರು. ಸ್ವಧರ್ಮದ ನಿಷ್ಠೆಯ ಜೊತೆಗೆ ಪರಧರ್ಮವನ್ನು ಗೌರವಿಸುವ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು.

ಸ್ವಾರ್ಥ ರಾಜಕಾರಣಕ್ಕೆ ಧರ್ಮ ಎತ್ತಿ ಕಟ್ಟುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ. ಧರ್ಮಗಳ ನಡುವಣ ಕಂದಕ ಸೃಷ್ಟಿ ನಿರ್ಮಾಣ ಮಾಡಲು ಯತ್ನಿಸುವುದು ತರವಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next