Advertisement
ಬುಧವಾರ ಮುಂಜಾನೆ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಚಿಂಚೊಳ್ಳಿ ಶಾಸಕ ಡಾ. ಉಮೇಶ್ ಜಾಧವ್, ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಕಲಾಪಕ್ಕೆ ಹಾಜರಾಗಿದ್ದರು. ಅತೃಪ್ತರು ತಾವು ಇದುವರೆಗೂ ಕಲಾಪಕ್ಕೆ ಗೈರು ಹಾಜರಾಗಿರುವುದಕ್ಕೆ ಸ್ಪಷ್ಟನೆ ನೀಡಿ, ಪಕ್ಷ ಬಿಡುವುದಿಲ್ಲ ಎಂದರು.
Related Articles
Advertisement
ಅತೃಪ್ತರ ನಡೆ ಇನ್ನೂ ನಿಗೂಢ: ಅತೃಪ್ತ ಶಾಸಕರು ಕಲಾಪಕ್ಕೆ ಹಾಜರಾಗಿ ಪಕ್ಷದ ಆದೇಶ ಪಾಲನೆ ಮಾಡಿ, ಪಕ್ಷದಲ್ಲಿಯೇ ಉಳಿಯುವು ದಾಗಿ ಹೇಳಿದ್ದರೂ, ಅವರ ನಡೆಯ ಬಗ್ಗೆ ಪಕ್ಷದಲ್ಲಿಯೇ ಅನುಮಾನ ಮುಂದುವರಿದಿದೆ. ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ರಮೇಶ್ ಜಾರಕಿಹೊಳಿಯವರು ಎಲ್ಲವೂ ಮುಗಿದಿದೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಡಿ ಶಾಸಕ ಸ್ಥಾನದಿಂದ ಉಚ್ಚಾಟನೆ ಆಗುವುದನ್ನು ತಪ್ಪಿಸಿಕೊಳ್ಳಲು ಕಲಾಪಕ್ಕೆ ಹಾಜರಾಗಿದ್ದರು ಎಂದುತಿಳಿದು ಬಂದಿದೆ. ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗಿಲ್ಲ. ರಮೇಶ್ ಜಾರಕಿಹೊಳಿ ಅವರ ನಿರ್ಧಾರಕ್ಕೆ ನಾವು ಬದ್ಧ . ಜಿಲ್ಲಾ ಮಟ್ಟದ ರಾಜಕೀಯದಲ್ಲಿ ಸ್ವಲ್ಪ ಅಸಮಾಧಾನವಿದೆ. ಸಿದ್ದರಾಮಯ್ಯ ಅವರೇ ನಮ್ಮ ನಾಯಕರು.
● ಬಿ. ನಾಗೇಂದ್ರ ಬಳ್ಳಾರಿ ಗ್ರಾಮೀಣ ಶಾಸಕ ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಮಗಳ ಮದುವೆ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದೆ. ನಮ್ಮ ನೆಂಟರು, ಸ್ನೇಹಿತರು ಅಲ್ಲಿ ಹೆಚ್ಚಿದ್ದಾರೆ. ಉಮೇಶ್ ಕತ್ತಿ ಮನೆಗೂ ರಾತ್ರಿ ಹೋಗುತ್ತೇನೆ. ಹಾಗಂತ ಬಿಜೆಪಿಗೆ ಹೋಗುತ್ತೇನೆ ಅಂತಾನಾ?
● ರಮೇಶ್ ಜಾರಕಿ ಹೊಳಿ , ಮಾಜಿ ಸಚಿವ ನಾನು ಬಂಡಾಯ ಶಾಸಕರ ಜತೆ ಗುರುತಿಸಿಕೊಂಡಿಲ್ಲ. ನನಗೆ ಯಾರ ಜತೆಯೂ ಸಮಸ್ಯೆಯಿಲ್ಲ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಶಿಕ್ಷೆಗೆ ಸಿದಟಛಿ. ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ಕುರಿತು ಇನ್ನೂ ನಿರ್ಣಯ ಆಗಿಲ್ಲ.
● ಡಾ.ಉಮೇಶ್ ಜಾಧವ್, ಚಿಂಚೋಳಿ ಶಾಸಕ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಶಾಸಕಾಂಗ ಪಕ್ಷದ ಸಭೆ ಹಾಗೂ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಅಸಮಾಧಾನ ಇತ್ತು. ಅದು ವಿಕೋಪಕ್ಕೆ ಹೋಯಿತು. ಪಕ್ಷದ ನಾಯಕರ ಜಗಳದಲ್ಲಿ ನಾವು ಬಡವಾದೆವು.
● ಮಹೇಶ್ ಕುಮಠಳ್ಳಿ ಅಥಣಿ ಶಾಸಕ