Advertisement

ಬೆಳೆಗಳ ಕೊಯ್ಯುತ್ತೆ ಕಳೆಗಳ ಕೀಳುತ್ತೆ

10:25 AM Aug 13, 2019 | Sriram |

ಎಲ್ಲೆಂದರಲ್ಲಿ ಬೆಳೆಯುವ ಕಳೆಗಳನ್ನು ಕೀಳುವುದಿದೆಯಲ್ಲ: ಅದು ಯಾತನಾದಾಯಕ ಕೆಲಸ. ನೆಲದ ಮೇಲಿರುವ ಕಳೆಯದೇ ಈ ಕತೆಯಾದರೆ ಭೂಮಿ ಒಳಗೆ ಬೇರು ಬಿಟ್ಟಿರುವ ಕಳೆಗಳನ್ನು ಕೀಳುವುದು ಇನ್ನಷ್ಟು ತ್ರಾಸದ ಕೆಲಸ. ಈ ಕೆಲಸವನ್ನು ಸುಲಭವಾಗಿಸಬೇಕೆಂದರೆ ಮಲ್ಟಿ ಪರ್ಪೋಸ್‌ (ಬಹೂಪಯೋಗಿ) ಬುಶ್‌ ಕಟ್ಟರ್‌ ಯಂತ್ರದ ಮೊರೆ ಹೋಗಬಹುದು.

Advertisement

ಈ ಯಂತ್ರ, ಕಳೆ ಮಾತ್ರವಲ್ಲದೆ ಬೇಲಿಯಂಚಿನಲ್ಲಿ ಇರುವ ಪೊದೆಗಳು, ಪೊದೆಯಾಕಾರದ ಹಣ್ಣಿನ ಗಿಡಗಳನ್ನು ಏಕಪ್ರಕಾರದಲ್ಲಿ ಟ್ರಿಮ್‌ ಮಾಡಲೂ ಉಪಯೋಗಕ್ಕೆ ಬರುತ್ತದೆ. ಅಲ್ಲದೆ ಮಾವು, ದ್ರಾಕ್ಷಿ, ಹಿಪ್ಪು ನೇರಳೆ ಇತ್ಯಾದಿ ಮರಗಿಡಗಳ ರೆಂಬೆ ಕೊಂಬೆಗಳನ್ನು ಫ‌್ರೂನಿಂಗ್‌ ಮಾಡಲು ಕೂಡ ಈ ಯಂತ್ರವನ್ನು ಬಳಸಬಹುದು. ಅವುಗಳಲ್ಲೊಂದು, ಅಗ್ರಿ ಮಾರ್ಟ್‌ನ ಕಸೈ ಮಲ್ಟಿ ಪರ್ಪೋಸ್‌ ಕಟ್ಟರ್‌. ಯಂತ್ರದ ಜೊತೆಗೆ ಬುಷ್‌ ಕಟ್ಟರ್‌, ವೀಡ್‌ ಕಟ್ಟರ್‌ ಸೇರಿದಂತೆ ಒಟ್ಟು ಐದು ವಿವಿಧ ಸಾಮರ್ಥ್ಯದ ಅಟ್ಯಾಚ್ಮೆಂಟ್‌ಗಳು ಇರುತ್ತವೆ. ಬಳಕೆದಾರ ತನ್ನ ಅಗತ್ಯಕ್ಕೆ ತಕ್ಕಂತೆ ಸೂಕ್ತ ಕಟ್ಟರ್‌ಅನ್ನು ಅಳವಡಿಸಿಕೊಳ್ಳಬಹುದು. ಬೆಳೆಗಳ ಕೊಯ್ಲು ಮಾಡುವ ಕಟ್ಟರ್‌ ಕೂಡಾ ಇದರ ಜೊತೆ ಸಿಗುತ್ತದೆ. ಕೃಷಿಕರು ತಮ್ಮ ಕೆಲಸವಾದ ನಂತರ ಇವನ್ನು ಬಾಡಿಗೆ ನೀಡುವುದರ ಮೂಲಕವೂ ಹೆಚ್ಚುವರಿ ಆದಾಯ ಪಡೆಯಬಹುದು.

ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next