ನವದೆಹಲಿ: ‘ರಿಯಲ್ ಮಿ’ ತನ್ನ ಮೊದಲ 5ಜಿ ಸ್ಮಾರ್ಟ್ ಪೋನ್ ರಿಯಲ್ ಮಿ X50 ಪ್ರೊ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವರ್ಷವೇ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ) ನಲ್ಲಿ ಈ ಸ್ಮಾರ್ಟ್ ಫೋನ್ ನನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಎಂಡಬ್ಲ್ಯೂಸಿ ತನ್ನ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು. ಆ ಕಾರಣಕ್ಕಾಗಿ ಭಾರತದಲ್ಲಿ ರಿಯಲ್ ಮಿ ಭಾರತದಲ್ಲಿ ಲೈವ್ ಸ್ಟ್ರೀಮ್ ಮೂಲಕ ಸ್ಮಾರ್ಟ್ ಪೋನ್ ಬಿಡುಗಡೆ ಮಾಡಿದೆ.
ರಿಯಲ್ ಮಿ ಎಕ್ಸ್ ಪ್ರೊ 6GB/128GB, 8GB/128GB, 12GB/256GB ಈ ಮೂರು ಆಯ್ಕೆಯಲ್ಲಿ ಲಭ್ಯವಿದೆ.
ಈ ಸ್ಮಾರ್ಟ್ ಫೋನಿನ ವಿಶೇಷತೆಗಳು:
ರಿಯಲ್ ಮಿ Xಪ್ರೊ ಸ್ಮಾರ್ಟ್ ಪೋನ್ ಸಂಪೂರ್ಣ 5ಜಿ ಸಾಮಾರ್ಥ್ಯವನ್ನು ಹೊಂದಿದೆ. ಮಾತ್ರವಲ್ಲದೆ ಸ್ನ್ಯಾಪ್ ಡ್ರ್ಯಾಗನ್ 865 ಪ್ರೊಸೆಸ್ಸರ್ ಹೊಂದಿದೆ. ಮತ್ತೊಂದು ವಿಶೇಷತೆ ಎಂದರೆ ಇದರಲ್ಲಿ 4ಜಿ, 3ಜಿ, ಆಯ್ಕೆಗಳು ಕೂಡ ಇರಲಿದ್ದು 5ಜಿ ನೆಟ್ ವರ್ಕ್(ಬ್ಯಾಂಡ್ಸ್) ಇಲ್ಲದ ದೇಶಗಳಲ್ಲೂ ಯಾವುದೇ ಸಮಸ್ಯೆಗಳಿಲ್ಲದೆ ಬಳಸಬಹುದು.
ಈ ಸ್ಮಾರ್ಟ್ ಪೋನ್ 4,200mAh ಬ್ಯಾಟರಿ ಸಾಮಾರ್ಥ್ಯ ಹೊಂದಿದ್ದು ಕೇವಲ 35 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಮಾತ್ರವಲ್ಲದೆ 65W ಸೂಪರ್ ಡಾರ್ಟ್ ಪ್ಲ್ಯಾಶ್ ಚಾರ್ಜ್ ಗುಣಮಟ್ಟವನ್ನು ಹೊಂದಿದೆ. ಹಾಗೂ ರಿಯಲ್ ಮಿ x50 ಪ್ರೊ 18W QC/PD ಚಾರ್ಜಿಂಗ್ ಮತ್ತು 30W VOOC 4.0 ಪ್ಲ್ಯಾಶ್ ಚಾರ್ಜ್ ಬೆಂಬಲವನ್ನು ಹೊಂದಿದೆ. ಇದಕ್ಕಾಗಿ GaN ಎಂಬ ಸಣ್ಣ ಚಾರ್ಜರ್ ಅಡಾಪ್ಟರ್ ಅನ್ನು ನೀಡಿದೆ. ಇದು ಬ್ಯಾಟರಿ ಸಾಮಾರ್ಥ್ಯ ಹೆಚ್ಚುವಂತೆ ಮಾಡುತ್ತದೆ.
X50 ಪ್ರೊ 6.44 ಇಂಚಿನ ಅಮೋಲ್ಡ್ 90Hz ಡಿಸ್ ಪ್ಲೇ ಯನ್ನು ಹೊಂದಿದೆ. ಇತರ ಸ್ಮಾರ್ಟ್ ಪೋನ್ ಗಳಂತೆ ಡಿಸ್ ಪ್ಲೇಯಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು G3.0 ಎಂಬ ಹೊಸ ತಂತ್ರಾಂಶವನ್ನು ಅಳವಡಿಸಲಾಗಿದೆ.
ಕ್ಯಾಮಾರ ಸಾಮಾರ್ಥ್ಯ:
ಈ ಸ್ಮಾರ್ಟ್ ಪೋನ್ ನಲ್ಲಿ ಒಟ್ಟು 6 ಕ್ಯಾಮಾರ ಗಳಿದ್ದು ಹಿಂಭಾಗದಲ್ಲಿ 4 ಹಾಗೂ ಮುಂಭಾಗದಲ್ಲಿ ಎರಡಿವೆ. ಮುಂಭಾಗದಲ್ಲಿ ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್ ಕ್ಯಾಮಾರ ನೀಡಲಾಗಿದೆ. ಹಿಂಭಾಗದಲ್ಲಿ 64 ಎಂಪಿ ಲೆನ್ಸ್ ಸಾಮಾರ್ಥ್ಯದ ಕ್ಯಾಮಾರವಿದ್ದು, 8ಎಂಪಿ ಅಲ್ಟ್ರಾ ಲೆನ್ಸ್, 12 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿದೆ. ಇದು 20x ಹೈಬ್ರೀಡ್ ಜೂಮ್ ಹಾಗೂ 2ಎಂಪಿ ಡೆಪ್ತ್ ಸೆನ್ಸಾರ್ ಒಳಗೊಂಡಿದೆ.
ಈ ಸ್ಮಾರ್ಟ್ ಫೋನ್ ಮೋಸ್ ಗ್ರೀನ್ ಹಾಗೂ ರಸ್ಟ್ ರೆಡ್ ಎರಡು ಬಣ್ಣಗಳಲ್ಲಿ ಲಭ್ಯವಿದೆ.
ಭಾರತದಲ್ಲಿ ರಿಯಲ್ ಮಿ X50 ಪ್ರೊ ಬೆಲೆ:
6GB/128GB- 37,999ರೂ.
8GB/128GB- 39,999ರೂ.
12GB/256GB- 44,999ರೂ.