Advertisement

Realme C-51: ಫೋನ್‌ ಬಿಡುಗಡೆ- 1 ಗಂಟೆಯಲ್ಲಿ ಶೇ.100 ಚಾರ್ಜಿಂಗ್‌ ಖಾತರಿ

07:03 PM Sep 05, 2023 | Team Udayavani |

ಮೊಬೈಲ್‌ ತಯಾರಕ ಸಂಸ್ಥೆ ರಿಯಲ್‌-ಮಿ ತನ್ನ “ಸಿ” ಸರಣಿಯಲ್ಲಿನ ನೂತನ ಸ್ಮಾರ್ಟ್‌ಫೋನ್‌ ರಿಯಲ್‌ಮಿ-ಸಿ51 ಅನ್ನು ಬಿಡುಗಡೆಗೊಳಿಸಿದೆ. 6.7 ಇಂಚಿನ ಐಪಿಎಸ್‌ ಎಲ್‌ಸಿಡಿ ಪ್ಯಾನೆಲ್‌, 7.99 ಎಂಎಂ ಸ್ಲೀಕ್‌ ಡಿಸೈನ್‌, 33 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ನಂಥ ವಿಶೇಷ ವಿನ್ಯಾಸವಿರುವ ಈ ಸ್ಮಾರ್ಟ್‌ಫೋನ್‌ನ ಬೆಲೆ 8,999 ರೂ.ಗಳು.

Advertisement

4 ಜಿಬಿ ರ್ಯಾಮ್‌, 64 ಜಿಬಿ ಸ್ಟೋರೇಜ್‌, 5,000 ಎಂಇಎಚ್‌ ಬ್ಯಾಟರಿ ಸಾಮರ್ಥ್ಯದ ಜತೆಗೆ 50 ಎಂಪಿ ರಿಯರ್‌ ಕ್ಯಾಮೆರಾ ಹಾಗೂ 5ಎಂಪಿ ಸೆಲ್ಫಿ ಕ್ಯಾಮರಾವನ್ನು ವಿನ್ಯಾಸಗೊಳಿಸಲಾಗಿದೆ. ಸದ್ಯ ಸಿ-51ನ ಸೀಮಿತ ಸ್ಟಾಕ್‌ಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸೆ.11ರ ಬಳಿಕ ಮೊಬೈಲ್‌ಗ‌ಳು ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next