Advertisement
ತುಂಬಾ ಪರಿಚಯದ, ಸಣ್ಣ ಆದಾಯದ ಕೆಲಸದಲ್ಲಿರುವ ಪರಿಚಿತ ಹುಡುಗನೊಬ್ಬ ಮೊಬೈಲ್ ಖರೀದಿಗಾಗಿ ಸಲಹೆ ಕೇಳಿದ. “10 ಸಾವಿರದೊಳಗೆ ಇರುವ ಒಂದು ಮೊಬೈಲ್ ಕೊಳ್ಳಬೇಕು’ ಎಂದ. “ಗಣರಾಜ್ಯೋತ್ಸವ ಇನ್ನೊಂದು ವಾರವಿದೆ ಎನ್ನುವಾಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಬಂದೇ ಬರುತ್ತದೆ. ಆ ಸಮಯದಲ್ಲಿ 10 ಸಾವಿರದ ಮೊಬೈಲು 7- 8 ಸಾವಿರಕ್ಕಾದರೂ ದೊರಕುತ್ತದೆ.’ ಎಂದು ಹೇಳಿ ಸ್ವಲ್ಪ ಕಾಯಲು ಹೇಳಿದೆ. “ಸರಿ’ ಎಂದ ಆ ಹುಡುಗ. ಎರಡೇ ದಿನಕ್ಕೆ ಹೊಸ ಮೊಬೈಲ್ ಅಂಗಡಿಯಲ್ಲಿ ಕೊಂಡೆ ಎಂದು ತೋರಿಸಿದ. ಅದಕ್ಕೆ 10 ಸಾವಿರವೆಂದೂ, ಇಎಂಐನಲ್ಲಿ ಕೊಂಡೆನೆಂದೂ ಒಟ್ಟಿಗೆ 12 ಸಾವಿರ ಬೀಳುತ್ತದೆ ಎಂದ. ಆ ಮೊಬೈಲ್‌ನ ಸ್ಪೆಸಿಫಿಕೇಷನ್ ನೋಡಿ ಹೊಟ್ಟೆ ಉರಿದು ಹೋಯಿತು. 32 ಜಿಬಿ ಆಂತರಿಕ ಮೊಮೊರಿ, 3 ಜಿಬಿ ರ್ಯಾಮ್, ನಾಲ್ಕು ಕೋರ್‌ಗಳ ಸಾಧಾರಣ ಪ್ರೊಸೆಸರ್. ಸ್ನಾಪ್‌ಡ್ರಾಗನ್ ಕೂಡ ಅಲ್ಲ. ಕ್ಯಾಮರಾ ಸಾಮರ್ಥ್ಯವೂ ಕಡಿಮೆ. 6 ಸಾವಿರ ಮೌಲ್ಯವಿರುವ ಮೊಬೈಲಿಗೆ ಆ ಕಂಪೆನಿ 10 ಸಾವಿರ ದರ ಇಟ್ಟಿತ್ತು. ಅದರ ಮೇಲೆ 2 ಸಾವಿರ ಇಎಂಐನ ಬಡ್ಡಿ ಬೇರೆ. ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ವಸ್ತುವಿನ ಮೌಲ್ಯಕ್ಕಿಂತ ಹೆಚ್ಚು ಬೆಲೆ ತೆತ್ತು ಕೊಂಡಾಗ ಬಹಳ ಬೇಸರವಾಗುತ್ತದೆ.
ಈ ಉದಾಹರಣೆ ನೋಡಿದಾಗ, ಮೊನ್ನೆ (ಜನವರಿ 9ರಂದು) ಬಿಡುಗಡೆಯಾದ ರಿಯಲ್‌ಮಿ 5ಐ ಮೊಬೈಲ್ ನೀಡುವ ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಇನ್ನೊಂದು ಮೊಬೈಲ್ ಎನಿಸದಿರದು. ದರದಲ್ಲಿ ಇದು ಆರಂಭಿಕ ದರ್ಜೆಯ ಬಜೆಟ್ ಫೋನ್. ಆದರೆ, ವೈಶಿಷ್ಟéಗಳಲ್ಲಿ ಮಧ್ಯಮ ದರ್ಜೆಯ ಫೋನ್‌ಗಳಂತೆಯೇ ಇದೆ. ಅದರ ದರ 9 ಸಾವಿರ ರೂ. ಇದು 64 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರ್ಯಾಮ್ ಹೊಂದಿದೆ. ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 665 ಪ್ರೊಸೆಸರ್ ಒಳಗೊಂಡಿದೆ. ಇದು ಎಂಟು ಕೋರ್‌ಗಳ ಪ್ರೊಸೆಸರ್. 2.2 ಗಿ.ಹ. ವೇಗದ ಈ ಪ್ರೊಸೆಸರ್ ಸಾಧಾರಣವಾಗಿ ಮಧ್ಯಮ ದರ್ಜೆಯ ಮೊಬೈಲ್‌ಗಳಲ್ಲಿರುವಂಥದ್ದು. ಇದು ರಿಯಲ್‌ಮಿ 5 ಸರಣಿಯ ಹೊಚ್ಚ ಹೊಸ ಫೋನ್, ಈಗಾಗಲೇ ರಿಯಲ್‌ಮಿ 5, 5 ಪ್ರೊ, 5ಎಸ್. ಇವೆ. ಹೊಸದು ರಿಯಲ್‌ಮಿ 5ಐ. ಈ ಫೋನು ಜನವರಿ 15ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಆನ್‌ಲೈನ್ ಸ್ಟೋರ್‌ನಲ್ಲಿ ಮಾರಾಟಕ್ಕೆ ಲಭ್ಯವಾಗುತ್ತದೆ. ಹಸಿರು ಮತ್ತು ನೀಲಿ ಬಣ್ಣದಲ್ಲಿ ದೊರಕುತ್ತದೆ. ಸ್ಟ್ರಾಂಗ್ ಪರದೆ
ಈ ಮೊಬೈಲ್‌ನ ಸ್ಪೆಸಿಫಿಕೇಷನ್ ನೋಡೋಣ. ಇದರ ಪರದೆ 6.5 ಇಂಚಿನ ಎಚ್‌ಡಿ ಪ್ಲಸ್ (720×1600 ಪಿಕ್ಸಲ್ಸ್) . ವಾಟರ್‌ಡ್ರಾಪ್ ನಾಚ್ ಹೊಂದಿದೆ. ಇದನ್ನು ಕಂಪೆನಿ ಮಿನಿ ಡ್ರಾಪ್ ಡಿಸ್‌ಪ್ಲೇ ಎಂದು ಕರೆದುಕೊಂಡಿದೆ. ಅಂದರೆ ನೀರಿನ ಸಣ್ಣ ಹನಿಯಷ್ಟೇ ಗಾತ್ರ ಪರದೆಯಲ್ಲಿ ಜಾಗ ಬಿಡಲಾಗಿದೆ.(ಸೆಲ್ಫಿà ಕ್ಯಾಮರಾಗಾಗಿ). ಪರದೆ ಗಟ್ಟಿಯಾಗಿರಲೆಂದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3ಪ್ಲಸ್ ಪದರ ಹಾಕಲಾಗಿದೆ. ಅಂಡ್ರಾಯ್ಡ 9 ಪೈ ಕಾರ್ಯಾಚರಣೆ ವ್ಯವಸ್ಥೆ ಇದೆ. ಇದಕ್ಕೆ ಕಲರ್ ಓಎಸ್ 6.1 ಸ್ಕಿನ್ ನೀಡಲಾಗಿದೆ. ಶೀಘ್ರವೇ ಬರಲಿರುವ ಅಪ್‌ಡೇಟ್‌ನಲ್ಲಿ ಕಲರ್ ಓಎಸ್ ತೆಗೆದು, ರಿಯಲ್‌ಮಿ ಯೂಸರ್ ಇಂಟರ್‌ಫೇಸ್ ನೀಡಲಾಗುವುದೆಂದು ಕಂಪೆನಿ ತಿಳಿಸಿದೆ.
ಈ ಮೊಬೈಲ್‌ನಲ್ಲಿ ಎರಡು 4ಜಿ ಸಿಮ್‌ಗಳನ್ನು ಹಾಕಬಹುದು. ಅದರ ಜೊತೆಗೆ ಮೆಮೊರಿ ಕಾರ್ಡ್ ಸಹ ಹಾಕಿಕೊಳ್ಳಬಹುದು. ಅಂದರೆ ಒಟ್ಟು 3 ಸ್ಲಾಟ್‌ಗಳಿವೆ. 3.5 ಎಂಎಂ ಆಡಿಯೋ ಜಾಕ್ ಇದೆ. 2.0 ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಿದೆ. 5ವಿ/2ಎ ಚಾರ್ಜರ್ ಹೊಂದಿದೆ.
Related Articles
ಎಲ್ಲ ಕೇಳಿದ ಮೇಲೆ ಬ್ಯಾಟರಿ ಎಷ್ಟಿರಬಹುದು ಎಂಬ ಕುತೂಹಲ ಸಹಜ. ಇದರಲ್ಲಿರುವ ಬ್ಯಾಟರಿ ಭರ್ಜರಿಯಾದುದು. ಅಂದರೆ 5000 ಎಂಎಎಚ್ ಇದೆ! ಎರಡು ದಿನ ಪೂರ್ತಿ ಬರುತ್ತದೆ. ಇದರಲ್ಲಿ ಇನ್ನೊಂದು ವಿಶೇಷವಿದೆ. ಇದು ರಿವರ್ಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಇದರ ಮೂಲಕ ತುರ್ತು ಸಂದರ್ಭಗಳಲ್ಲಿ ಬೇರೆ ಮೊಬೈಲ್‌ಗಳನ್ನು ಜಾರ್ಜ್ ಮಾಡಿಕೊಳ್ಳಬಹುದು. ಆದರೆ ಇದಕ್ಕಾಗಿ ಪ್ರತ್ಯೇಕ ಕನೆಕ್ಟರ್ ಕೊಳ್ಳಬೇಕಾಗುತ್ತದೆ.
Advertisement
ನಾಲ್ಕು ಲೆನ್ಸ್‌ಗಳ ಕ್ಯಾಮರಾಮೊಬೈಲ್ ತೆಗೆದುಕೊಳ್ಳುವವರು ಈಗೀಗ ಕ್ಯಾಮರಾ ಕಡೆಯೂ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ರಿಯಲ್‌ಮಿ 5ಐ ಫೋನು 4 ಲೆನ್ಸ್‌ಗಳ ಕ್ಯಾಮರಾ ಹೊಂದಿದೆ. 12 ಮೆ.ಪಿ. ಪ್ರಾಥಮಿಕ ಲೆನ್ಸ್, 8 ಮೆ.ಪಿ. ವೈಡ್ ಆ್ಯಂಗಲ್ ಲೆನ್ಸ್, ಇದು 119 ಡಿಗ್ರಿವರೆಗೂ ದೃಶ್ಯ ವಿಸ್ತರಣೆ ಮಾಡುತ್ತದೆ. ಹೆಚ್ಚು ದೂರ ಹೋಗದೇ ವೈಡ್ ಆ್ಯಂಗಲ್ ಫೋಟೋ ತೆಗೆಯಲು ಸಹಾಯಕ. 2 ಮೆ.ಪಿ. ಮ್ಯಾಕ್ರೋ ಲೆನ್ಸ್ ವಸ್ತುವಿನಲ್ಲಿರುವ ಚಿಕ್ಕಪುಟ್ಟ ಡೀಟೇಲ್‌ಗಳನ್ನೂ ಸೆರೆ ಹಿಡಿಯುತ್ತದಂತೆ. ಹಾಗೂ 2 ಮೆ.ಪಿ. ಪೋರ್ಟ್‌ರೈಟ್ ಲೆನ್ಸ್ ಹೊಂದಿದೆ. 9 ಸಾವಿರಕ್ಕೆ ಕ್ಯಾಮರಾ ವಿಭಾಗ ಚೆನ್ನಾಗಿಯೇ ಇದೆ. ಆದರೆ ಮುಂಬದಿ (ಸೆಲ್ಫಿ) ಕ್ಯಾಮರಾ 8 ಮೆಗಾ ಪಿಕ್ಸಲ್ ಇದೆ. ಕನಿಷ್ಟ 13 ಮೆ.ಪಿ. ಇದ್ದರೆ ಚೆನ್ನಾಗಿತ್ತು. – ಕೆ.ಎಸ್. ಬನಶಂಕರ ಆರಾಧ್ಯ