ರಾಯಚೂರು/ ಶಿವಮೊಗ್ಗ: ದೇಶದ ಜನಗಣತಿ ಮಾಡಿ ಆರ್ಥಿಕತೆಯಲ್ಲಿ ಯಾವ ಸಮುದಾ ಯದ ಪಾಲು ಎಷ್ಟು ಎಂದು ಬಯಲು ಮಾಡುತ್ತೇವೆ. ಈ ವಿಚಾರ ದೇಶದ ಎಲ್ಲ ನಾಗರಿಕರಿಗೂ ಗೊತ್ತಾದಾಗಲೇ ಅಸಲಿ ರಾಜಕೀಯ ಆರಂಭವಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ರಾಯಚೂರು ಹಾಗೂ ಶಿವಮೊಗ್ಗದಲ್ಲಿ ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ “ಪ್ರಜಾಧ್ವನಿ ಯಾತ್ರೆ-2′ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಎಷ್ಟು ಬಡ ಕುಟುಂಬಗಳಿವೆ ಎಂಬ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.
ದೇಶದ ಶೇ.90 ಬಡಜನರ ತೆರಿಗೆ ಹಣ ಕೆಲವೇ ಕೆಲವು ಸಿರಿವಂತರ ಜೇಬು ಸೇರುತ್ತಿದೆ. ದೇಶದ 70 ಕೋಟಿ ಜನರ ಆಸ್ತಿ ಕೇವಲ 20 ಜನರ ಬಳಿಯಿದೆ. ಕೇಂದ್ರ ಸರಕಾರ ಕೇವಲ 20-25 ಜನರ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ದೇಶದಲ್ಲಿ ಶೇ.15 ದಲಿತರು, ಶೇ.50 ಹಿಂದುಳಿದವರು, ಶೇ.8 ಆದಿವಾಸಿಗಳು, ಶೇ.15 ಅಲ್ಪಸಂಖ್ಯಾಕರು, ಶೇ.6 ಸಾಮಾನ್ಯ ವರ್ಗದ ಜನರಿದ್ದಾರೆ. ಈ ಸಮುದಾಯಗಳಿಗೆ ಪ್ರಧಾನಿ ಮೋದಿ ಏನೂ ಮಾಡಿಲ್ಲ. ದೇಶದ ಎಲ್ಲ ಮಾಧ್ಯಮಗಳ ಮಾಲಕರು ದಲಿತರು, ಹಿಂದುಳಿದವರಲ್ಲ ಎಂದರು.
ಅಷ್ಟೇ ಅಲ್ಲ, ಇಡೀ ದೇಶದ ಆರ್ಥಿಕತೆ ನಿರ್ವಹಿಸುತ್ತಿರುವುದು ಕೂಡ ಕೇವಲ 90 ಐಎಎಸ್ ಅ ಧಿಕಾರಿಗಳು. ಅದರಲ್ಲಿ ದಲಿತರು, ಹಿಂದುಳಿದ, ಅಲ್ಪಸಂಖ್ಯಾಕರ ಸಂಖ್ಯೆ ಕೇವಲ ಬೆರಳೆಣಿಕೆ ಮಾತ್ರ. ಅವರಿಗೂ ಸಣ್ಣಪುಟ್ಟ ಹುದ್ದೆ ನೀಡಿದ್ದಾರೆ. ಪ್ರಮುಖ ಹುದ್ದೆಗಳಲ್ಲಿ ಹಿಂದುಳಿದವರಿಗೆ ಸ್ಥಾನ ಇಲ್ಲ. 100 ರೂಪಾಯಿಯಲ್ಲಿ ಕೇವಲ 6 ರೂ. ವೆಚ್ಚ ನಿರ್ಧರಿಸುವ ಹಕ್ಕು ಮಾತ್ರ ಹಿಂದುಳಿದವರಿಗಿದೆ. ಸಮಾನತೆ ಬಗ್ಗೆ ಮಾತನಾಡುವವರು ನಕ್ಸಲರು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳುತ್ತಾರೆ. ಇದು ಸಂವಿಧಾನದ ಮೇಲಿನ ಅತಿ ದೊಡ್ಡ ಆಕ್ರಮಣವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕೊಡಬೇಕು. ನಡ್ಡಾ ಹೇಳಿಕೆ ಸಂವಿಧಾನ ವಿರೋ ಧಿಯಾಗಿದ್ದು, ಅವರು ಕ್ಷಮೆಯಾಚನೆ ಜತೆಗೆ ಹುದ್ದೆ ತ್ಯಜಿಸಬೇಕಾಗಿದೆ ಎಂದರು.