Advertisement

6 ಗಂಟೆಯಲ್ಲಿ ಎಲ್ಲ ಮರೆವ “ರಿಯಲ್‌ ಲೈಫ್ ಗಜಿನಿ’!

08:49 PM Nov 15, 2021 | Team Udayavani |

ಬರ್ಲಿನ್‌: ಆ ಮೀರ್‌ ಖಾನ್‌ ನಟನೆಯ “ಗಜಿನಿ’ ಸಿನಿಮಾ ನಿಮಗೆಲ್ಲರಿಗೂ ನೆನಪಿರಬಹುದು. ಅದೇ ರೀತಿ, ನಿಜ ಜೀವನದಲ್ಲಿಯೂ ಶಾರ್ಟ್‌ ಟೈಮ್‌ ಮೆಮೊರಿಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದಾರೆ.

Advertisement

ಜರ್ಮನಿಯ ಡೇನಿಯೆಲ್‌ ಹೆಸರಿನ ವ್ಯಕ್ತಿ 6 ವರ್ಷಗಳ ಹಿಂದೆ ಅಪಘಾತಕ್ಕೆ ತುತ್ತಾಗಿದ್ದರಂತೆ. ಟ್ರಾಫಿಕ್‌ನಲ್ಲಿ ನಿಂತಿದ್ದ ಅವರಿಗೆ ಕಾರೊಂದು ಗಂಟೆಗೆ 125 ಕಿ.ಮೀ ವೇಗದಲ್ಲಿ ಬಂದು ಗುದ್ದಿದ್ದು, ಅವರ ಮೆದುಳಿಗೆ ಬಲವಾದ ಪೆಟ್ಟು ಬಿದ್ದಿದೆ. ಅಂದಿನಿಂದ ಇಂದಿನವರೆಗೆ ಅವರ ಜ್ಞಾಪಕ ಶಕ್ತಿಯ ಅವಧಿ ಕೇವಲ 6 ಗಂಟೆ ಮಾತ್ರ.

ಇದನ್ನೂ ಓದಿ:ಅಂತೂ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ರವಿ ವರ್ಗಾವಣೆ

ಏನೇ ವಿಚಾರವಿದ್ದರೂ 6 ಗಂಟೆಗಳ ನಂತರ ಅವರು ಮರೆತುಬಿಡುತ್ತಾರೆ. “ನನ್ನ ಮಗ ಜನಿಸಿದ ಕ್ಷಣ, ಅವನ ಜೀವನದ ಅದ್ಭುತ ಕ್ಷಣಗಳಾದ ಬಾಲ್ಯದ ಯಾವುದೇ ಘಟನೆ ನನ್ನ ನೆನಪಿನಲ್ಲಿ ಉಳಿದಿಲ್ಲ’ ಎಂದು ನೋವಿನಿಂದ ಡೇನಿಯೆಲ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next