Advertisement
ನಿವೇಶನ ಅಥವಾ ಫ್ಲ್ಯಾಟ್‌ಗಳ ಬೇಡಿಕೆಗಿಂತ ಲಭ್ಯತೆ ಪ್ರಮಾಣ ಕೊಂಚ ಅಧಿಕವಾಗಿದೆ. ಹಾಗಾಗಿ, ಖರೀದಿದಾರರ ಮುಂದೆ ಹೆಚ್ಚು ಆಯ್ಕೆಗಳಿವೆ. ಮತ್ತೂಂದೆಡೆ ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿ ಪ್ರಮಾಣ ಇಳಿಕೆ ಮಾಡಲಾಗಿದೆ. ಇದು ಪರೋಕ್ಷವಾಗಿ ಗ್ರಾಹಕರಿಗೆ ಲಾಭದಾಯಕ ಆಗಲಿದ್ದು,
Related Articles
Advertisement
ಹೆಚ್ಚು ಆಯ್ಕೆಗಳು: “ನನ್ನ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಪ್ರಸ್ತುತ ಖರೀದಿದಾರರ ಪ್ರಾಬಲ್ಯ ಇದೆ. ಈ ಹಿಂದೆ ಯಾವುದಾದರೂ ಒಂದು ಸೈಟ್ ಅಥವಾ ಫ್ಲ್ಯಾಟ್ ನೋಡಿಕೊಂಡು ಬಂದು, ನಂತರ ಮೂರು ದಿನಬಿಟ್ಟು ಪುನಃ ಆ ಜಾಗಕ್ಕೆ ಭೇಟಿ ನೀಡಿದರೆ, ಅದರ ಬೆಲೆ ಹೆಚ್ಚಿಗೆ ಹೇಳುತ್ತಿದ್ದರು. ಆದರೆ, ಈಗ ಆ ಸ್ಥಿತಿ ಇಲ್ಲ. ಜನರ ಮುಂದೆ ಆಯ್ಕೆಗಳಿವೆ. ಕೈಗೆಟಕುವ ದರದಲ್ಲಿ ದೊರೆಯಲಿದೆ’ ಎಂದು ಮಾನಂದಿ ಡೆವಲಪರ್ ಪ್ರೈ.ಲಿ.,ನ ಮಾಲಿಕ ಮಾನಂದಿ ಸುರೇಶ್ ತಿಳಿಸುತ್ತಾರೆ.
ಈ ಮೊದಲು ತುಂಬಾ ಐಷಾರಾಮಿ ಮತ್ತು ದೊಡ್ಡ ಗಾತ್ರದ ಫ್ಲ್ಯಾಟ್‌ಗಳ ನಿರ್ಮಾಣ ಹೆಚ್ಚಾಗಿತ್ತು. ಇವುಗಳ ಬೆಲೆ 45-50 ಲಕ್ಷ ರೂ. ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವನ್ನು ಗುರಿಯಾಗಿಟ್ಟುಕೊಂಡು 600ರಿಂದ 800 ಚದರಡಿಯಲ್ಲಿ 1 ಬಿಎಚ್‌ಕೆ ಮತ್ತು 2 ಬಿಎಚ್‌ಕೆ ಮನೆಗಳನ್ನು ನಿರ್ಮಿಸುವ ಟ್ರೆಂಡ್ ಶುರುವಾಗಿದೆ. ಇವುಗಳ ಬೆಲೆ 28ರಿಂದ 30 ಲಕ್ಷ ರೂ. ಇರುತ್ತದೆ. ಕುಟುಂಬಗಳ ಗಾತ್ರ ಕೂಡ ಕಡಿಮೆ ಆಗುತ್ತಿರುವುದು ಈ ಟ್ರೆಂಡ್‌ಗೆ ಕಾರಣ ಎಂದೂ ಅವರು ಹೇಳುತ್ತಾರೆ.
ನಗರದಾದ್ಯಂತ ಸುಮಾರು ಏಳು ಲಕ್ಷಕ್ಕೂ ಅಧಿಕ ಫ್ಲ್ಯಾಟ್‌ಗಳಿದ್ದು, ಈ ಪೈಕಿ ಐಟಿಪಿಎಲ್ ಸುತ್ತಲಿನ ಪ್ರದೇಶದಲ್ಲೇ ಮೂರೂವರೆಯಿಂದ ನಾಲ್ಕು ಲಕ್ಷ ಫ್ಲ್ಯಾಟ್‌ಗಳಿವೆ. ಹಾಗಂತ ಅವುಗಳ ದರ ಕಡಿಮೆ ಆಗಿಲ್ಲ. ಏಕೆಂದರೆ, ರಿಯಲ್ ಎಸ್ಟೇಟ್ ಪ್ರತಿ ವರ್ಷ ಪ್ರಗತಿ ಸಾಧಿಸುವ ಕ್ಷೇತ್ರವಾಗಿದೆ. ಹಲವು ಆಫರ್ ಗಳನ್ನು ಕೇಂದ್ರ ಸರ್ಕಾರ ನೀಡಿರುವುದರಿಂದ ಹೂಡಿಕೆಗೆ ಇದು ಉತ್ತಮ ಅವಕಾಶ ಎಂದು ಬಿಲ್ಡರ್ಅ ಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಕೇಂದ್ರದ ಅಧ್ಯಕ್ಷ ಎಸ್. ಶಿವಪ್ರಕಾಶ್ ತಿಳಿಸಿದರು.
ಬೆಂಗಳೂರು ಗಟ್ಟಿ ಮಾರ್ಕೆಟ್ ಏಕೆ? : ದೇಶದ ಇತರೆ ನಗರಗಳಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದರೂ, ಬೆಂಗಳೂರು ಅಷ್ಟೊಂದು ಸುಲಭವಾಗಿ ಜಗ್ಗುವುದಿಲ್ಲ. ಎಂಥ ಸಂದರ್ಭಗಳಲ್ಲೂ ತನ್ನ ಸ್ಥಿರತೆಯನ್ನು ಕಾಪಾಡಿಕೊಂಡು ಬಂದಿದೆ. ಇದಕ್ಕೆ ಮುಖ್ಯ ಕಾರಣ ಐಟಿ ಮತ್ತು ಸ್ಟಾರ್ಟಪ್ ವಲಯ. ಇತರೆ ಉದ್ಯಮಗಳ ಹಾಗೆ ಇವುಗಳಿಗೆ ಅಷ್ಟೊಂದು ಬೇಗ ದುಷ್ಪರಿಣಾಮ ಬೀರದು. ಬೆಂಗಳೂರು ಬಹುತೇಕ ಈ ಉದ್ಯಮದ ನೆರಳಲ್ಲೇ ಇದೆ.
-ವಿಜಯಕುಮಾರ್ ಚಂದರಗಿ