ಕುಂಬಳೆ: ಕಾಸರಗೋಡು ಲೋಕಸಭೆ ಚುನಾವಣೆಯ ಮತ ಎಣಿಕೆಯು ಮೇ 23ರಂದು ಪಡನ್ನಕ್ಕಾಡ್ ನೆಹರೂ ಕಲಾವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ಗ್ರಾಮ, ನಗರಗಳ ವ್ಯತ್ಯಾಸವಿಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆ ಸಂಬಂಧ ಕಳೆದ ಒಂದು ತಿಂಗಳ ಕಾಲಗಳಿಂದ ನಡೆದುಬರುತ್ತಿರುವ ಬಿಸಿ ಚರ್ಚೆ ಮತಗಣನೆ ನಡೆದು ಫಲಿತಾಂಶ ಪ್ರಕಟಗೊಂಡು ಕೊನೆಗೊಳ್ಳಲಿದೆ.
ಮತಗಣನೆಗಿರುವ ಎಲ್ಲ ಸಿದ್ಧತೆಗಳು ಕೊನೆಯ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಇದರಂಗವಾಗಿ ಮೈಕ್ರೋ ಆಬ್ಸರ್‌ವರ್‌ಗಳ ತರಬೇತಿ ಕಾರ್ಯಕ್ರಮ ಮೇ 21ರಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರಗಿತು..
ಮತಗಣನೆ ಕೇಂದ್ರವಾಗಿರುವ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಞಂಗಾಡ್ ವಿಧಾನಸಭೆ ಕ್ಷೇತ್ರಗಳ ತಲಾ 14 ಎಣಿಕೆಯ ಮೇಜುಗಳು ಸಿದ್ಧವಾಗಿವೆ. ಉದುಮಕ್ಕೆ 10, ತೃಕ್ಕರಿಪುರಕ್ಕೆ 13, ಪಯ್ಯನ್ನೂರು, ಕಲ್ಯಾಶೇರಿಗೆಗಳಿಗೆ ತಲಾ 12 ಮತೆಎಣಿಕೆ ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರತಿ ಗಣನೆ ಮೇಜಿನಲ್ಲೂ ಕೌಂಟಿಂಗ್ ಸೂಪರ್ ವೈಸರ್‌ಗಳು, ಕೌಂಟಿಂಗ್ ಅಸಿಸ್ಟೆಂಟ್‌ಗಳು, ಮೈಕೋÅಒಬ್ಸರ್‌ವರ್ ಗಳು ಇರುವರು.
ಮೈಕೋÅ ಒಬ್ಸರ್ ವರ್‌ಗಳ ನಿಗಾದಲ್ಲಿ ಕೌಂಟಿಂಗ್ ಸೂಪರ್ ವೈಸರ್ ಮತ್ತು ಕೌಂಟಿಂಗ್ ಅಸಿಸ್ಟೆಂಟ್‌ಗಳು ಪ್ರತಿ ಮೇಜಿನಲ್ಲಿ ಮತಗಳ ಗಣನೆ ನಡೆಸಲಿದ್ದಾರೆ. ಪ್ರತಿ ಗಣನೆಯ ಮೇಜಿನ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇರುವರು.
ಅಂಚೆ ಮತಗಳ ಗಣನೆ ಜಿಲ್ಲಾಧಿಕಾರಿಯವರ ಮೇಲ್ನೋಟದಲ್ಲಿ ನಡೆಯಲಿದೆ. ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿಯ ಶ್ರೇಣಿಯಲ್ಲಿರುವ 6 ಎ.ಆರ್.ಒ.ಗಳನ್ನು ನೇಮಿಸಲಾಗಿದೆ. ಇಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ವೋಟ್‌ಗಳು, ಸ್ಕ್ಯಾನ್ ನಡೆಸಿ ಮತಗಣನೆ ನಡೆಸಲು 12 ಮೇಜುಗಳನ್ನು
ವಿಜಯೋತ್ಸವಕ್ಕೆ ಅವಕಾಶ
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮೇ 23ರಂದು ವಿಜೇತ ಅಭ್ಯರ್ಥಿಯ ಪಕ್ಷಕ್ಕೆ ಮಾತ್ರ ವಿಜಯೋತ್ಸವ ಮೆರವಣಿಗೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿರುವರು. ರಾಷ್ಟ್ರೀಯ ಮಟ್ಟದಲ್ಲಿ ವಿಜೇತ ರಾಜಕೀಯ ಪಕ್ಷದ ವಿಜಯೋತ್ಸವದ ಮೆರವಣಿಗೆ ಮೇ 24ರಂದು ನಡೆಸಬಹುದಾಗಿದೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 23 ಮತ್ತು 24ರಂದು 144 ಕಾಯಿದೆ ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.