Advertisement

ಕಲ್ಲು ಗಣಿಗಾರಿಕೆ ನಿಲ್ಲಿಸಲು ಸಿದ್ಧನಿದ್ದೇನೆ: ಸಚಿವ

11:59 AM Jan 09, 2022 | Team Udayavani |

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಕಲ್ಲು ಗಣಿಗಾರಿಕೆಯಿಂದ ಭೂಕಂಪನ ಆಗುತ್ತಿದ್ದರೆ ಈ ಕೂಡಲೇ ನಿಲ್ಲಿಸಲು ತಯಾರಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Advertisement

ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ವಿಜ್ಞಾನಿಗಳ ಜೊತೆಯಲ್ಲಿ ಭೇಟಿ ನೀಡಿ ಭೂಕಂಪನ ಪ್ರದೇಶವನ್ನುಪರಿಶೀಲಿಸಿ ಮಾತನಾಡಿದ ಅವರು, ಪದೇ ಪದೆ ಭಾರೀ ಶಬ್ದದೊಂದಿಗೆ ಭೂಮಿ ನಡುಗುತ್ತಿರುವುದಕ್ಕೆಅಸಲಿ ಕಾರಣ ವನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ.ಮತ್ತೂಂ ದೆಡೆ ವಿರೋಧ ಪಕ್ಷದವರು ಅತಿಯಾದ ಗಣಿಗಾರಿಕೆಯೇ ಭೂಕಂಪನಕ್ಕೆ ಕಾರಣ ಎಂದು ಅಪ ಪ್ರಚಾರ ನಡೆಸುತ್ತಿದ್ದಾರೆ. ಒಂದು ವೇಳೆ ಗಣಿಗಾರಿಕೆಯಿಂದಲೇ ಭೂಕಂಪನ ಆಗುತ್ತಿದೆ ಎಂದು ವಿಜ್ಞಾನಿಗಳು ದೃಢಪಡಿಸಿದರೆ ಈ ಕ್ಷಣವೇ ನಿಲ್ಲಿಸಲು ಸಿದ್ಧನಿದ್ದೇನೆ. ನನ್ನ ಜನರಿಗೋಸ್ಕರ ನಾನು ಗಣಿಗಾರಿಕೆ ನಿಲ್ಲಿಸಲು ಸಿದ್ಧ. ಆದರೆ, ಅದನ್ನು ವಿಜ್ಞಾನಿಗಳು ಹೇಳಬೇಕು ಎಂದು ಹೇಳಿದರು.

ಕೇವಲ ಚಿಕ್ಕಬಳ್ಳಾಪುರ ಜಿಲ್ಲೆ ಮಾತ್ರವಲ್ಲದೇ, ರಾಜ್ಯದ ಹಲವೆಡೆ ಮಳೆ ಹೆಚ್ಚಾಗಿದೆ. ಭಾರೀ ಶಬ್ದಕೇಳಿ ಬರುತ್ತಿದೆ ಎಂದು ವಿಜ್ಞಾನಿಗಳು, ಸಚಿವರು ಸಮ್ಮುಖದಲ್ಲಿ ಮಾಹಿತಿಯನ್ನು ನೀಡಿದರು.ಆದರೂ, ಜನರ ಸಮಾಧಾನಕ್ಕೆ ಅಧ್ಯಯನ ನಡೆಸಿವರದಿ ಸಲ್ಲಿಸುತ್ತೇವೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದರು.

ನಿಯಮ ಉಲ್ಲಂಘಿಸಿದ್ರೆ ಕ್ರಮಕೈಗೊಳ್ಳಿ: ವಿರೋಧ ಪಕ್ಷದವರು ಗಣಿಗಾರಿಕೆಯಿಂದ ಭೂಕಂಪನವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ. ಪ್ರತಿ ವಾರಕ್ಕೊಮ್ಮೆ ಈ ಭಾಗಕ್ಕೆ ಭೇಟಿ ನೀಡಬೇಕು, ಜನರಲ್ಲಿ ಮೂಡಿರುವ ಗೊಂದಲ ಮತ್ತು ಆತಂಕವನ್ನು ನಿವಾರಣೆ ಮಾಡಿ, ನಿಯಮ ಉಲ್ಲಂಘಿಸಿ ಗಣಿಗಾರಿಕೆ ಮಾಡುತ್ತಿದ್ದರೆ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿ ಕಾರಿಗಳಿಗೆ ಸ್ಥಳದಲ್ಲೇ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು.

ತಿಂಗಳಿಂದ ಹಲವು ಬಾರಿ ಭೂಮಿ ಕಂಪಿಸಿದ ಅನುಭವ, ಮಳೆಯಿಂದ ಬಹಳ ದೊಡ್ಡ ಶಬ್ದವಾಗಿದೆ. ಬಂಡಹಳ್ಳಿ, ಪಿಳ್ಳಗುಂಡ್ಲಹಳ್ಳಿ, ಶೆಟ್ಟಿಗೆರೆ ಗ್ರಾಮಗಳ ಜನರಲ್ಲಿ ಭೂಕಂಪನದ ಭಾವನೆ ಮೂಡಿದೆ. ರಾಜ್ಯ ಮಟ್ಟದ ಅಧಿಕಾರಿಗಳು ಅಧ್ಯಯನ ಮಾಡಿ ವರದಿ ಸಲ್ಲಿಸಲಿದ್ದಾರೆ. ಇತ್ತೀಚಿಗೆ ಸುರಿದ ಮಳೆಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಹಾಗೆಯೇ ಭೌಗೋಳಿಕವಾಗಿ ನೋಡಿದಾಗ ನಾವು ಸುರಕ್ಷಿತ ಪ್ರದೇಶದಲ್ಲಿದ್ದೇವೆ. ಯಾರೂ ಆತಂಕಪಡುವ ಅಗತ್ಯಇಲ್ಲ ಎಂದು ಧೈರ್ಯ ತುಂಬಿದರು. ಜಿಲ್ಲಾಧಿಕಾರಿ ಆರ್‌.ಲತಾ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ವಿಜ್ಞಾನಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next