Advertisement

ಭೂಮಿ ಬಿಟ್ಟುಕೊಡಲು ಸಿದ್ಧ!

10:28 AM Sep 01, 2019 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿನ ವಿವಾದಿತ ರಾಮಜನ್ಮಭೂಮಿಯಲ್ಲಿ ಅಲಹಾ ಬಾದ್‌ ಹೈಕೋರ್ಟ್‌ ತೀರ್ಪಿನ ಪ್ರಕಾರ ನೀಡಲಾಗಿರುವ ಒಂದು ಪಾಲನ್ನು ಹಿಂದೂಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಶಿಯಾ ವಕ್ಫ್ ಮಂಡಳಿ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.

Advertisement

ವಿವಾದ ಕುರಿತು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಶುಕ್ರವಾರ 16ನೇ ದಿನದ ವಿಚಾರಣೆ ನಡೆಸಿದ್ದು, ಶಿಯಾ ವಕ್ಫ್ ಮಂಡಳಿ ಪರ ವಾದವನ್ನು ಆಲಿಸಿತು. ಶಿಯಾ ಪರ ವಾದಿಸಿದ ವಕೀಲ ಎಂ ಸಿ ಧಿಂಗ್ರಾ, ಬಾಬರ್‌ನ ಕಮಾಂಡರ್‌ ಮೀರ್‌ ಬಾಕಿ ಶಿಯಾ ಆಗಿದ್ದ. ಈತನೇ ಬಾಬ್ರಿ ಮಸೀದಿಯನ್ನು ನಿರ್ವಹಿಸುತ್ತಿದ್ದ ಎಂದು ವಾದಿಸಿದ್ದಾರೆ.

ಅಲ್ಲದೆ ಅಲಹಾಬಾದ್‌ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲಿ 2.77 ಎಕರೆ ಭೂಮಿಯ ಪೈಕಿ ಮೂರನೇ ಒಂದು ಪಾಲನ್ನು ಶಿಯಾ ವಕ್ಫ್ ಮಂಡಳಿಗೆ ನೀಡಿದೆ. ಈ ಭೂಮಿಯನ್ನು ಹಿಂದೂಗಳಿಗೆ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.

ನ್ಯಾಯಾಂಗ ನಿಂದನೆ ಅರ್ಜಿ: ಇದೇ ವೇಳೆ, ಪ್ರಕರಣದಲ್ಲಿ ಮುಸ್ಲಿಮರ ಪರ ವಾದ ಮಂಡಿಸುತ್ತಿರುವುದಕ್ಕೆ ಹಿರಿಯ ವಕೀಲ ರಾಜೀವ್‌ ಧವನ್‌ ಅವರಿಗೆ ಮಾಜಿ ಸರ್ಕಾರಿ ಅಧಿಕಾರಿಯೊಬ್ಬರು ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಧವನ್‌ ಅವರು ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next