Advertisement

ಮರಾಟಿಗರಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧ: ರಾಜಮೋಹನ ಉಣ್ಣಿತ್ತಾನ್‌

11:40 PM Sep 20, 2019 | Sriram |

ಬದಿಯಡ್ಕ: ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಹಿಂದುಳಿದ ಮರಾಟಿಗರನ್ನು ಇದ್ದಕ್ಕಿದ್ದಂತೆ 2003ರಲ್ಲಿ ಸರಕಾರ ಮರಾಟಿಗರನ್ನು ವಂಚಿಸಿತು.

Advertisement

ಅದರ ಫಲವಾಗಿ ಮರಾಟಿಗರು ಮೀಸಲಾತಿಯಿಂದ ಹೊರಹಾಕಲ್ಪಟ್ಟರು. 2013 ರಲ್ಲಿ ಮೀಸಲಾತಿ ಮರಳಿ ಪಡೆದರು. ಮೀಸಲಾತಿ ವಿಭಾಗದಿಂದ ಸಾಮಾನ್ಯ ವಿಭಾಗವನ್ನಾಗಿ ಮಾಡಿದ ಸರಕಾರದ ತೀರ್ಮಾನದೆದುರು ಸತತವಾಗಿ ಹೋರಾಡಿ ಗೆದ್ದ ಈ ದಿನ ನಿಜಕ್ಕೂ ಸಂಭ್ರಮಾಚರಣೆಯ ದಿನವಾಗಿದೆ.ರಾಜಕೀಯ ಭೇದಭಾವವಿಲ್ಲದೆ ಮರಾಟಿಗರಿಗೆ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ತಾನು ಸಿದ್ದ ಎಂದು ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್‌ ಅವರು ಹೇಳಿದರು.

ಆವರು ಬದಿಯಡ್ಕದಲ್ಲಿ ನಡೆದ ಮರಾಟಿ ದಿನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಬದಿಯಡ್ಕ ಗುರುಸದನದಲ್ಲಿ 6ನೇ ವಾರ್ಷಿಕ ಮರಾಟಿ ದಿನವನ್ನು ಆಚರಿ ಸಲಾಯಿತು.

ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಧಾ ಕೃಷ್ಣ ಪೈಕ ಅವರು ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಕೇರಳ ಮರಾಟಿ ಫಡರೇಶನ್‌ ಅಧ್ಯಕ್ಷ ಸುಬ್ರಾಯ ಅಡೂರು ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮಂಜುನಾಥ ನಾಯ್ಕ ಪುತ್ತೂರು, ಡಾ| ಸಿ.ಎಚ್‌. ಜನಾರ್ದನ ನಾಯ್ಕ, ಹರಿಶ್ಚಂದ್ರ ನಾಯ್ಕ ಡಿವೈಎಸ್‌ಪಿ, ಚಲನಚಿತ್ರ ನಟಿ ಆಶಾ ಸುಜಯ್‌, ಯೂತ್‌ ಜನರೇಶನ್‌ ಕ್ಲಬ್‌ ಅಧ್ಯಕ್ಷ ರಾಧಾಕೃಷ್ಣ ನಾಯ್ಕ ಮೊದಲಾದವರು ಭಾಗವಹಿಸಿದರು. ಕಾರ್ಯಕ್ರಮದ ಪ್ರಧಾನ ಸಂಚಾಲಕ ಶ್ಯಾಮ್‌ ಪ್ರಸಾದ್‌ ಮಾನ್ಯ ಅವರು ಸ್ವಾಗತಿಸಿದರು. ಮರಾಟಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ ಅಡ್ಕಸ್ಥಳ ಅವರು ವಂದಿಸಿದರು.

ರಶ್ಮಿ ಹಾಗೂ ಕಚಿತ್ರಲೇಖಾ ನೀರ್ಚಾಲು ಅವರು ಪ್ರಾರ್ಥಿಸಿದರು. ಶಶಿಕುಮಾರ್‌ ಮತ್ತು ನಾರಾಯಣ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಆಭಿನಂದಿಸಲಾಯಿತು.

Advertisement

ಆರ್ಥಿಕ ನೆರವು ಅಗತ್ಯ
ಮನೆ ನಿರ್ಮಾಣಕ್ಕಾಗಿ ಆಗತ್ಯವಿರುವಷ್ಟು ಮೊತ್ತ ಮಂಜೂರು ಮಾಡುವಂತಾಗಬೇಕು. ಆಂತಾರಾಜ್ಯ ವಿವಾಹವಾದಲ್ಲಿ ಜಾತಿ ಪ್ರಮಾಣ ಪತ್ರದ ಸಮಸ್ಯೆ ಎದುರಾಗುತ್ತಿದೆ. ಮರಾಟಿ ಕಾಲನಿಗಳಲ್ಲಿ ನೀರು, ವಿದ್ಯುತ್‌ ಸಂಪರ್ಕಗಳನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು. ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡಬೇಕು.
-ಸುಬ್ರಾಯ ನಾಯ್ಕ
ಅಧ್ಯಕ್ಷ ಕರ್ನಾಟಕ ಕೇರಳ ಮರಾಟಿ ಫಡರೇಶನ್‌

ಒಗ್ಗಟ್ಟಿನಿಂದ ಶ್ರಮಿಸೋಣ
ಸಮಾಜದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸ ಬೇಕು. ಮಹಿಳಾ ಸಂಘಟನೆಗಳ ಸಬಲೀ ಕರಣ ಅತ್ಯಗತ್ಯವಾಗಿದೆ. ಮರಾಟಿ ಸಮಾಜ ಬಾಂಧವರ ಹಕ್ಕು ಮತ್ತು ಸವಲತ್ತಿ ಗಾಗಿ ಹೋರಾಡುವ ಸಂಘಟನೆಯ ಜತೆ ಭಿನ್ನತೆ ಇಲ್ಲದೆ ಕೈಜೋಡಿಸೋಣ. ಒಗ್ಗಟ್ಟಾಗಿ ಮಂಡಿ ಸಿದ ನ್ಯಾಯಯುತ ಬೇಡಿಕೆಗಳ ಮೂಲಕ ಸರಕಾರದ ಇನ್ನಷ್ಟು ಸವಲತ್ತುಗಳನ್ನು ನಮ್ಮ ದಾಗಿಸಿಕೊಂಡು ನಮ್ಮಲಿರುವ ಎಡರು ತೊಡರುಗಳನ್ನು ನೀಗಲು ಪ್ರಯತ್ನಿಸೋಣ.
 -ಆಶಾ ಸುಜಯ್‌
ಕನ್ನಡ, ತುಳು ಚಲನಚಿತ್ರ ನಟಿ.

Advertisement

Udayavani is now on Telegram. Click here to join our channel and stay updated with the latest news.

Next