ದಾಂಡೇಲಿ: ಈ ದೇಶದ ಪರಿಸರ ಹಾಗೂ ವನ್ಯ ಸಂಕುಲ ಸಂರಕ್ಷಿಸುವ ಜೊತೆಗೆ ಇಲ್ಲಿನ ನೆಲ ಸಂಸ್ಕೃತಿಯನ್ನು ಸುಭದ್ರವಾಗಿ ಕಾಪಾಡಿಕೊಂಡು ರಾಷ್ಟ್ರದ ಮಹತ್ವದ ಆಸ್ತಿಗಳಾಗಿರುವ ಆದಿವಾಸಿಗಳ ಪರವಾಗಿ ಹೋರಾಟಕ್ಕೆ ಸದಾ ಸ್ಪಂದಿಸುವುದಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಕ್ಲೃಕರ್ ಹೇಳಿದರು.
ತಾನು ಪರಿಷತ್ತಿನ ಸದಸ್ಯನಾಗಿ ಆದಿವಾಸಿಗಳ ಪರವಾಗಿದ್ದೇನೆ. ಅರಣ್ಯವಾಸಿಗಳ ಹಕ್ಕು ಕಾಯ್ದುಕೊಳ್ಳುವ ದೃಷ್ಟಿಯಿಂದ ಬಹಳಷ್ಟು ಕೆಲಸ ಮಾಡಿದ್ದೇನೆ. ಇದರ ಹೊರತಾಗಿಯೂ ಕುಣಬಿಗಳ ಕುಂಬ್ರಿ ಹಕ್ಕನ್ನು ಕಾರ್ಯಗತಗೊಳಿಸಲು ಶ್ರಮಿಸಿರುವುದನ್ನು ವಿವರಿಸಿದ ಘೋಕ್ಲೃಕರ್, ಆದಿವಾಸಿಗಳ ಬೆಂಬಲಕ್ಕೆ ಎಲ್ಲರು ಮುಂದೆ ಬರಬೇಕಾಗಿದೆ ಎಂದು ಕರೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆ 2006ರ ಬಗ್ಗೆ ಮಾತನಾಡಿದ ಗ್ರೀನ್ ಇಂಡಿಯಾ ಸಂಸ್ಥೆ ನಿರ್ದೇಶಕ ಹಾಗೂ ಕಾರ್ಯಕ್ರಮದ ಪ್ರಮುಖ ಸಂಘಟಕ ಡಾ| ಬಿ.ಪಿ. ಮಹೇಂದ್ರಕುಮಾರ್, ಭಾರತದಲ್ಲಿ ಬ್ರಿಟಿಷರಿಂದ ಹಿಡಿದು ರಚಿಸಲಾದ ಅರಣ್ಯ ಕಾಯ್ದೆಗಳಲ್ಲಿ ಆದಿವಾಸಿ ಮತ್ತು ಪಾರಂಪರಿಕ ಅರಣ್ಯ ರಹವಾಸಿಗಳ ಹಕ್ಕುಗಳನ್ನು ಮಾನ್ಯ ಮಾಡುವ ಕಾಯ್ದೆಯೆ ಅರಣ್ಯ ಹಕ್ಕು ಕಾಯ್ದೆಯಾಗಿದೆ. ಆದರೆ ಬಂಡವಾಳ ಶಾಹಿಗಳು ಅದಕ್ಕೆ ಪೂರಕವಾಗಿರುವ ಸರ್ಕಾರಗಳು ಗ್ರಾಮಸಭಾ ನಿಯಮಗಳನ್ನು ಉಲ್ಲಂಘಿಸಿ, ಮೈನಿಂಗ್‌ಗಳು, ಪ್ರವಾಸೋದ್ಯಮಗಳು, ಅರಣ್ಯವನ್ನು ಕಡಿದು, ಏಕ ರೀತಿಯ ವಾಣಿಜ್ಯ ಮರಗಳನ್ನು ಬೆಳೆಸುವ ಇತರೆ 6000 ಯೋಜನೆಗಳನ್ನು ಅನಧಿಕೃತವಾಗಿ ಜಾರಿಗೊಳಿಸಿ 40,000 ಕೋಟಿ ಕಾಡನ್ನು ಧ್ವಂಸ ಮಾಡಿದೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ಕೇವಲ ವೈಲ್ಡ್ ಲೈಫ್ ಥರ್ಟ್ಸ್ ರಿಟ್ ಪಿಟಿಷನ್ ಮಾಡಿರುವುದರ ಹಿಂದೆ ರಾಜಕೀಯ ಮತ್ತು ಬ್ಯೂರೆಕ್ರೆಟಿಕ್ ಅಧಿಕಾರಿಗಳು ಸೇರಿದ್ದಾರೆ. ಇದರ ವಿರುದ್ಧ ನಿರ್ಧಿಷ್ಟ ಹೋರಾಟ ರೂಪುಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ರಾಜ್ಯ ಭೂ ಹಕ್ಕುದಾರರ ವೇದಿಕೆ ಮುಖ್ಯಸ್ಥ ರಾಜಶೇಖರ ನಾಯ್ಡು ಸಂವಾದ ನಡೆಸಿಕೊಟ್ಟರು.
Advertisement
ಅವರು ರಾಜ್ಯ ಮೂಲ ಆದಿವಾಸಿ ವೇದಿಕೆ ಮತ್ತು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಜೊತೆಯಾಗಿ ನಗರದ ಡಿಲಕ್ಸ್ ಸಭಾಭವನದಲ್ಲಿ ಅರಣ್ಯ ಹಕ್ಕು ಕಾಯ್ದೆ 2006ರ ಸವಾಲುಗಳು ಮತ್ತು ಸಾಧ್ಯತೆಗಳು ಕುರಿತು ಹಮ್ಮಿಕೊಂಡ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ಡಿಯಾಗೊ ಬಸ್ತ್ಯಾಂವ್ ಸಿದ್ದಿ, ತಾವು ಸಿದ್ದಿಗಳ ಕುರಿತು ನಡೆಸಿದ ಹೋರಾಟಗಳನ್ನು ವಿವರಿಸಿದರು.
ಕಾಗದ ಕಾರ್ಖಾನೆ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ವಿಠuಲ್ ಕೆ.ಎನ್, ಕಾರ್ಡ್ ಸಂಸ್ಥೆ ಅಧ್ಯಕ್ಷ ರಾಯ್ ಡೇವಿಡ್, ನಿಸರ್ಗ ಫೌಂಡೇಶನ್ ಅಧ್ಯಕ್ಷ ನಂಜುಂಡಯ್ಯ, ಸಿದ್ದಿ ಭೂ ಹೋರಾಟ ಸಮಿತಿ ಅಧ್ಯಕ್ಷ ಇಮಾಮ್ ಎ.ಕೆ.ಸಿದ್ದಿ ಮೊದಲಾದವರು ಉಪಸ್ಥಿತರಿದ್ದರು.
ಇಮಾಮ್ ಸಿದ್ದಿ ಸ್ವಾಗತಿಸಿದರು. ವಿಷ್ಣು ವೇಳಿಪ್ ವಂದಿಸಿದರು. ಮುತ್ತಯ್ಯ ಕಾರ್ಯಕ್ರಮ ನಿರೂಪಿಸಿದರು.