Advertisement

ಭಾರತ್ ಜೋಡೋ ಯಾತ್ರೆ ವೇಳೆ ಓಡಿದ ರಾಹುಲ್‌ ಗಾಂಧಿ; ವಿಡಿಯೋ ವೈರಲ್‌

09:09 PM Oct 30, 2022 | Team Udayavani |

ತೆಲಂಗಾಣ:ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಭಾನುವಾರ ಏಕಾಏಕಿ ಓಡಿದ್ದಾರೆ.

Advertisement

ಗಾಬರಿಯಾಗಬೇಡಿ. ತೆಲಂಗಾಣದ ಗೊಲ್ಲಪಲ್ಲಿ ಎಂಬಲ್ಲಿ ಭಾನುವಾರ ಪಾದಯಾತ್ರೆ ಪ್ರಗತಿಯಲ್ಲಿ ಇರುವಂತೆ ರಾಹುಲ್‌ ಅವರು ಓಡಲಾರಂಭಿಸಿದ್ದಾರೆ. ಅವರ ಜತೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ಇದರಿಂದಾಗಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದವರೂ ಕೂಡ ಓಡಬೇಕಾಯಿತು.

ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ ರೆಡ್ಡಿ, ಭದ್ರತೆಯ ಉಸ್ತುವಾರಿ ಹೊತ್ತಿದ್ದವರೆಲ್ಲ ಬಿರುಸಿನ ನಡಿಗೆಯಲ್ಲಿ ತೊಡಗಿದ್ದವರು ವಯನಾಡ್‌ ಸಂಸದರನ್ನು ಅನುಸರಿಸಬೇಕಾಯಿತು.

ತೆಲಂಗಾಣದಲ್ಲಿ ಯಾತ್ರೆ ಭಾನುವಾರ 5ನೇ ದಿನ ಪ್ರವೇಶ ಮಾಡಿದೆ. ಓಟದ ವಿಡಿಯೋ ಮತ್ತು ಫೋಟೋ ವೈರಲ್‌ ಆಗಿದೆ. ಅದರ ಬಗ್ಗೆ ಪರ ಮತ್ತು ವಿರೋಧವಾಗಿ ಟ್ವಿಟರ್‌ನಲ್ಲಿ ಕಮೆಂಟ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next