Advertisement

ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ

12:34 PM Dec 30, 2017 | |

ಬಸವಕಲ್ಯಾಣ: ಶ್ರೀ ಜಗದ್ಗುರು ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯ ಸ್ಮರಣೋತ್ಸವ ಹಾಗೂ ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಅಕ್ಷರ ಜಾತ್ರೆಗೆ ವೇದಿಕೆ ಸಜ್ಜಾಗಿದೆ.

Advertisement

ಹುಲಸೂರನ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಹಾಸ್ವಾಮೀಜಿ ನೇತೃತ್ವ,
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರ ಸಾರಥ್ಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನಕ್ಕಾಗಿ ಅಗತ್ಯ ಸಿದ್ಧತೆಗಳು ಪೂರ್ಣಗೊಂವೆ. ಪ್ರೊ| ವೀರೇಂದ್ರ ಸಿಂಪಿ ವೇದಿಕೆ, ಪ್ರೊ| ಸೂಗಯ್ಯ ಹಿರೇಮಠ ಮಂಟಪ, ಡಾ| ಮಾಣಿಕರಾವ್‌ ಧನಶ್ರೀ ಹೆಸರಿನಲ್ಲಿ ಮಹಾದ್ವಾರ ಸಿದ್ಧಡಿಸಲಾಗಿದೆ.

ಸ್ವಾಗತ ಸಮಿತಿ ಆಶ್ರಯದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿ ಪದಾ ಧಿಕಾರಿಗಳು, ಪರಿಷತ್ತಿನ
ಪದಾಧಿ ಕಾರಿಗಳು, ಮಠದ ಭಕ್ತರು ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸುತಿದ್ದಾರೆ. ಗ್ರಾಮದ ಕಂಬಗಳಿಗೆ ಕನ್ನಡದ ಬಣ್ಣ ಬಳಿಲಾಗಿದ್ದು, ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ಕನ್ನಡ ಧ್ವಜ ರಾರಾಜಿಸುತ್ತಿದ್ದು, ಎಲ್ಲಡೆ ಸಡಗರ-ಸಂಭ್ರಮ ಕಂಡು ಬರುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆವ
ಸಮ್ಮೇಳನಕ್ಕೆ ಶನಿವಾರ ಬೆಳಗ್ಗೆ ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಪ್ರಾಧ್ಯಾಪಕ ಡಾ| ಪುರುಷೋತ್ತಮ ಬಿಲಿಮಲೆ ಚಾಲನೆ ನೀಡಲಿದ್ದಾರೆ. 16ನೇ ಸಮ್ಮೇಳನ ನಿಮಿತ್ತ ವಿವಿಧ ಲೇಖಕರು ಬರೆದ 16 ಸಾಹಿತ್ಯಿಕ ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಉದ್ಘಾಟನೆಗೂ ಮುನ್ನ ಬೆಳಗ್ಗೆ ಗ್ರಾಮ¨ ಸಮ್ಮೇಳನಾಧ್ಯಕ್ಷ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿ ಹಾಗೂ ಜಗದ್ಗುರು ಬಸವಕುಮಾರ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಸಮ್ಮೇಳನಕ್ಕೆ ಬರುವ ಕನ್ನಡಾಭಿಮಾನಿಗಳಿಗಾಗಿ ಬೆಳಗ್ಗಿನ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೂಲಸೂರ ಶ್ರೀ ಶಿವಾನಂದ ಮಹಾಸ್ವಾಮೀಜಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ತಿಳಿಸಿದ್ದಾರೆ.

ಸಮ್ಮೇಳನ ಸರ್ವಾಧ್ಯಕ್ಷರ ಪರಿಚಯ
ಬಸವಕಲ್ಯಾಣ: ಹುಲಸೂರಿನಲ್ಲಿ ಜರುಗಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಆಯ್ಕೆಯಾಗಿರುವ ಎಂ.ಜಿ.ದೇಶಪಾಂಡೆ ನಾಡಿನ ಹಿರಿಯ ಸಾಹಿತಿ ಹಾಗೂ ಕನ್ನಡ ಹೋರಾಟಗಾರು. ವೃತ್ತಿಯಲ್ಲಿ ಸಹಕಾರ ಕೇಂದ್ರ ಬ್ಯಾಂಕಿನ ಅಧಿಕಾರಿಯಾಗಿ ನಿವೃತ್ತರಾಗಿದ್ದು, ಕಾವ್ಯ, ಕಥೆ, ಕಾದಂಬರಿ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮೃಷಿ ಮಾಡಿದ್ದಾರೆ. ಅನ್ವೇಷಣೆ, ಕಾವ್ಯಚಿತ್ರಾಂಬರಿ, ವಿರಹ ಪ್ರೀತಿ, ಕವನಸಂಕಲನ. ಪ್ರಕಾಶಜ್ಯೋತಿ, ಹೂ ಬಾಡಿದಾಗ, ಶ್ರಾವಣಿ, ದೇವಯಾನಿ, ಭ್ರಮೆ ಕಥಾ ಸಂಕಲನಗಳನ್ನು ಪರಾಗ, ಹನಿಹನಿ ಸುಧೆ ಚುಟುಕು ಸಂಕಲನಗಳನ್ನು.

ಪ್ರೀತಿ ತಂದ ಫಜೀತಿ ನಾಟಕ, ಕಾಮನಬಿಲ್ಲು ಶಿಶು ಕವಿತೆ, ಗುಲಾಬಿ ಪಕಳೆಗಳು ಮಿನಿಗವನ, ಜೀವನ ಚರಿತ್ರೆ ಸೇರಿದಂತೆ ಸೃಜನ 50, ಸೃಜನೇತರ 3, ಒಟ್ಟು 53 ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. 2011ರಲ್ಲಿ ನಡೆದ ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿಯ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ, 2012ರಲ್ಲಿ ಜರುಗಿದ ಚುಟುಕು
ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷರಾಗಿ, 2013ರಲ್ಲಿ ನಡೆದ ಬೀದರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜಿಲ್ಲಾ ಆಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
ಗುಲಬರ್ಗಾ ವಿವಿಯಿಂದ ರಾಜ್ಯೋತ್ಸವ ಪ್ರಶಸ್ತಿ, ಚುಟುಕು ಸಿರಿ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ, ಸಂಸ್ಥೆಗಳಿಂದಲೂ ಅನೇಕ ಪ್ರಶಸ್ತಿಗಳು ಲಭಿಸಿವೆ.

Advertisement

ಸಮ್ಮೇಳನದಲ್ಲಿ ಇಂದು-ನಾಳೆ ಏನೇನು?
ಬಸವಕಲ್ಯಾಣ: ಜಗದ್ಗುರು ಶ್ರೀ ಬಸವಕುಮಾರ ಶಿವಯೋಗಿಗಳ 42ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್‌ನಿಂದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.30 ಮತ್ತು 31ರಂದು ಹುಲಸೂರನಲ್ಲಿ ಆಯೋಜಿಸಲಾಗಿದೆ.

ಡಿ.30ರಂದು ಬೆಳಗ್ಗೆ 8ಕ್ಕೆ ಹುಲಸೂರಿನ ಶ್ರೀಜಗದ್ಗುರು ಅಲ್ಲಮಪ್ರಭು ಶೂನ್ಯ ಪೀಠ ಅನುಭವ ಮಂಟಪದಿಂದ ಸಮ್ಮೇಳನದ ವೇದಿಕೆ ವರೆಗೆ ಮೆರವಣಿಗೆ ಜರುಗಲಿದ್ದು, ನಂತರ ಗುರು ಬಸವೇಶ್ವರ ಮಠದ ಪರಿಸರದಲ್ಲಿ ಸಮ್ಮೇಳನ
ಉದ್ಘಾಟನಾ ಸಮಾರಂಭ ಜರುಗಲಿದೆ.

ನವದೆಹಲಿಯ ಜವಾಹರಲಾಲ್‌ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ| ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಹಾರಕೂಡನ ಡಾ| ಚನ್ನವೀರ ಶಿವಾಚಾರ್ಯರು, ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಹುಲಸೂರನ ಶ್ರೀ ಶಿವಾನಂದ ಮಹಾಸ್ವಾಮಿಜಿ, ಬೀದರನ ಅಕ್ಕ ಅನ್ನಪೂರ್ಣ ತಾಯಿ ನೇತೃತ್ವ ವಹಿಸುವರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. ಶಾಸಕ ಮಲ್ಲಿಕಾರ್ಜುನ ಖೂಬಾ ಆಶಯ ಭಾಷಣ ಮಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಶಾಸಕ ರಾಜಶೇಖರ ಬಿಡುಗಡೆಗೊಳಿಸಲಿದ್ದು, ಸಂಸದ ಭವಂತ ಖೂಬಾ ಗ್ರಂಥ ಬಿಡುಗಡೆ, ಶಾಸಕ ರಹಿಂ ಖಾನ್‌ ಪುಸ್ತಕ ಮಳಿಗೆ ಉದ್ಘಾಟನೆ, ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ರಾಜೇಂದ್ರ ಗಂದಗೆ, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ವೀರೂಪಾಕ್ಷ ಗಾದಗಿ ಭಾಗವಹಿಸುವರು.

ಉದ್ಘಾಟನೆ ನಂತರ ಸಮ್ಮೇಳನ ಅಧ್ಯಕ್ಷರ ಜೀವನ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಲಿದ್ದು, ಹೊಸಪೇಟೆಯ ಡಾ| ರಾಜಶೇಖರ ಜಮದಂಡಿ ವಿಶೇಷ ಉಪನ್ಯಾಸ ನೀಡುವರು. ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟ
ಅಧ್ಯಕ್ಷತೆ ವಹಿಸುವರು.

ನಂತರ ಡಾ| ಬಿ.ಬಿ. ಪೂಜಾರ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಜರುಗುವುದು. ಕವಿಗಳು ಕವನ ವಾಚನ ಮಾಡಲಿದ್ದು, ಸಂಜೆ 5ಕ್ಕೆ ಕನ್ನಡ ಸಾಹಿತ್ಯ ಮತ್ತು ಸಮಾನತೆ ನೆಲೆಗಳು ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಪ್ರಾಚೀನ ಸಾಹಿತ್ಯ ಕುರಿತು ಶಂಭುಲಿಂಗ ಕಾಮಣ್ಣ, ವಚನ ಸಾಹಿತ್ಯ ಕುರಿತು ಡಾ| ನಾಗರಾಜ ನಾಡಗೌಡರು, ದಾಸ ಸಾಹಿತ್ಯ ಕುರಿತು ಬಿ.ಎಂ. ಅಮರವಾಡಿ, ಹಾಗೂ ದಲಿತ ಸಾಹಿತ್ಯ ಕುರಿತು ಡಾ| ಮಲ್ಲಿಕಾರ್ಜುನ ಆವೆ್ಣು ಉಪನ್ಯಾಸ ಮಂಡಿಸುವರು.

ಸಂಜೆ 7ಕ್ಕೆ ಜಾಗತಿಕರಣ ಮತ್ತು ಜನಪದ ಸಂಸ್ಕೃತಿ ಕುರಿತು ಗೋಷ್ಠಿ ಜರುಗಲಿದೆ. ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಅಧ್ಯಕ್ಷತೆ ವಹಿಸಲಿದ್ದು, ಒಗಟು, ಒಡಪು, ಗಾದೆ ಕುರಿತು ಉಪನ್ಯಾಸ ನೀಡುವರು. ಇಳಕಲ್ಲ ಡಾ| ಶಂಭು ಬಳಿಗಾರ ಅವರು ಜನಪದ ಮತ್ತು ಕುಟುಂಬ ಪ್ರೀತಿ, ಸಂಗಪ್ಪ ಹಿಪ್ಪಳಗಾಂವೆ ಅವರು ಜನಪದ ಮತ್ತು ಆಹಾರ ಪದ್ಧತಿ ಕುರಿತು ಉಪನ್ಯಾಸ ನೀಡುವರು.

ಡಿ.31ರಂದು ಬೆಳಗ್ಗೆ 11:30ಕ್ಕೆ ಕನ್ನಡ ಸಾಹಿತ್ಯ ಮತ್ತು ಜೀವನ ಪ್ರೀತಿ ಗೋಷ್ಠಿ ಜರುಗಲಿದ್ದು, ವಿಜಯಪುರದ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಡಾ| ಎಂ.ಎಸ್‌.ಪಾಟೀಲ ಉದ್ಘಾಟಿಸುವರು. ಜಿಲ್ಲಾ ಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 1ಕ್ಕೆ ಮಕ್ಕಳ ಗೋಷ್ಠಿ ಜರುಗಲಿದ್ದು, ಕಲಬುರಗಿಯ ಮಹೇಶ ಪಾಟೀಲ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3ಕ್ಕೆ ಬೀದರ ಜಿಲ್ಲೆಯ ಅಭಿವೃದ್ಧಿಯ ಸಾಧ್ಯತೆಗಳು ಕುರಿತು ಗೋಷ್ಠಿ ಜರುಗಲಿದ್ದು, ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ಅಧ್ಯಕ್ಷತೆ ವಹಿಸುವರು. ಡಾ| ರವಿ ದೇಶಮುಖ, ಕೃಷಿ ಮತ್ತು ನೀರಾವರಿ ಕುರಿತು, ಡಾ| ಎನ್‌.ಚಂದ್ರೇಗೌಡ ಶಿಕ್ಷಣ ಕುರಿತು ಹಾಗೂ ಡಾ| ಗೌತಮ ಅರಳಿ ನೈರ್ಮಲೀಕರಣ ಕುರಿತು ಉಪನ್ಯಾಸ ನೀಡುವರು. ಸಂಜೆ 5ಕ್ಕೆ ಹುಲಸೂರು ಸಾಂಸ್ಕೃತಿಕ ಚರಿತೆ ಮತ್ತು ಹೊಸ ತಾಲ್ಲೂಕಿನ ಅಭಿವೃದ್ಧಿ ಸಾಧ್ಯತೆ ಕುರಿತು ಗೋಷ್ಠಿ ಜರುಗಲಿದ್ದು, ಎಸಿ ಶರಣ ಬಸವಪ್ಪ ಕೊಟಪ್ಪಗೊಳ ಅಧ್ಯಕ್ಷತೆ ವಹಿಸುವರು. ಡಾ| ಗುರುಲಿಂಗಪ್ಪ ಧಬಾಲೆ ವಿಶೇಷ ಉಪನ್ಯಾಸ ನೀಡುವರು. ಸಂಜೆ 6ಕ್ಕೆ ಬಹಿರಂಗ ಅ ಧಿವೇಶನ ಜರುಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸುವರು. ಟಿ.ಎಂ. ಮಚ್ಚೆ, ಗೊತ್ತುವಳಿ ಮಂಡನೆ ಮಾಡುವರು.

ಸಂಜೆ 6:15ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಸಮಾರೋಪ ನುಡಿ ನುಡಿಯುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರು, ಗಣ್ಯರಿಗೆ ಸನ್ಮಾನ ಸಮಾರಂಭ ಜರುಗಲಿದೆ. 

ಭಾಗವಹಿಸಿ ಯಶಸ್ವಿಗೊಳಿಸಿ 
ರಾಜ್ಯದ ಗಡಿಯ ಹುಲಸೂರನಲ್ಲಿ ಬೀದರ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಮ್ಮೇಳನದ ಮೂಲಕ ಗಡಿ ಭಾಗದ ಜನರಲ್ಲಿ ಕನ್ನಡಾಭಿಮಾನ ಜಾಗೃತಿಗೊಳಿಸುವುದೇ ಸಮ್ಮೇಳನದ ಮೂಲ ಆಶಯವಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಜಿಲ್ಲೆಯ ವಿಶೇಷವಾಗಿ ಗಡಿಭಾಗದ ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.
zಸುಧಿಧೀರ ಕಾಡಾದಿ, ಸಮ್ಮೇಳನ ಸ್ವಾಗತ ಸಮಿತಿ ಕೋಶಾಧ್ಯಕ್ಷರ .

Advertisement

Udayavani is now on Telegram. Click here to join our channel and stay updated with the latest news.

Next