Advertisement

ಅಖಾಡ ಸಿದ್ಧ: ವಾರ್ಡ್‌ ವಶಕ್ಕೆ ಅಭ್ಯರ್ಥಿಗಳ ಕಾದಾಟ

03:35 PM May 17, 2019 | pallavi |

ತಿ.ನರಸೀಪುರ: ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಜನರಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ಯೋಗ್ಯರಿಗೆ ಪಕ್ಷದ ಟಿಕೆಟ್ ನೀಡಿರುವುದರಿಂದ ಬನ್ನೂರು ಪುರಸಭೆಯಲ್ಲಿ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ತಾಲೂಕಿನ ಬನ್ನೂರು ಪುರಸಭೆ ಆವರಣದಲ್ಲಿರುವ ಸಿಡಿಎಸ್‌ ಭವನದಲ್ಲಿ ವಿವಿಧ ವಾರ್ಡ್‌ಗಳಿಗೆ ಜೆಡಿಎಸ್‌ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರಸಭೆಯ 23 ವಾರ್ಡ್‌ಗಳಿಗೆ ಕಾರ್ಯಕರ್ತರು ಹಾಗೂ ಮುಖಂಡರ ಸಲಹೆಯಂತೆ ಗೆಲ್ಲುವ ಸಾಮರ್ಥ್ಯವಿರುವ ‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಹೆಚ್ಚಿನ ವಾರ್ಡ್‌ಗಳಲ್ಲಿ ಜೆಡಿಎಸ್‌ ಸದಸ್ಯರು ಆಯ್ಕೆಗೊಳ್ಳುವುದರಿಂದ ಪುರಸಭೆ ಅಧಿಕಾರವನ್ನು ಹಿಡಿಯುತ್ತೇವೆ ಎಂದರು.

ಕಾರ್ಯಕರ್ತರ ಪಕ್ಷ:ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜಾತ್ಯತೀತ‌ ಜನತಾದಳ ಎಂದೆಂದಿಗೂ ಕಾರ್ಯಕರ್ತರ ಪಕ್ಷವಾಗಿದೆ. ಬನ್ನೂರು ತಾಲೂಕಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲು ಹೋಬಳಿ ಕೇಂದ್ರದಲ್ಲಿರುವ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷವನ್ನು ಜನರು ಅಧಿಕಾರಕ್ಕೆ ತರಬೇಕಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲರಿಗೂ ಸ್ಪರ್ಧೆಗೆ ಅವಕಾಶ ನೀಡಲಿಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಟಿಕೆಟ್ ವಂಚಿತರ ಕ್ಷಮೆ ಕೋರುತ್ತೇನೆ. ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾರ್ಯತಂತ್ರ: ಪುರಸಭೆ ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಜನದಟ್ಟಣೆ ಹೆಚ್ಚಾಗುವುದನ್ನು ತಡೆಗಟ್ಟಲು ಜೆಡಿಎಸ್‌ ಅಭ್ಯರ್ಥಿಗಳನ್ನು ಮೂರು ಹಂತದಲ್ಲಿ ಕಣಕ್ಕಿಳಿಸಲಾಗುತ್ತಿದೆ. ಉಮೇದುವಾರಿಕೆಯನ್ನು ಸಲ್ಲಿಸಲಿದ್ದಾರೆ. ಹಾಗೆಯೇ ಗೆಲ್ಲಲಿಕ್ಕೂ ಕಾರ್ಯತಂತ್ರ ರೂಪಿಸಿದ್ದೇವೆ ಎಂದು ಎಂ.ಅಶ್ವಿ‌ನ್‌ಕುಮಾರ್‌ ತಿಳಿಸಿದರು.

ನಾಮಪತ್ರ ಸಲ್ಲಿಕೆ: ಬನ್ನೂರು ಪುರಸಭೆಯ 5ನೇ ವಾರ್ಡ್‌- ಕೃಷ್ಣೇಗೌಡ, 7ನೇ ವಾರ್ಡ್‌-ನಂಜುಂಡಸ್ವಾಮಿ, 8ನೇ ವಾರ್ಡ್‌- ಬಿ.ಆರ್‌.ಶ್ರೀನಿವಾಸ್‌, 9ನೇ ವಾರ್ಡ್‌-ಬಿ.ಎನ್‌.ಕುಮಾರ, 15ನೇ ವಾರ್ಡ್‌- ಧನಲಕ್ಷ್ಮೀ, 18ನೇ ವಾರ್ಡ್‌-ಕಂಬು, 19ನೇ ವಾರ್ಡ್‌- ಬಿ.ಕೆ.ಕಾಂತರಾಜು, 21ನೇ ವಾರ್ಡ್‌- ಚಲುವರಾಜು, 22ನೇ ವಾರ್ಡ್‌- ಸಿ.ಎಚ್.ಜಯಕುಮಾರ್‌ ಹಾಗೂ 23ನೇ ವಾರ್ಡ್‌ಗೆ ರಂಗಸ್ವಾಮಿ ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಸುಕನ್ಯಾ ಕಂಬು, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಸಿ.ಆರ್‌.ರಂಗಸ್ವಾಮಿ, ಮುಖಂಡರಾದ ಲಯನ್ಸ್‌ ಬಿ.ಎಸ್‌.ಸತೀಶ್‌, ಮೀಸೆ ರಂಗಸ್ವಾಮಿ, ಹೆಗ್ಗೂರು ಸತೀಶ್‌, ಬಿ.ಎನ್‌.ಕೃಷ್ಣಪ್ಪ, ರಾಜು, ಮಧು, ಸಾವಿತ್ರಿ ಇತರರು ಹಾಜರಿದ್ದರು.

ಕೆ.ಆರ್‌.ನಗರ ಪುರಸಭೆ: 23 ವಾರ್ಡ್‌ಗೂ ದಳ, ಕೈ, ಕಮಲ ಸ್ಪರ್ಧೆ

ಕೆ.ಆರ್‌.ನಗರ: ಪುರಸಭೆಯ 23 ವಾರ್ಡ್‌ಗಳಿಗೂ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಮಪತ್ರ ಸಲ್ಲಿಕೆಗೆ ಕಡೆ ದಿನವಾದ ಗುರುವಾರ ತಮ್ಮ ಹುರಿಯಾಳುಗಳಿಗೆ ಬಿ.ಫಾರಂ ವಿತರಿಸಿದವು.

ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದು, ವರಿಷ್ಠರು ಅವರನ್ನು ವಾಪಸ್‌ ತೆಗೆಸಲು ಕಸರತ್ತು ಮಾಡಬೇಕಾಗಿದೆ. ಬಿಜೆಪಿ ಇದೇ ಪ್ರಥಮ ಬಾರಿಗೆ ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿಗಳು: ಕಾಂಗ್ರೆಸ್‌ ಪಕ್ಷದಿಂದ 1ರಿಂದ 23ರವರೆಗಿನ ವಾರ್ಡ್‌ಗಳಿಗೆ ಅನುಕ್ರಮವಾಗಿ ಸೌಮ್ಯಾ ಆನಂದ್‌, ಕೋಳಿ ಪ್ರಕಾಶ್‌, ಹೇಮಂತ್‌ ಕುಮಾರ್‌, ಅಶ್ವಿ‌ನಿ ಪುಟ್ಟಸ್ವಾಮಿ, ಶಂಕರ್‌, ವಸಂತಮ್ಮ ಕೃಷ್ಣೇಗೌಡ, ಕೆ.ಎನ್‌.ಪ್ರಸನ್ನಕುಮಾರ್‌, ಶಿವಕುಮಾರ್‌, ಶಾರದ ನಾಗೇಶ್‌, ಜಯರಾಮು, ಕೆ.ಜಿ.ಸುಬ್ರಹ್ಮಣ್ಯ, ಶಂಕರ, ಸುಂದರೇಶ್‌, ನಳಿನಿ, ಅಂಬಿಕಾ ಮಹೇಶ್‌, ನಾಗರಾಜನಾಯಕ, ನಟರಾಜು, ಹಸೀನಾಬೇಗಂ, ಸೈಯದ್‌ ಸಿದ್ದಿಖ್‌, ಅಪ್ರೋಜ್‌ ಉನ್ನೀಸಾ, ಜಾಹೀದ್‌ ಪಾಷ, ಸೌಮ್ಯಾ ಲೋಕೇಶ್‌ ಮತ್ತು ಪೂರ್ಣಿಮಾ ಕಾಂತರಾಜು ಸ್ಪರ್ಧಿಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗಳು: ಜೆಡಿಎಸ್‌ನಿಂದ ನಾಗಮ್ಮ ಶ್ರೀನಿವಾಸಮೂರ್ತಿ, ಕೇಶವ, ಕೆ.ಎಲ್.ಜಗದೀಶ್‌, ಶ್ರುತಿ ಕೃಷ್ಣಮೂರ್ತಿ, ಮಾಗಾಳಿ, ರೇಖಾ ಉಮೇಶ್‌, ಸಂತೋಷ್‌ಗೌಡ, ಲಾರಿ ರವಿ, ಭಾಗ್ಯಲಕ್ಷ್ಮೀ ಸುಬ್ರಹ್ಮಣ್ಯ, ಸಿ.ಉಮೇಶ್‌, ಸಂಜೀವಕುಮಾರ್‌(ದೀಪು), ಕೆ.ವಿಜಯ್‌, ಬಿ.ಎಸ್‌.ತೋಂಟದಾರ್ಯ, ಮಂಜುಳ ಚಿಕ್ಕೕರು, ದೀಪಾ ಹರೀಶ್‌, ಕೆ.ಪಿ.ಪ್ರಭುಶಂಕರ್‌, ಮಂಜುನಾಥ್‌, ವಾಹೀದಾಬಾನು ಫಾರೂಕ್‌, ಸೈಯದ್‌ ಅಸ್ಲಾಂ, ತಾಸೀನಾಬೇಗಂ ಖಾಲಿದ್‌ಪಾಷ, ಆಕಾಶ್‌ಬಾಬು, ಅನಿತಾ ಮಂಜು ಹಾಗೂ ಸರೋಜ ಮಹದೇವ್‌ ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಗಳು: ಬಿಜೆಪಿಯಿಂದ ಕೆ.ವೀಣಾ, ಬಿ.ಆರ್‌.ಗೋಂದರಾಜು, ನಟೇಶ್‌, ಹೆಚ್.ಬಿ.ವನಜಾ, ರಂಗಸ್ವಾಮಿ, ಎನ್‌.ಪಿ.ರಂಜಿತಾ, ರುಕ್ಮಾಂಗದ, ಪುಟ್ಟಸ್ವಾಮಿ, ಸುನಂದಮ್ಮ, ಮುಕ್ಕೋಟಿ, ಶಿವಪ್ರಸಾದ್‌, ಉಮಾಶಂಕರ್‌, ಶಿವರಾಜು, ಪದ್ಮಾವತಿ, ಕೆ.ಬಿ.ವೀಣಾ, ಕೆ.ಬಿ.ಅರಂದ, ಜಯಲಕ್ಷ್ಮೀ, ಗುಲ್ಲಾಷ್‌ಬಾನು, ಅಕ್ಮಲ್ಪಾಷ, ರಿಜ್ವಾನಬಾನು, ಸುಮೀಉಲ್ಲಾಖಾನ್‌, ಎಂ.ಡಿ.ದೀಪಿಕಾ ಮತ್ತು ಪುಟ್ಟನವೀನ ಸ್ಫರ್ಧಿಸಿದ್ದಾರೆ.

ಸ್ಥಳೀಯ ನಾಯಕರಿಗೆ ಪ್ರತಿಷ್ಠೆ

ಕೆ.ಆರ್‌.ನಗರ ಪುರಸಭೆ ಚುನಾವಣೆಯಲ್ಲಿ ಮೇ 19 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಮೂರೂ ರಾಜಕೀಯ ಪಕ್ಷಗಳ ಜೊತೆಗೆ ಕಣದಲ್ಲಿ ಉಳಿದುಕೊಂಡ ಕೆಲವು ಅಭ್ಯರ್ಥಿಗಳು ಗೆಲುವಿಗಾಗಿ ಹೋರಾಟ ನಡೆಸಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಕಾಂಗ್ರೆಸ್‌ ಪರವಾಗಿ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಸದಸ್ಯ ಡಿ.ರವಿಶಂಕರ್‌, ಬಿಜೆಪಿ ಪಕ್ಷದ ಪರವಾಗಿ ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್‌, ಜಿಲ್ಲಾ ವಕ್ತಾರ ಎಚ್.ಪಿ.ಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸಗೌಡ ಸೇರಿದಂತೆ ಸ್ಥಳೀಯ ಮುಖಂಡರು ಪ್ರಚಾರ ನಡೆಸಲಿದ್ದಾರೆ. ಈ ಚುನಾವಣೆ ಸ್ಥಳೀಯ ನಾಯಕರಿಗೆ ಪ್ರತಿಷ್ಠೆಯಾಗಿದೆ,

 

Advertisement

Udayavani is now on Telegram. Click here to join our channel and stay updated with the latest news.

Next