Advertisement

ಬಿಡುಗಡೆಗೆ ರೆಡಿಯಾಗಿದೆ ‘ಪೆಪ್ಪೆರೆರೆ ಪೆರೆರೆರೆ’

10:40 PM Aug 21, 2019 | mahesh |

ನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶದೊಂದಿಗೆ ರೆಡಿಯಾದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಬಿಡುಗಡೆಯ ಮೂಡ್‌ನ‌ಲ್ಲಿದೆ. ಶೋಭರಾಜ್‌ ಪಾವೂರು ನಿರ್ದೇಶನದಲ್ಲಿ ನವೀನ್‌ ಡಿ. ಪಡೀಲ್, ಭೋಜರಾಜ್‌ ವಾಮಂಜೂರ್‌, ಅರವಿಂದ ಬೋಳಾರ್‌, ಜೆ.ಪಿ. ತೂಮಿನಾಡು, ಸತೀಶ್‌ ಬಂದಲೆ ಮುಂತಾದವರ ಜತೆಯಲ್ಲಿ ಶೋಭರಾಜ್‌ ಪಾವೂರು ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಪೆಪ್ಪೆರೆರೆ ಪೆರೆರೆರೆ ಎಂಬ ಭಿನ್ನ ಸಿನೆಮಾ ಕೋಸ್ಟಲ್ವುಡ್‌ನ‌ಲ್ಲಿ ಭಾರೀ ನಿರೀಕ್ಷೆಯ ಸದ್ದು ಮಾಡುತ್ತಿದೆ. ಸದ್ಯ ಎಲ್ಲಾ ಹಂತದ ಶೂಟಿಂಗ್‌ ಮುಗಿಸಿರುವ ಈ ಸಿನೆಮಾ ಹೆಚ್ಚಾಕಡಿಮೆ ಕೆಲವೇ ತಿಂಗಳ ಒಳಗೆ ತೆರೆಗೆ ಬರಲಿದೆ.

Advertisement

ಶೋಭರಾಜ್‌ ಅವರು ತುಳು ರಂಗಭೂಮಿಯಲ್ಲಿ ಅರಳಿದ ಪ್ರತಿಭೆ. ಬಳಿಕ ಸಿನೆಮಾ ಮತ್ತು ಕಿರುತೆರೆಯಲ್ಲಿ ಅವರು ಮಾಡಿರುವ ಸಾಧನೆ ಉಲ್ಲೇಖನೀಯ. ಈ ಹಿಂದೆ ‘ಏಸ’ ಎಂಬ ಸಿನೆಮಾದಲ್ಲಿ ದುಡಿದು ಅದರಲ್ಲೇ ತನ್ನ ಪ್ರತಿಭೆಯನ್ನು ತೋರಿಸಿದವರು. ಕಥೆ, ಸಂಭಾಷಣೆಯಲ್ಲೂ ಕೈಯಾಡಿಸಿದ್ದಾರೆ. ಏಸಕ್ಕೂ ಇವರದ್ದೇ ಕಥೆ. ಅದೊಂದು ಯಕ್ಷಗಾನ ಕಲಾವಿದನನ್ನು ಕೇಂದ್ರೀಕರಿಸಿ ಹೆಣೆದ ಕಥೆ. ಈ ಸಿನೆಮಾ ಸ್ಟಾರ್‌ ಮಾನ್ಯತೆಯನ್ನೂ ಪಡೆದಿತ್ತು.

ನಿಶಾನ್‌ ಮತ್ತು ವರುಣ್‌ ನಿರ್ಮಾಪಕರಾಗಿರುವ ಈ ಸಿನೆಮಾದ ಬಹುತೇಕ ಭಾಗದ ಚಿತ್ರೀಕರಣವು ಮಂಗಳೂರಿನಲ್ಲಿಯೇ ನಡೆದಿದೆ. ಶೋಭರಾಜ್‌ ಅವರು ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರು ಬಾಯಾರ್‌ ಸಂಗೀತದಲ್ಲಿ ಮೂಡಿ ಬಂದಿರುವ ನಾಲ್ಕು ಹಾಡುಗಳು ಈ ಸಿನೆಮಾದಲ್ಲಿವೆ. ಹಾಡುಗಳ ಸಾಹಿತ್ಯ ಶಶಿರಾಜ್‌ ಕಾವೂರು ಹಾಗೂ ಉಮೇಶ್‌ ಮಿಜಾರು ಅವರದ್ದು. ಹಾಡುಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಇದು ಪ್ರತಿಭೆಗಳಿಗೊಂದು ಹೊಸ ಅವಕಾಶ. ಇಲ್ಲಿರುವ ನಾಲ್ಕು ಪ್ರಮುಖ ಪಾತ್ರಧಾರಿಗಳು ಹೀರೋಗಳು. ಜತೆಗೆ ಚೈತ್ರಾ ಶೆಟ್ಟಿ ಮತ್ತು ಮೈತ್ರಿ ಕಶ್ಯಪ್‌ ಅವರದ್ದೂ ಮುಖ್ಯ ಪಾತ್ರವಿದೆ.

Advertisement

Udayavani is now on Telegram. Click here to join our channel and stay updated with the latest news.

Next