Advertisement

ರಿಲೀಸ್‌ಗೆ ರೆಡಿಯಾಗುತ್ತಿದ್ದಾಳೆ “ಪದ್ಮಾವತಿ’

08:34 PM Jun 05, 2019 | Lakshmi GovindaRaj |

ಕಳೆದ ವರ್ಷ ಬಾಲಿವುಡ್‌ನ‌ಲ್ಲಿ “ಪದ್ಮಾವತಿ’ ಚಿತ್ರ ಕೊನೆಗೆ “ಪದ್ಮಾವತ್‌’ ಹೆಸರಿನಲ್ಲಿ ಬಿಡುಗಡೆಯಾಗಿ ಕೊನೆಗೆ ಸೂಪರ್‌ ಹಿಟ್‌ ಆಗಿದ್ದು ನಿಮಗೆ ಗೊತ್ತಿರಬಹುದು. ಈಗ ಸ್ಯಾಂಡಲ್‌ವುಡ್‌ನ‌ಲ್ಲೂ “ಪದ್ಮಾವತಿ’ ಎನ್ನುವ ಹೆಸರಿನಲ್ಲಿ ಚಿತ್ರ ಬರುತ್ತಿದೆ. ಅಂದಹಾಗೆ, ಟೈಟಲ್‌ ಒಂದೇ ಥರ ಇದೆ ಅನ್ನೋದನ್ನ ಹೊರತುಪಡಿಸಿದರೆ, ಈ “ಪದ್ಮಾವತಿ’ಗೂ ಬಾಲಿವುಡ್‌ “ಪದ್ಮಾವತಿ’ಗೂ ಯಾವುದೇ ಸಂಬಂಧವಿಲ್ಲ.

Advertisement

ಸದ್ಯ ತನ್ನ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿ ಫ‌ಸ್ಟ್‌ ಕಾಪಿಯೊಂದಿಗೆ ಹೊರಬಂದಿರುವ ‘ಪದ್ಮಾವತಿ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು’ ಸರ್ಟಿಫಿಕೇಟ್‌ ನೀಡಿ ಬಿಡುಗಡೆಗೆ ಅಸ್ತು ಎಂದಿದೆ. “ರಾವ್‌ ಆ್ಯಂಡ್‌ ರಾವ್‌’ ಸಿನಿಮಾಸ್‌ ಬ್ಯಾನರ್‌ನಲ್ಲಿ ದಾಮೋದರ್‌ ರಾವ್‌, ನಾಮದೇವ ಭಟ್ಟರ್‌ ನಿರ್ಮಿಸುತ್ತಿರುವ “ಪದ್ಮಾವತಿ’ ಚಿತ್ರದಲ್ಲಿ ವಿಕ್ರಮ್‌ ಆರ್ಯ ಹಾಗೂ ದಾಮೋದರ್‌ ಪಾರಗೆ ಇಬ್ಬರು ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಉಳಿದಂತೆ ಸಾಕ್ಷಿ ಮೇಘನಾ, ರಾಘವ ಕಲಾಲ್‌, ನಭಿ ರಸುಲ್‌, ಸುರೇಶ್‌, ಸ್ವಾಮಿಗೌಡ, ಅಭಿಲಾಷ್‌, ಶರಣ್‌ ಗಿನ್‌ಕೇರಿ, ಶಿವಮೊಗ್ಗ ರಾಮಣ್ಣ, ಕೀರ್ತಿ ಸಿ.ಎನ್‌, ರಾಜೇಶ್ವರಿ ಪಾಂಡೆ, ಅರ್ಚನಾ ಶೆಟ್ಟಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕಥಾ ಹಂದರ ಹೊಂದಿರುವ “ಪದ್ಮಾವತಿ’ ಚಿತ್ರದಲ್ಲಿ ಇಂದಿನ ಜನರೇಶನ್‌ ಆಡಿಯನ್ಸ್‌ಗೆ ಇಷ್ಟವಾಗುವಂಥ ಪಕ್ಕಾ ಲವ್‌ ಸ್ಟೋರಿ ಕೂಡ ಇದ್ದು, ಮಿಥುನ್‌ ಚಂದ್ರಶೇಖರ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ.

“ಪದ್ಮಾವತಿ’ ಚಿತ್ರಕ್ಕೆ ಶೋಯಬ್‌ ಅಹಮ್ಮದ್‌ ಛಾಯಾಗ್ರಹಣ, ಈಶ್ವರ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ದಿನೇಶ್‌ ಕುಮಾರ್‌ ಸಂಗೀತವಿದೆ. ಚಿತ್ರಕ್ಕೆ ಪ್ರೇಮ್‌ ಸಾಯಿ ಸಾಹಿತ್ಯ, ಲತಾ ಎಸ್‌ ಕಥೆ ಮತ್ತು ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಹಾಡುಗಳಿಗೆ ತ್ರಿಭುವನ್‌ ನೃತ್ಯ ನಿರ್ದೇಶನವಿದ್ದು, ಥ್ರಿಲ್ಲರ್‌ ಮಂಜು ಸಾಹಸ ಸಂಯೋಜಿಸಿದ್ದಾರೆ. “ಪದ್ಮಾವತಿ’ ಚಿತ್ರ ಜುಲೈ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next