Advertisement
ಪಿಆರ್‌ಕೆ ಆಡಿಯೋ ಕಂಪೆನಿ ಮೂಲಕ ಸಂಚಿತ್ ಹೆಗ್ಡೆ ಹಾಡಿರುವ ನಾಗಾರ್ಜುನ್ ಶರ್ಮಾ ಬರೆದಿರುವ “ನಿಗೂಢ ನಿಗೂಢ’ ಎಂಬ ಹಾಡನ್ನು ಇಂದು ಸಂಜೆ ಲೋಕಾರ್ಪಣೆ ಮಾಡಲಾಗುತ್ತಿದೆ. ಈ ಚಿತ್ರದ ಆಡಿಯೋ ವಿಶೇಷತೆ ಬಗ್ಗೆ ಹೇಳುವ ನಿರ್ದೇಶಕ ಹೇಮಂತ್‌ರಾವ್, “ಪಿಆರ್‌ಕೆ ಬ್ಯಾನರ್‌ನ ಮೊದಲ ಚಿತ್ರದ ಹಾಡನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತಿದೆ. ಉಳಿದಂತೆ ಪ್ರತಿ ಸೋಮವಾರ ಒಂದೊಂದು ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
Related Articles
Advertisement
ಈ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಆ ದೇಶದ ನೂರು ಜನ ಸಂಗೀತಗಾರರ ಸ್ಪರ್ಶವಿದೆ ಎಂಬುದೇ ವಿಶೇಷ. ಮುಖ್ಯವಾಗಿ ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅದರಲ್ಲೂ ಎಮೋಷನ್ಸ್‌ಗೆ ಹೆಚ್ಚು ಜಾಗವಿದೆ. ಎಮೋಷನ್ಸ್ ಎಲ್ಲರನ್ನು ತಟ್ಟಬೇಕು. ಹಾಗಾಗಿ ಅಂತಹ ಹಿನ್ನೆಲೆ ಸಂಗೀತದ ಸ್ಪರ್ಶ ಬೇಕಿತ್ತು. ಪುನೀತ್ ಅವರ ಸಂಪೂರ್ಣ ಪ್ರೋತ್ಸಾಹ ಸಿಕ್ಕಿದ್ದರಿಂದಲೇ ಅದು ಸಾಧ್ಯವಾಗಿದೆ ಎನ್ನುತ್ತಾರೆ ನಿರ್ದೇಸಕ ಹೇಮಂತ್‌ರಾವ್.
ಅಂದಹಾಗೆ, “ಕವಲುದಾರಿ’ ತಡ ಆಯ್ತು ಎನ್ನುವ ಪ್ರಶ್ನೆ ಸಹಜವಾಗಿಯೇ ಕೇಳಿಬರುತ್ತಿದೆ. ಅದಕ್ಕೆ ಕಾರಣ, ಹಿನ್ನೆಲೆ ಸಂಗೀತ ಯಾಕೆಂದರೆ, ನೂರು ಮಂದಿ ಸಂಗೀತಗಾರರು ಪ್ರತಿ ದೃಶ್ಯ ವೀಕ್ಷಿಸಿ, ಅದಕ್ಕೆ ಸಂಗೀತ ಸಂಯೋಜಿಸುತ್ತಿದ್ದರು. ಅದು ಮೂರು ತಿಂಗಳ ಕೆಲಸ. ಹಾಗಾಗಿ ಲೇಟ್ ಆಗಿದೆ. ಶೀಘ್ರದಲ್ಲೇ “ಕವಲುದಾರಿ’ ಬಿಡುಗಡೆ ಆಗಲಿದೆ ಎಂಬುದು ಅವರ ಹೇಳಿಕೆ.
ಪಿಆರ್‌ಕೆಯಿಂದ ಈ ವರ್ಷ ಮೂರು ಸಿನಿಮಾ: ಪುನೀತ್‌ರಾಜಕುಮಾರ್ ಅವರು “ಪಿಆರ್‌ಕೆ’ ಎಂಬ ತಮ್ಮದೇ ಬ್ಯಾನರ್ ಹುಟ್ಟುಹಾಕಿ, ಆ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದಿರುವುದು ನಿಮಗೆ ಗೊತ್ತೇ ಇದೆ. ಈಗಾಗಲೇ ಆ ಬ್ಯಾನರ್‌ನಡಿ ನಾಲ್ಕು ಸಿನಿಮಾಗಳು ನಡೆಯುತ್ತಿದೆ. “ಕವಲುದಾರಿ’, “ಮಾಯಾಬಾಜರ್’, ರಘು ಸಮರ್ಥ್ ಹಾಗೂ ಪನ್ನಗಾಭರಣ ನಿರ್ದೇಶನದ ತಲಾ ಒಂದೊಂದು ಚಿತ್ರಗಳು ನಡೆಯುತ್ತಿವೆ. ಪಿಆರ್‌ಕೆ ಬ್ಯಾನರ್‌ನಲ್ಲಿ ಮೊದಲು ಆರಂಭವಾಗಿದ್ದು “ಕವಲುದಾರಿ’.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ತಡವಾಗಿದೆ. “ಮಾಯಾ ಬಜಾರ್’ ಕೂಡಾ ಬಹುತೇಕ ಮುಗಿದಿದೆ. ತಮ್ಮ ಹೋಂ ಬ್ಯಾನರ್ ಬಗ್ಗೆ ಮಾತನಾಡುವ ಪುನೀತ್, “ಸದ್ಯ ನಮ್ಮ ಬ್ಯಾನರ್‌ನಲ್ಲಿ ನಾಲ್ಕು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಈ ವರ್ಷ ಮೂರು ಸಿನಿಮಾಗಳು ತೆರೆಕಾಣುವ ಸಾಧ್ಯತೆ ಇದೆ. ಎಲ್ಲಾ ಕಥೆಗಳು ಹೊಸ ಬಗೆಯಿಂದ ಕೂಡಿದೆ. ನಾನಂತೂ ಈ ಸಿನಿಮಾಗಳ ಬಗ್ಗೆ ಎಕ್ಸೆ„ಟ್ ಆಗಿದ್ದೇನೆ’ ಎಂದರು.