Advertisement

ಮಣಿಪುರ ಕುರಿತು ಸದನದಲ್ಲಿ ಕೋಲಾಹಲ; ಚರ್ಚೆಗೆ ಸಿದ್ಧ, ಆದರೆ..: ಲೋಕಸಭೆಯಲ್ಲಿ ಶಾ

06:13 PM Jul 24, 2023 | Team Udayavani |

ಹೊಸದಿಲ್ಲಿ:ಮಾನ್ಸೂನ್ ಅಧಿವೇಶನದ ಮೂರನೇ ದಿನ ಸಂಸತ್ತಿನ ಉಭಯ ಸದನಗಳಲ್ಲಿ ಸೋಮವಾರ (ಜುಲೈ 24) ಮಣಿಪುರ ಹಿಂಸಾಚಾರದ ಕುರಿತು ಕೋಲಾಹಲ ಮುಂದುವರೆದಿದೆ. ಸದನದಲ್ಲಿ ಪ್ರಧಾನಿ ಮೋದಿಯವರ ಹೇಳಿಕೆ ಮತ್ತು ಈ ವಿಷಯದ ಬಗ್ಗೆ ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.

Advertisement

ಮಣಿಪುರ ಹಿಂಸಾಚಾರ ವಿಚಾರದ ಕುರಿತು ಸದನದಲ್ಲಿ ಚರ್ಚೆಗೆ ಸಿದ್ಧ, ಆದರೆ ಪ್ರತಿಪಕ್ಷಗಳು ಚರ್ಚೆಗೆ ಏಕೆ ಅವಕಾಶ ನೀಡುವುದಿಲ್ಲ ಎಂದು ನನಗೆ ತಿಳಿದಿಲ್ಲ. ಸೂಕ್ಷ್ಮ ವಿಷಯದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ನಾನು ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸುತ್ತೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಮಣಿಪುರದಂತಹ ಘಟನೆಗೆ ಸಂಬಂಧಿಸಿದಂತೆ ನಡೆಯಬೇಕಾದ ಚರ್ಚೆಯ ಬಗ್ಗೆ ಪ್ರತಿಪಕ್ಷಗಳು ಗಂಭೀರವಾಗಿಲ್ಲ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.

ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ಪ್ರತಿಪಕ್ಷಗಳು ಓಡಿ ಹೋಗುತ್ತಿವೆ ಎಂದು ಆರೋಪಿಸಿದ್ದಾರೆ.

ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದೇಶದ ಗೃಹ ಸಚಿವರಾಗಿ ಎಲ್ಲಾ ರೀತಿಯ ಚರ್ಚೆಗೆ ಸಿದ್ಧ ಎಂದು ಪದೇ ಪದೇ ಹೇಳುತ್ತಿದ್ದಾರೆ ಎನ್ನುವುದನ್ನು ನಾನು ದೇಶದ ಎಲ್ಲಾ ಜನರ ಗಮನಕ್ಕೆ ತರಲು ಬಯಸುತ್ತೇನೆ. ಮಣಿಪುರದ ಆಂತರಿಕ ಭದ್ರತೆ ಕುರಿತು ಉಭಯ ಸದನಗಳಲ್ಲಿ ಚರ್ಚೆಗೆ ಗೃಹ ಸಚಿವಾಲಯ ಸಿದ್ಧವಿದೆ ಎಂದು ಸಚಿವೆ ಹೇಳಿದರು.

Advertisement

ತುಷ್ಟೀಕರಣ vs ಸಂತುಷ್ಟೀಕರಣ

ಬಿಜೆಪಿ ತುಷ್ಟೀಕರಣ vs ಸಂತುಷ್ಟೀಕರಣ ಎಂದು ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತ್ರ ಮಾತನಾಡುತ್ತದೆ. ಅವರಿಗೆ ರಾಜಸ್ಥಾನ, ಬಂಗಾಳ ಮತ್ತು ಬಿಹಾರದ ಮಹಿಳೆಯರ ಬಗ್ಗೆ ಸಹಾನುಭೂತಿ ಇಲ್ಲ!. ಪ್ರಧಾನಿ ಮೋದಿಯವರು ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ಈ ಘಟನೆ ದೇಶದ ಯಾವುದೇ ರಾಜ್ಯದಲ್ಲಿರಬಹುದು. ಅವರು ಯಾರ ಮೇಲೂ ತಾರತಮ್ಯ ಮಾಡುವುದಿಲ್ಲ” ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದೆ.

”ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದರು- ‘ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು! ಎಂದು, ಮೋದಿ ಸರ್ಕಾರವು ‘ಸಬ್ಕಾ ಸಾಥ್-ಸಬ್ಕಾ ವಿಕಾಸ್’ ಅನ್ನು ಮಂತ್ರ ಮಾಡುವ ಮೂಲಕ ಸಮಾಜದ ಪ್ರತಿಯೊಂದು ವರ್ಗವನ್ನು ಅಭಿವೃದ್ಧಿಪಡಿಸಿದೆ” ಎಂದು ಬಿಜೆಪಿ ಇನ್ನೊಂದು ಟ್ವೀಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next